ಎಲ್ಲರಿಗು ಗೊತ್ತಿರುವಂತೆ ನಮ್ಮ ಸಂಸ್ಕೃತಿಯ ಪ್ರಕಾರ ಮದುವೆ ಆಗುವ ಹುಡುಗಿ ಹುಡುಗನಿಗಿಂತ ಚಿಕ್ಕವಳಿರಬೇಕು. ಆದರೆ ಇತ್ತೀಚಿಗೆ ನಡೆದ ರಿಸೆರ್ಚ್ ನ ಪ್ರಕಾರ ಹುಡುಗಿಯರು ತಮಗಿಂತ ಚಿಕ್ಕವರ ಜೊತೆ ಡೇಟಿಂಗ್ ಮಾಡಲು ಇಷ್ಟ ಪಡ್ತಾರಂತೆ.

ಅದೇನೇ ಇರಲಿ, ಹುಡುಗಿಯರು ಅವರಿಗಿಂತ ಚಿಕ್ಕವರನ್ನು ಮದುವೆ ಆಗಬಹುದೇ..?
ಎಷ್ಟೋ ಹುಡುಗಿಯರಿಗೆ ಈ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಹಾಗಿದ್ದರೆ ಕೇಳಿ ಹುಡುಗಿಯರು ತಮಗಿಂತ ಚಿಕ್ಕವರನ್ನು ಮದುವೆ ಆಗುವುದರಿಂದ ಅನುಕೂಲಗಳೇ ಹೆಚ್ಚು. ಹೇಗೆಂದರೆ ತಮಗಿಂತ ದೊಡ್ಡವರನ್ನು ಮದುವೆ ಆದರೆ ಅವರು ಹೇಳಿದಂತೆ ನೆಡೆಯಬೇಕಾಗುತ್ತದೆ. ಹುಡುಗ ನಿಮಗಿಂತ ಚಿಕ್ಕವನಾಗಿದ್ದರೆ ಅವನಿಗಿಂತ ಹೆಚ್ಚು ನಿಮಗೆ ತಿಳಿದಿರುತ್ತದೆ. ನಿಮ್ಮ ಅಭಿಪ್ರಾಯಗಳಿಗೆ ಅವನು ಚೆನ್ನಾಗಿ ಸ್ಪಂದಿಸುತ್ತಾನೆ.

ವಿಜ್ಞಾನಿಗಳ ಪ್ರಕಾರ ಟೆಸ್ಟೋಸ್ಟೆರಾನ್ ಎಂಬ ಅಂಶವು ವಯಸ್ಸಾದಂತೆ ಕಡಿಮೆ ಆಗುತ್ತಾ ಹೋಗುತ್ತದೆ. ಆ ಅಂಶ ಹೆಚ್ಚಿದ್ದಷ್ಟೂ ಹುಡುಗರು ತಮ್ಮ ತಪ್ಪನ್ನು ತೋರಿಸಿಕೊಟ್ಟಾಗ ತಿದ್ದಿಕೊಳ್ಳಲು ಪ್ರಯತ್ನಿಸುತ್ತಾರೆ. ನಿಮಗಿಂತ ಚಿಕ್ಕವರಾದರೆ ನೀವು ಹೇಳಿದ ತಪ್ಪುಗಳನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅದೇ ನಿಮಗಿಂತ ದೊಡ್ಡವರಾಗಿದ್ದಾರೆ ನೀವು ತಪ್ಪೆಂದು ತೋರಿಸಿದರು ಅದನ್ನು ತಿದ್ದಿಕೊಳ್ಳುವ ಮತ್ತೆ ಇಲ್ಲ. ಹಾಗು ಲೈಂಗಿಕ ಕ್ರಿಯೆಯಲ್ಲೂ ತುಂಬ ಒಳ್ಳೆಯದು.

ಹುಡುಗ ಚಿಕ್ಕವನೆಂದರೆ 2 ರಿಂದ 3 ವರ್ಷ ಚಿಕ್ಕವನಾದರೆ ಏನು ತೊಂದರೆ ಇಲ್ಲದೆ ಮದುವೆ ಆಗಬಹುದು. ಆದರೆ 5 ವರ್ಷ ಮೇಲ್ಪಟ್ಟು ಚಿಕ್ಕವನಾದರೆ ನೀವು ತೊಂದರೆ ಅನುಭವಿಸಬೇಕಾಗುತ್ತದೆ. ಇದರಿಂದ ನಿಮ್ಮ ಮಗುವಿಗೆ ತೊಂದರೆ ಆಗುವ ಸಾಧ್ಯತೆಗಳು ಇರುತ್ತವೆ.