ಆಧ್ಯಾತ್ಮ

ಆಂಜನೇಯ ಸ್ವಾಮಿಯ ಮೊದಲ ಅವತಾರ, ವೃಶ ಕಪಿ ಅವತಾರದ ಬಗ್ಗೆ ನಿಮಗೆ ಗೊತ್ತಾ..?ತಿಳಿಯಲು ಮುಂದೆ ಓದಿ…

By admin

August 04, 2017

ನಮಗೆ ಗೊತ್ತಿರುವ ಹಾಗೆ ಶ್ರೀ ರಾಮ ಭಕ್ತ ಹನುಮಂತನ ಜನ್ಮ ವೃತ್ತಾಂತ, ಹನುಮಂತ ದೇವರು, ಭಗವಾನ್ ಶಿವನ ಅಂಶದ ಅವತಾರ ಇವೆಲ್ಲವೂ ನಮಗೆ ಗೊತ್ತಿದೆ. ಆದರೆ ಗೊತ್ತಿಲ್ಲದ ವಿಷಯ ಏನೆಂದರೆ ಹನುಮಂತನ ಈ ಅವತಾರಕ್ಕೆ ಮುಂಚೆ, ಎಷ್ಟೋ ಯುಗಗಳ ಹಿಂದಯೇ ಹನುಮಂತನ ಮತ್ತೊಂದು ಅವತಾರವಾಗಿತ್ತು. ಆ ಅವತಾರವೇ  ವೃಶ ಕಪಿ ಅವತಾರ.

ಈ ಅವತಾರದ ಬಗ್ಗೆ ಸ್ವತಹ ಶ್ರೀ ರಾಮನೇ ತನ್ನ ಭಕ್ತ ಆಂಜನೇಯನಿಗೆ ತಿಳಿಸುತ್ತಾನೆ. ಕಾರಣ ಶ್ರೀರಾಮನ ಅವತಾರದ ಸಮಯ ಭೂಲೋಕದಲ್ಲಿ ಮುಗಿದು, ತಮ್ಮ ವೈಕುಂಟ ಧಾಮಕ್ಕೆ ತೆರಳುವ ಸಮಯ ಸನಿಹಿತವಾಗಿರುತ್ತದೆ. ಇದನ್ನು ತನ್ನ ಪರಮ ಭಕ್ತ ಹನುಮಂತನಿಗೆ ಹೇಗೆ ತಿಳಿಸುವ ಯೋಚನೆಯಲ್ಲಿ ಶ್ರೀ ರಾಮನು ಹನುಮಂತನ ಅಸ್ಥಿತ್ವದ ಬಗ್ಗೆ ತಿಳಿಸಲು, ಹನುಮಂತನನ್ನು ಗೋದಾವರಿ ನದಿ ತೀರಕ್ಕೆ  ಕರೆದುಕೊಂಡು ಹೋಗುತ್ತಾನೆ.

ಆ ಸ್ಥಳಕ್ಕೆ ತಲುಪಿದ ನಂತರ ಹನುಮಂತನಿಗೆ ಒಂದು ವಿಚಿತ್ರವಾದ ಅಭಾಸವಾಗುತ್ತದೆ. ಅದೇನಂದರೆ ಈ ಜಾಗಕ್ಕೆ ಮುಂಚೆ ಬಂದು ಹೋಗಿರುವ ಹಾಗೆ ಹಾಗೂ ಪದೇ ಪದೇ ತನ್ನಂತಯೇ ಇರುವ ಒಂದು ಚಿತ್ರ ತನ್ನ ಮುಂದೆ ಹಾದು ಹೋಗುತ್ತಿರುತ್ತದೆ.  ಇದರಿಂದ ವಿಚಲಿತನಾದ ಹನುಮಂತನು ಇದರ ಬಗ್ಗೆ ರಾಮನಲ್ಲಿ ಕೇಳಲಾಗಿ, ಆಗ ಶ್ರೀ ರಾಮನು ಹನುಮಂತನಿಗೆ ನಿನಗೆ ಆಗುತ್ತಿರುವ ಅನುಭವವು ನಿಜವಾಗಿದೆ. ಇದರ ಇಂದೇ ಒಂದು ಕಥೆ ಇದೆ. ಅದೇ ವೃಶ ಕಪಿ ಮಹಾ ಶಕ್ತಿಯ ಅವತಾರದ ಕಥೆ.

ಅನೇಕ ಯುಗಗಳ ಹಿಂದೆ ದೈತ್ಯ ಹಿರನ್ಯಕನೆಂಬ ರಾಜನಿದ್ದು ಅವನಿಗೆ ಮಹಾ ಶನಿ ಎಂಬ ಮಗನಿರುತ್ತಾನೆ. ಅವನು ಸ್ವತಹ ತಪಸ್ವಿಯಾಗಿದ್ದರೂ ದೈತ್ಯನಾಗಿರುತ್ತಾನೆ. ತನ್ನ ಮಹಾ ಶಕ್ತಿಯಿಂದ ಮಾನವ ದಾನವರನ್ನು ಸೋಲಿಸಿ ಪಾತಾಳ ಲೋಕದ ರಾಜನಾಗಿರುತ್ತಾನೆ.

ಇಷ್ಟಕ್ಕೆ ತೃಪ್ತನಾಗದ ಮಹಾ ಶನಿಯು ದೇವಲೋಕದ ದಾಳಿ ಮಾಡಲು ಸ್ವರ್ಗದ ಕಡೆ ಒಬ್ಬನೇಹೋಗುತ್ತಾನೆ.

ಇದನ್ನು ತಡೆದ ದೇವತೆಗಳನ್ನು ಸೋಲಿಸಿ ಇಂದ್ರನನ್ನು ತನ್ನ ಜಡೆಗಳಿಂದ  ಬಂದಿಸಿ, ಪಾತಾಳ ಲೋಕದ ಕಾಲ ಕೋಟಿ ಎಂಬಲ್ಲಿ ಬಂದಿಸಿ ಇಡುತ್ತಾನೆ.

ನಂತರ ಕೆಲವು ಶರುತ್ತಗಳ ಮೇಲೆ ಬಿಡುಗಡೆ ಮಾಡುತ್ತಾನೆ. ಇಂದ್ರನನ್ನು ಬಿಡುಗಡೆ ಮಾಡಿದ್ರೂ, ಸಹ ಇಂದ್ರ ಮತ್ತು ಸ್ವರ್ಗಗಳು ದೈತ್ಯ ಮಹಾ ಶನಿಯ ಹಿಡಿತದಲ್ಲೇ ಇರುತ್ತದೆ. ಹೀಗಾಗಿ ಇಂದ್ರನಿಗೆ ಬಿಡುಗಡೆಯಾದ್ರು ಸ್ವತಂತ್ರವಿರುವುದಿಲ್ಲ.

ಹೀಗಾಗಿ ಇದರ ಬಗ್ಗೆ ಯೋಚಿಸಿದ ಇಂದ್ರನ ಪತ್ನಿ ಶಚಿ ದೇವಿಯು ಬ್ರಹ್ಮದೇವರಲ್ಲಿ ಪ್ರಾರ್ಥಿಸಲಾಗಿ,ಸೃಷ್ಟಿ ಕರ್ತ ಬ್ರಹ್ಮನು ದೈತ್ಯ ಮಹಾ ಶನಿಗೆ ಯಾವುದೇ ದೇವತೆಗಳಿಂದ ಸಾವಿಲ್ಲ. ಶಿವ ಮತ್ತು ವಿಷ್ಣು ದೇವರ ಅಂಶದಿಂದ ಜನಿಸಿದ ಮಹಾ ಶಕ್ತಿಯಿಂದ ಮಾತ್ರ ಕೊಲ್ಲಲು ಸಾಧ್ಯ ಎಂದು ತಿಳಿಸುತ್ತಾರೆ.

ನಂತರ ಇಂದ್ರ ಮತ್ತು ಶಚಿ ದೇವಿಯು ಗೋದಾವರಿ ನದಿ ತೀರಕ್ಕೆ ಬಂದು  ಹರಿ ಮತ್ತು ಹರರನ್ನು ಕುರಿತು ತಪಸ್ಸು ಮಾಡುತ್ತಾರೆ. ಅವರ ತಪಸ್ಸಿನ ಫಲವಾಗಿ ಈಶ್ವರ ಮತ್ತ ನಾರಾಯಣರು ಪ್ರತ್ಯಕ್ಷರಾಗಿ ವರ ಕೇಳುವಂತೆ ಇಂದ್ರ ಮತ್ತು ಶಚಿದೇವಿಗೆ ಹೇಳುತ್ತಾರೆ.

ಇಂದ್ರ ಮತ್ತು ಶಚಿದೇವಿಯು ಹರಿ ಮತ್ತು ಹರರಲ್ಲಿ ದೈತ್ಯ ಮಹಾ ಶನಿಯನ್ನು ಕೊಂದು ಲೋಕವನ್ನು ಕಾಪಾಡುವಂತೆ ಕೇಳಿಕೊಳ್ಳುತ್ತಾರೆ.

 ಈ ಚಿತ್ರ ಹರಿ ಮತ್ತು ಹರ ಅಂಶದ ವೃಶ ಕಪಿ ಅವತಾರದ ರೂಪ 

ಅವರ ಈ ಬೇಡಿಕೆಗೆ ತಥಾಸ್ತು ಎಂದ ಶಿವ ಮತ್ತು ನಾರಾಯಣರಿಂದ ಜ್ಯೋತಿಗಳು ಪ್ರಕಟಗೊಂಡು ಎರಡು ಜ್ಯೋತಿಗಳು ಸಂಗಮವಾಗಿರುವ ನದಿಯಲ್ಲಿ ಸೇರುತ್ತವೆ. ಆಗ ಹರೀ ಹರರ ಅಂಶಗಳಿಂದ ಒಂದು ಮಹಾ ಶಕ್ತಿಯ ಉದ್ಭವವಾಗುತ್ತದೆ. ಆ ಮಹಾಶಕ್ತಿಯು ಸ್ವತಹ ಹನುಮಂತನ ರೂಪದಂತಯೇ ಇದ್ದು ಅರ್ಧ ಶಿವನ ರೂಪ ಮತ್ತರ್ಧ ನಾರಾಯಣ ರೂಪ ಆಗಿರುತ್ತದೆ. ಈ ಅವತಾರವೇ ವೃಶ ಕಪಿ ಅವತಾರ.

ಇಂದ್ರ ಮತ್ತು ಶಚಿದೇವಿಯು ವೃಶ ಕಪಿ ದೇವರಲ್ಲಿ ಪ್ರಾರ್ಥಿಸಿ ದೈತ್ಯ ಮಹಾ ಶನಿಯಿಂದ ಈ ಲೋಕಕ್ಕೆ ಮುಕ್ತಿ ದೊರಕಿಸುಕೊಡುವಂತೆ ಕೇಳಿಕೊಳ್ಳುತ್ತಾರೆ.

ವೃಶ ಕಪಿ ಅವತಾರ

ಇವರ ಪ್ರಾರ್ಥನೆಗೆ ಪ್ರಸನ್ನನಾದ ವೃಶ ಕಪಿಯು ಒಂದೇ ಕ್ಷಣಕ್ಕೆ ಪಾತಾಳ ಲೋಕಕ್ಕೆ ಜಿಗಿದು ದೈತ್ಯ ಮಹಾ ಶನಿ ಮತ್ತು ಅವನ ಸೈನ್ಯವನ್ನು ಸಂಹಾರ ಮಾಡುತ್ತಾನೆ.ಹಾಗಾಗಿ ಈ ನದಿಗೆ ವೃಶ ಕಪಿ ತೀರ್ಥ ಎಂಬ ಹೆಸರು ಬಂದಿದೆ ಎಂದು ಹಾಗೂ ಅದು ಹನುಮಂತನ ಮೊದಲ ಅವತಾರವೆಂದು ಶ್ರೀರಾಮನು ತನ್ನ ಪರಮ ಭಕ್ತ ಆಂಜನೇಯನಿಗೆ ತಿಳಿಸುತ್ತಾನೆ.

ಜೈ ಶ್ರೀ ರಾಮ್…

ಜೈ ಹನುಮಾನ್…