ಸಿನಿಮಾ

ಸ್ಯಾಂಡಲ್ ವುಡ್ ನಟ ಮತ್ತು ಸಿಸಿಎಲ್ ಆಟಗಾರ ಧ್ರುವ ಶರ್ಮಾ ಇನ್ನಿಲ್ಲ…

305

ಚಂದನವನದ ನಟ ಹಾಗೂ ಸೆಲೆಬ್ರಿಟಿ ಕ್ರಿಕೆಟ್ ಲೀಗ್‍ನ, ಬುಲ್ಡೋಜರ್ಸ್ ತಂಡದ ಖ್ಯಾತ ಆಟಗಾರ ಧ್ರುವ ಶರ್ಮಾ ನಿಧನರಾಗಿದ್ದು, ಪತ್ನಿ ಮತ್ತು  ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ ಧ್ರುವ ಅವರನ್ನು, ಹೆಬ್ಬಾಳದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಆದರೆ ಇಂದು ಮುಂಜಾನೆ ಚಿಕಿತ್ಸೆ ಫಲಕಾರಿಯಾಗದೇ ಧ್ರುವ  ಸಾವನ್ನಪ್ಪಿದ್ದಾರೆ. ವಿಕಲಚೇತನ ಪತ್ರಿಭೆಯಾಗಿದ್ದ ಧ್ರುವ, ಸಿಸಿಎಲ್‌ ಮತ್ತು ನಟನೆ ಮೂಲಕ ಗುರುತಿಸಿಕೊಂಡಿದ್ದರು. ನಟ ಧ್ರುವ, ಕಿಚ್ಚ ಸುದೀಪ್ ಅವರ ನಾಯಕತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡದಲ್ಲಿ ಉತ್ತಮ ಆಟಗಾರರಾಗಿದ್ದರು.

35 ವರ್ಷದ  ಧ್ರುವ ಶರ್ಮಾ ಪತ್ನಿ ಮತ್ತು 7 ವರ್ಷದ ಮಗಳು, 4 ವರ್ಷದ ಮಗನನ್ನು ಅಗಲಿದ್ದಾರೆ. ಧ್ರುವ ಅವರ ತಂದೆ ಸುರೇಶ್ ಶರ್ಮಾ ಕೂಡ ನಟ, ನಿರ್ಮಾಪರ,  ಫೈನಾನ್ಶಿಯರ್ ಹಾಗೂ ನಿರ್ದೇಶಕರಾಗಿದ್ದು, ಈ ಹಿಂದೆ ಹಲವು ಚಿತ್ರಗಳಲ್ಲಿ ನಟಿಸಿದ್ದಾರೆ.

ಉದ್ಯಮಿ, ನಟರೂ ಆಗಿರುವ ಸತೀಶ್ ಶರ್ಮಾ ಅವರ ಪುತ್ರರಾಗಿರುವ ಧ್ರುವ ಶರ್ಮಾ 2005ರಲ್ಲಿ ವಿಶ್ವ ಕಿವುಡರ ಕ್ರಿಕೆಟ್‍ನಲ್ಲಿ ಭಾರತ ತಂಡದಲ್ಲಿ ಆಡಿದ್ದರು. ವಾಕ್-ಶ್ರವಣ ದೋಷದಿಂದಾಗಿ ಬಾಲ್ಯದಿಂದಲೇ ಸಾಕಷ್ಟು ಅವಮಾನ ಎದುರಿಸಿದ್ದ ಧ್ರುವ ಶರ್ಮಾ ಆ ಎಲ್ಲ ನಿಂದನೆಗಳನ್ನು ಮೆಟ್ಟಿ ನಿಂತಿದ್ದರು.

ಮೂಗ ಮತ್ತು ಕಿವುಡರಾಗಿದ್ದ ಧ್ರುವ ತಮ್ಮ ಅಮೋಘ ಅಭಿನಯ ಹಾಗೂ ಕ್ರಿಕೆಟ್‌ ನಿಂದ ಎಲ್ಲರ ಗಮನ ಸೆಳೆದಿದ್ದರು. 2007ರಲ್ಲಿ ತಮ್ಮ 25ನೇ ವರ್ಷ ವಯಸ್ಸಿನಲ್ಲಿ ಸ್ನೇಹಾಂಜಲಿ ಎಂಬ ಚಲನಚಿತ್ರದಲ್ಲಿ ನಾಯಕರಾಗಿ ನಟಿಸಿ ಎಲ್ಲರ ಹುಬ್ಬೇರುವಂತೆ ಮಾಡಿದರು. ಧ್ರುವ್ ಅವರ ಹಠಾತ್ ಸಾವಿಗೆ ಚಿತ್ರರಂಗದ ಅನೇಕ ಗಣ್ಯರು, ಸ್ನೇಹಿತರು ಕಂಬನಿ ಮಿಡಿದಿದ್ದಾರೆ.

 

 

About the author / 

Nimma Sulochana

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ