ಸಂಬಂಧ

ಅಣ್ಣನ ಕೈಯಿಂದ ತಾಳಿ ಕಿತ್ಕೊಂಡು ವಧುವಿಗೆ ಕಟ್ಟಿದ ತಮ್ಮ..!ಮುಂದೆ ಓದಿ ಶಾಕ್ ಆಗ್ತೀರಾ…

10720

ಮದುವೆ ನಿಶ್ಚಯವಾದ ಬಳಿಕ, ವಧು- ವರರು ಮಂಟಪಕ್ಕೆ ಬರಲಾರದೆ , ಊಟದ ವಿಚಾರವಾಗಿ, ಅಥವಾ  ಮಂಟಪದಲ್ಲಿಯೇ ಮುರಿದ ಮದುವೆಗಳು, ಹೀಗೆ ಮದುವೆ ನಿಂತು ಹೋದ ಅನೇಕ ಘಟನೆಗಳು ನಡೆದಿರುವುದನ್ನು ಕೇಳಿರ್ತೀರಿ.

ಆದ್ರೆ ವಿಚಿತ್ರ ಎಂದರೆ  ಮಂಟಪದಲ್ಲಿಯೇ ಅಣ್ಣನ ತಾಳಿ ಕಟ್ಟಬೇಕಾದ ವಧುವಿಗೆ, ತಮ್ಮ ತಾಳಿ ಕಟ್ಟಿದ ಅಚ್ಚರಿಯ ಘಟನೆಯೊಂದು ತಮಿಳುನಾಡಿನ ವೆಲ್ಲೂರುನಲ್ಲಿ ನಡೆದಿದೆ.

ಹೌದು, ಎಲ್ಲಿ ಅಂತಿರಾ- ವೆಲ್ಲೂರು ಸಮೀಪದ ತಿರುಪತ್ತೂರಿನ ಸೆಲ್ಲಾರ್ ಪೇಟೆಯ ಇಲವಂಪಟ್ಟಿಯ ಮುರುಗನ್ ದೇವಾಲಯದಲ್ಲಿ ನಡೆಯುವ ಶುಭಕಾರ್ಯಕ್ಕೆ ಬಂಧು-ಬಾಂಧವರೆಲ್ಲಾ ಸೇರಿದ್ದರು. ವರ ಇನ್ನೇನು ಕೆಲವೇ ನಿಮಿಷಗಳಲ್ಲಿ ವಧುವಿಗೆ ತಾಳಿ ಕಟ್ಟಲು ತಯಾರಾಗಿದ್ದನು. ಅಂತೆಯೇ ವಧುವರರನ್ನು ಹಸೆಮಣೆ ಮೇಲೆ ಕೂರಿಸಿ ಪುರೋಹಿತರು ವೇದ ಮಂತ್ರ ಉಚ್ಚರಿಸುತ್ತಿದ್ದರು.

ಸಿನಿಮೀಯ ರೀತಿಯಲ್ಲಿ ನಡೆಯಿತು ಮದುವೆ!                                                                                  

ತದನಂತರ ಬಳಿಕ ವರನ ಕೈಯಲ್ಲಿ ತಾಳಿ ಕೊಟ್ಟು ವಧುವಿನ ಕೊರಳಿಗೆ ಕಟ್ಟುವಂತೆ ಸೂಚಿಸಿದ್ರು. ಹೀಗಾಗಿ ಮದುಮಗ ತಾಳಿ ಕಟ್ಟಲು ವಧುವಿನ ಬಳಿ ಹೋಗುತ್ತಿದ್ದಂತೆಯೇ ಅಲ್ಲೇ ಇದ್ದ ಮದುಮಗನ ತಮ್ಮ ಅಣ್ಣನ ಸೈಡಿಗೆಳೆದು ತಾಳಿ ಕಸಿದುಕೊಂಡು ತಾನೇ ವಧುವಿಗೆ ತಾಳಿ ಕಟ್ಟಿದ್ದಾನೆ.

ಅಣ್ಣ ಮದುವೆಯಾಗಬೇಕಿದ್ದ ಯುವತಿಗೆ ಹೀಗೆ ತಮ್ಮ ತಾಳಿ ಕಟ್ಟಿದ್ದರಿಂದ ಅಲ್ಲಿದ್ದವರೆಲ್ಲಾ ಒಂದು ಬಾರಿ ಅವಕ್ಕಾದ್ರು. ಆದ್ರೆ ಈ ಘಟನೆಯ ಅಸಲಿ ವಿಷಯವೇನೆಂದರೆ ವರನ ತಮ್ಮ ಹಾಗೂ ವಧು ಮೊದಲೇ ಪ್ರೀತಿಸಿದ್ದರು ಎಂಬ ವಿಷಯ ಗೊತ್ತಾಗಿದೆ.

ಆದ್ರೆ ಈ ವಿಚಾರ ಮನೆಯವರಿಗೆ ಗೊತ್ತಿರಲಿಲ್ಲ. ಇತ್ತ ಅಣ್ಣ ಅದೇ ಯುವತಿ ಜೊತೆ ಮದುವೆ ನಿಶ್ಚಯ ಮಾಡಿಕೊಂಡಿದ್ದ. ತಾನು ಪ್ರೀತಿಸಿದ ಯುವತಿ ಅಣ್ಣನ ಮಡದಿಯಾಗುವುದನ್ನು ಸಹಿಸಲಾರದ ತಮ್ಮ ಅಣ್ಣನನ್ನು ತಳ್ಳಿ ತಾಳಿ ಕಸಿದುಕೊಂಡು ತಾನೇ ತಾಳಿ ಕಟ್ಟಿದ್ದಾನೆ.

ಈ ಮದುವೆಗೆ ಕೊನೆಗೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಮದುವೆಯಾಗಲು ಬಂದಿದ್ದ ವರ ಮಾತ್ರ ಕಣ್ಣೀರುಡುತ್ತಾ ಮಂಟಪದಿಂದ ಹೊರನಡೆದಿದ್ದಾನೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ