News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಗೌತಮ ಬುದ್ಧನ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು..
ಬೆಳ್ಳುಳ್ಳಿ ತಿಂದರೆ ಕರೋನಾ ವೈರಸ್ ಸಾಯುತ್ತದೆಯೆ..? ಇಲ್ಲಿದೆ ಉತ್ತರ
ಚೈತ್ರ ಮಾಸದಲ್ಲಿ ಬೇವನ್ನು ತಿನ್ನುವುದು ಪ್ರಯೋಜನಕಾರಿ
ವಿಶ್ವದ ನಂಬರ್ 1 ಶ್ರೀಮಂತ ಬೆಜೋಸ್​ನ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್
ಕೊರೊನಾ 3ನೇ ಅಲೆ ಎದುರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧತೆ; ಆಸ್ಪತ್ರೆಗಳಲ್ಲೇ ಆಕ್ಸಿಜನ್ ಪ್ಲಾಂಟ್ ತೆರೆಯಲು ಚರ್ಚೆ
ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ! ಹೇಗಿತ್ತು ಆತನ ಪ್ರಯಾಣ?
ಮಾರಕ ಕರೋನಾ ಬಗ್ಗೆ ನಾವೆಷ್ಟು ತಿಳಿದಿದ್ದೇವೆ ಮತ್ತು ನಾವು ಏನೆಲ್ಲಾ ತಿಳಿಯಬೇಕು
ಉಬ್ಬಸ ಸಮಸ್ಯೆಗೆ ಮನೆ ಮದ್ದು
ಹೃದಯಾಘಾತ ( Heart attack ) ತಪ್ಪಿಸಲು ಇಲ್ಲಿವೆ ಸಿಂಪಲ್ ಟಿಪ್ಸ್
ಮಂಗಳ ಗ್ರಹ
ಸುದ್ದಿ

ಹೊಸದಾಗಿ ಪ್ರದರ್ಶಿತವಾದ ಎವಾನ್ ಎಲೆಕ್ಟ್ರಿಕ್ ಸ್ಕೂಟರ್ ಇದರ ವೈಶಿಷ್ಯತೆ ಏನು ಗೊತ್ತಾ,.!

16

ಎವಾನ್ ಮೋಟಾರ್ಸ್ ಎರಡು ಕಾನ್ಸೆಪ್ಟ್ ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಪುಣೆ ಮೋಟಾರ್ ಶೋದಲ್ಲಿ ಪ್ರದರ್ಶಿಸಿದೆ. ಪ್ರದರ್ಶಿಸಲಾದ ಈ ಎರಡು ಸ್ಕೂಟರ್‍‍ಗಳ ಪೈಕಿ, ಟಾಪ್ ಎಂಡ್ ಸ್ಕೂಟರ್‍, ಸಿಂಗಲ್ ಜಾರ್ಜ್‍‍ನಿಂದ 200 ಕಿ.ಮೀ ದೂರ ಚಲಿಸಲಿದೆ. ಫ್ಲಾಗ್‍‍ಶಿಪ್ ಸ್ಕೂಟರ್ 72 ವಿ 22ಎ‍ಎಚ್ ಲಿಥಿಯಂ-ಅಯಾನ್ ಬ್ಯಾಟರಿ ಮತ್ತು 1200ಡಬ್ಲ್ಯು ಮೋಟರ್ ಹೊಂದಿದೆ. ಈ ಸ್ಕೂಟರಿನ ಟಾಪ್ ಸ್ಪೀಡ್ ಪ್ರತಿ ಗಂಟೆಗೆ 60 ಕಿ.ಮೀಗಳಾಗಿದೆ. ಲೊವರ್-ಸ್ಪೆಕ್ ಮಾದರಿಯನ್ನು ಪೂರ್ತಿಯಾಗಿ ಜಾರ್ಚ್ ಮಾಡಿದರೆ 80 ಕಿ.ಮೀ ಚಲಿಸುತ್ತದೆ.

ಎಂಟ್ರಿ-ಲೆವೆಲ್ ಸ್ಕೂಟರ್ 60 ವಿ 35 ಎಎಚ್ ಲಿಥಿಯಂ-ಅಯಾನ್ ಬ್ಯಾಟರಿ ಪ್ಯಾಕ್ ಮತ್ತು 800 ಡಬ್ಲ್ಯು ಮೋಟರ್ ಅನ್ನು ಹೊಂದಿದೆ. ಈ ಸ್ಕೂಟರ್ ಗರಿಷ್ಟ ಟಾಪ್ ಸ್ಪೀಡ್ 45 ಕಿ.ಮೀ ವೇಗದಲ್ಲಿ ಚಲಿಸುವ ಸಾಮಥ್ಯ ಹೊಂದಿದೆ. ಬೈಕಿನ ಬ್ರೇಕ್ ಸಿಸ್ಟಂ ಬಗ್ಗೆ ಹೇಳುವುದಾದರೆ, ಎರಡು ಸ್ಕೂಟರ್‍‍ಗಳಲ್ಲಿಯೂ ಮುಂಭಾಗದಲ್ಲಿ ಡಿಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್‍‍ಗಳಿವೆ. ಎವಾನ್ ಮೋಟಾರ್ಸ್ ಮುಖ್ಯಸ್ಥ ಪಂಕಜ್ ತಿವಾರಿರವರು ಮಾತನಾಡಿ, ಪುಣೆಯ ಮೋಟಾರ್ ಶೋ ಎಂಬ ಪ್ರತಿಷ್ಠಿತ ವೇದಿಕೆಯಲ್ಲಿ ನಮ್ಮ ಇ- ವಾಹನಗಳ ಹೊಸ ಪರಿಕಲ್ಪನೆಯನ್ನು ಬಹಿರಂಗಪಡಿಸಲು ನಾವು ರೋಮಾಂಚನಗೋಂಡಿದ್ದೇವೆ. ಎವಾನ್ ಮೋಟಾರ್ಸ್ ತಂಡವು ಚಿಕ್ಕ ಅಂಶಗಳ ಬಗ್ಗೆಯು ವಿಶೇಷ ಪ್ರತಿನಿಧ್ಯವಹಿಸಿ ಅತುತ್ತಮ ವೈಶಿಷ್ಟ್ಯ ಮತ್ತು ಬೆರಗುಗೊಳಿಸುವಂತಹ ಆಕರ್ಷಕ ವಿನ್ಯಾಸವನ್ನು ಮೂಡಿಸಿದೆ. ಎರಡು ಪರಿಕಲ್ಪನೆಯನ್ನು ಪ್ರದರ್ಶಿಸಿದ ಬಳಿಕ ನಾವು ಉತ್ತಮ ಪ್ರತಿಕ್ರಿಯೆಯನ್ನು ಬಯಸುತ್ತೇವೆ ಮತ್ತು ತದನಂತರ ಉತ್ಪಾದನೆಯನ್ನು ಪ್ರಾರಂಭಿಸುತ್ತೇವೆ ಎಂದು ಹೇಳಿದರು.

ಕಂಪನಿಯು ಮೋಟಾರ್ ಶೋ‍ನಲ್ಲಿ ಪ್ರದರ್ಶಿಸಿದ ಪ್ರಮುಖ ಉದ್ದೇಶವೆಂದರೆ ಸ್ಕೂಟರ್‍‍ಗಳಿಗೆ ಸಾರ್ವಜನಿಕರಿಂದ ಪ್ರತಿಕ್ರಿಯೆಯನ್ನು ಪಡೆದು ಅದರ ಕುರಿತು ಅಧ್ಯಯನ ನಡೆಸಲು ಯೋಜಿಸಿದೆ ಮತ್ತು ಉತ್ಪಾದನಾ ಹಂತದ ಕುರಿತು ಹೆಚ್ಚಿನ ಸಂಶೋಧನೆಯನ್ನು ಕಂಪನಿ ಮುಂದುವರಿಸಲಿದೆ. ಎವಾನ್ ಮೋಟಾರ್ಸ್ ಇಂಡಿಯಾ ಎಲೆಕ್ಟ್ರಿಕ್ ವಾಹನಗಳ ಕಂಪನಿಯಾಗಿದ್ದು, ಇದರ ಉದ್ದೇಶವು ಭಾರತದಲ್ಲಿ ಕೈಗೆಟುಕುವ ದರದ ಎಲೆಕ್ಟ್ರಿಕ್ ವಾಹನಗಳನ್ನು ಅಭಿವೃದ್ದಿಪಡಿಸಿ ಮಾರಾಟ ಮಾಡುವುದು. ಈ ಉದ್ದೇಶದಿಂದ ಈ ಕಂಪನಿಯನ್ನು 2015ರಲ್ಲಿ ಸ್ಥಾಪಿಸಲಾಯಿತು.

ಕಂಪನಿಯ ಸದ್ಯಕ್ಕೆ ಕ್ಸೆರೊ ಮತ್ತು ಕ್ಸೆರೊ ಪ್ಲಸ್ ಮತ್ತು ಟ್ರೆಂಡ್ಇ ಎಂಬ 3 ಎಲೆಕ್ಟ್ರಿಕ್ ಸ್ಕೂಟರ್‍‍ಗಳನ್ನು ಮಾರಾಟ ಮಾಡುತ್ತಿದೆ. ಈ ಮೂರು ಸ್ಕೂಟರ್‍‍‍ಗಳಲ್ಲಿ ಲಿಥಿಯಾ ಅಯಾನ್ ಭ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಈ ಎಲ್ಲಾ ಮೂರು ಸ್ಕೂಟರ್‍‍‍ಗಳು, ಮುಂಭಾಗದಲ್ಲಿ ಟಿಲಿಸ್ಕೋಪಿಕ್ ಫೋರ್ಕ್ ಮತ್ತು ಹಿಂಭಾಗದಲ್ಲಿ ಕಾಯಿಲ್ ಸ್ಟ್ರಿಂಗ್ ಹೊಂದಿವೆ. ಮೂರೂ ಸ್ಕೂಟರ್‍‍‍ಗಳಲ್ಲಿ ಮುಂಭಾಗದಲ್ಲಿ ಡೀಸ್ಕ್ ಬ್ರೇಕ್ ಮತ್ತು ಹಿಂಭಾಗದಲ್ಲಿ ಡ್ರಮ್ ಬ್ರೇಕ್ ಅನ್ನು ಅಳವಡಿಸಲಾಗಿದೆ. ಎವಾನ್ ಮೋಟಾರ್ಸ್ ಅವರ ಈ ಮೂರು ಸ್ಕೂಟರ್‍‍ಗಳು ಪ್ರಸ್ತುತ ದೇಶಿಯ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿದ್ದು, ಗ್ರಾಹಕರ ಗಮನಸೆಳೆದಿವೆ. ಎವಾನ್ ಮೋಟಾರ್ಸ್ ಫೇಮ್ ಯೋಜನೆಗೆ ಅರ್ಹತೆಯನ್ನು ಪಡೆದುಕೊಂಡಿದೆ. ಈ ಯೋಜನೆಯ ಪ್ರಯೋಜನ ಪಡೆಯಲು ಇ-ಸ್ಕೂಟರ್‍‍ಗಳು ಸಿಂಗಲ್ ಜಾರ್ಚ್‍‍ನಲ್ಲಿ 80 ಕಿ.ಮೀ ಚಲಿಸುವಂತೆ ಇರಬೇಕು ಮತ್ತು 40 ಕಿ.ಮೀ ಸ್ಪೀಡ್ ಹೊಂದಿರಬೇಕು.

ಒಂದು ಸಿಂಗಲ್ ಜಾರ್ಜ್ 200 ಕಿ.ಮೀ ಚಲಿಸುತ್ತದೆ. ಎಲೆಕ್ಟ್ರಿಕ್ ಸ್ಕೂಟರ್‍ ಪರಿಕಲ್ಪನೆಯು ಆಕರ್ಷಕ ವಿನ್ಯಾಸದಿಂದ ಕೊಡಿದೆ. ಪ್ರಸ್ತುತವಾಗಿ ಪೆಟ್ರೊಲ್ ಮತ್ತು ಡೀಸೆಲ್ ಬೆಲೆ ಅಧಿಕ ಮತ್ತು ವಾಯುಮಾಲಿನ್ಯ ಈ ಎಲ್ಲಾ ಕಾರಣದಿಂದ ಜನರು ಕೂಡ ಎಲೆಕ್ಟ್ರಿಕ್ ವಾಹನಗಳ ಮೊರೆ ಹೋಗುತ್ತಿದ್ದಾರೆ. ಅವನ್ ಮೋಟಾರ್ಸ್ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಬಳಿಕ ಒಕಿನಾವಾ ಶ್ರೇಣಿಯ ಸ್ಕೂಟರ್‍‍ಗಳಿಗೆ ಪೈಪೋಟಿ ನೀಡಲಿದೆ.

About the author / 

admin

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ