ಸಿನಿಮಾ

ಅರ್ಜುನ್ ಸರ್ಜಾ ಶ್ರುತಿ ಹರಿಹರನ್ ಮೀಟೂ ಪ್ರಕರಣಕ್ಕೆ ಈಗ ರಾಜಕೀಯ ಪ್ರವೇಶ..!

By admin

November 05, 2018

ನಟಿ ಶ್ರುತಿ ಹರಿಹರನ್ ನಟ ಅರ್ಜುನ್ ಸರ್ಜಾ ಮೇಲೆ ಮಾಡಿದ್ದ ಲೈಂಗಿಕ ದೌರ್ಜನ್ಯದ ಆರೋಪದ ಮೇಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ಅರ್ಜುನ್ ಸರ್ಜಾ ಅವರು ಇಂದು ವಿಚಾರಣೆಗೆ ಹಾಜರಾಗಿದ್ದು, ಇದೀಗ ಈ ಪ್ರಕರಣಕ್ಕೆ ರಾಜಕೀಯ ಪ್ರವೇಶ ಕೂಡ ಆಗಿದೆ. ನಟ ಅರ್ಜುನ್ ಸರ್ಜಾ ಪೋಲಿಸ್ ವಿಚಾರಣೆ ವೇಳೆ ಬಿಜೆಪಿಯ ತೇಜಸ್ವಿನಿ ರಮೇಶ್ ಕೂಡ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ಅರ್ಜುನ್ ಸರ್ಜಾ ತಂದೆಯವರು ಮೂಲತಃ ಆರ್‍ಎಸ್‍ಎಸ್ ನವರಾಗಿದ್ದು ಎಡಪಂಥಿಯರು ಸರ್ಜಾ ಮೂಲಕ ಮೋದಿಯನ್ನು ಟಾರ್ಗೆಟ್ ಮಾಡಿದ್ದಾರೆ ಎಂಬ ವಾದವಿದೆ.ಮತ್ತೊಂದೆಡೆ ಹನುಮನ ಭಕ್ತನಾಗಿರುವ ಅರ್ಜುನ್ ಸರ್ಜಾ ಚೆನ್ನೈನಲ್ಲಿ ಆಂಜನೇಯನ ಬೃಹತ್ ಪ್ರತಿಮೆ ಪ್ರತಿಷ್ಠಾಪಿಸುತ್ತಿದ್ದಾರೆ. ತಮಿಳುನಾಡಿನ ಹಲವೆಡೆ ಗೋಶಾಲೆ ದತ್ತು ಪಡೆದಿದ್ದಾರೆ. ಅವರ ಹುಟ್ಟುಹಬ್ಬಕ್ಕೆ ಮಕ್ಕಳು ಗೋವನ್ನು ಗಿಫ್ಟಾಗಿ ಕೊಟ್ಟಿದ್ದರು.

ಎಡಪಂಥಿಯರು ಶ್ರುತಿ ಹರಿಹರನ್ ಬೆನ್ನಿಗೆ ನಿಂತಿದ್ದಾರೆ ಎಂಬುದಕ್ಕೆ ಪ್ರಕಾಶ್ ರೈ, ಚೇತನ್, ಕವಿತಾ ಲಂಕೇಶ್ ಎಲ್ಲರೂ ಅವರ ಜೋತೆಗಿರುವುದೇ ಕಾರಣ. ಏಕೆಂದರೆ ಇವರೆಲ್ಲರೂ ಮೋದಿ ವಿರುದ್ದವೇ ಮಾತನಾಡುತ್ತಾರೆ ಎಂಬುದೇ ಇದಕ್ಕೆ ಕಾರಣ. ಹಾಗಾಗಿ ಇವರೆಲ್ಲರು ಸೇರಿಕೊಂಡು ನಟ ಅರ್ಜುನ್ ಸರ್ಜಾ ವಿರುದ್ಧ ಷಡ್ಯಂತ್ರ ರೂಪಿಸಿದ್ದಾರೆ ಎಂದು ಬಿಜೆಪಿಯ ತೇಜಸ್ವಿನಿ ರಮೇಶ್ ಪೊಲೀಸರಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಪೊಲೀಸರು ನಟಿ ಶ್ರುತಿ ಹರಿಹರನ್ ಮಾಡಿರುವ ಆರೋಪದ ಕುರಿತು ಪೊಲೀಸರು ೫೦ ಪ್ರಶ್ನೆಗಳನ್ನು ಕೇಳಿದ್ದಾರೆ ಎನ್ನಲಾಗಿದೆ.ಈಗಾಗಲೇ ವಿಸ್ಮಯ ಸಿನಿಮಾದ ಸಹ ನಿರ್ದೇಶಕಿ ಮೋನಿಕಾ, ನಿರ್ದೇಶಕ ಮತ್ತು ಶ್ರುತಿ ಆಪ್ತ ಸಹಾಯಕ ಕಿರಣ್ ಇದರ ಬಗ್ಗೆ ಪೊಲೀಸರಲ್ಲಿ ಹೇಳಿಕೆ ಕೊಟ್ಟಿದ್ದಾರೆ.