ಸುದ್ದಿ

ಅನ್ನದಾತನಿಗೆ ಬಂಪರ್ ಆಫರ್!ಪ್ರತೀ ರೈತನ ಅಕೌಂಟ್’ಗೆ ಬೀಳಲಿದೆ 10,000.!ಏನಿದು ಯೋಜನೆ ಮುಂದೆ ಓದಿ…

By admin

February 16, 2018

ಮುಖ್ಯಮಂತ್ರಿ ಸಿದ್ದರಾಮಯ್ಯನವರು 2018-19ನೇ ಸಾಲಿನ ಬಜೆಟ್ ಮಂಡಿಸಿದ್ದು,ಹಲವಾರು ಹೊಸ ಯೋಜನೆಗಳನ್ನು ಪ್ರಕಟಿಸಿದ್ದಾರೆ.ಇದರಲ್ಲಿ ರೈತರಿಗೂ ಹಲವಾರು ಯೋಜನೆಗಳನ್ನು ಪ್ರಕಟಿಸಿದ್ದು,ಕೃಷಿಗೆ ಹೆಚ್ಚು ಮಾನ್ಯತೆ ನೀಡಿದ್ದಾರೆ.

ಹೌದು,ಕೃಷಿಗಾಗಿ ಅತಿ ಹೆಚ್ಚು ಪಾಲನ್ನು ಈ ಬಜೆಟ್ನಲ್ಲಿ ಇಟ್ಟಿದ್ದು, ಪ್ರತಿಯೊಬ್ಬ ರೈತನ ಖಾತೆಗೆ  10,000ರೂಗಳನ್ನು ನೇರವಾಗಿ ವರ್ಗಾಯಿಸುವ ಯೋಜನೆಯೊಂದನ್ನು ಪ್ರಕಟಿಸಿದ್ದಾರೆ.

ಯಾವ ರೀತಿ..?ಏನಿದು ಯೋಜನೆ…

ಸಿದ್ದರಾಮಯ್ಯನವರು ಪ್ರಕಟಿಸಿರುವ 2018-19ಸಾಲಿನ ಬಜೆಟ್ನ ಈ ಯೋಜನೆಯಲ್ಲಿ, ಪ್ರತಿವರ್ಷ ಪ್ರತಿರೈತನಿಗೆ, ತಲಾ ಒಂದು ಎಕರೆಗೆ 5000ರೂ ನಂತೆ ಗರಿಷ್ಟ 10,000 ರೂಪಾಯಿಗಳನ್ನು ನೇರವಾಗಿ ರೈತನ ಖಾತೆಗೆ ತಲುಪುವಂತೆ ಮಾಡಲಿದ್ದಾರೆ.

ಈ ಯೋಜನೆ ಮಳೆಯನ್ನು ಆಶ್ರಯಿಸಿ ಯಾರು ವ್ಯವಸಾಯ ಮಾಡುತ್ತಾರೋ ಅವರಿಗೆ ಅನ್ವಯಿಸಲಿದೆ, ಮತ್ತು ಈ ಯೋಜನೆಯ ಪ್ರಯೋಜನವನ್ನು  70ಲಕ್ಷ ರೈತರು ಪಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.