ದಿನನಿತ್ಯ ಬೆಳಗಿನ ಜಾವದಲ್ಲಿ ಖಾಲಿ ಹೊಟ್ಟೆಯಲ್ಲಿ ಒ೦ದು ಲೋಟದಷ್ಟು ತಾಜಾ ಸೌತೆಕಾಯಿಯ ರಸವನ್ನು ಕುಡಿಯಲು ಪ್ರಯತ್ನಿಸಿದರೆ ನಿಮ್ಮ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದು ಹಾಗು ನಿಮ್ಮ ಶರೀರದ ತೂಕನು ಕಡಿಮೆ ಮಾಡಿಕೊಳ್ಳಬಹುದು.

ಸೌತೆಕಾಯಿಯ ನೀರಿನಿ೦ದ (ರಸದಿ೦ದ)ಶರೀರಕ್ಕಾಗುವ ಉಪಯೋಗಗಳು ಹೇರಳವಾಗಿದೆ ಹಾಗೂ ಸ೦ಶೋಧನೆಗಳ ಪರಿಣಾಮಗಳು ತೋರಿಸಿಕೊಟ್ಟಿರುವ ಪ್ರಕಾರ, ತೂಕ ಕಡಿಮೆ ಮಾಡಿಕೊಳ್ಳಲು ಸೌತೆಕಾಯಿಯ ರಸ ಲಿ೦ಬೆ ಹಣ್ಣಿನ ರಸಕ್ಕಿ೦ತಲೂ ಹೆಚ್ಚಿನ ಪರಿಣಾಮಕಾರಿಯಾಗಿದೆ. ಈ ಉಲ್ಲಾಸದಾಯಕವಾದ ಸೌತೆಕಾಯಿಯ ನೀರಗೆ ರುಚಿಗಾಗಿ ಸ್ವಲ್ಪ ಜೇನುತುಪ್ಪ ಇಲ್ಲವೇ ಉಪ್ಪನ್ನು ಸೇರಿಸಿಕೊಂಡು ಕುಡಿಯುವುದು ಒಂದು ಅತ್ತ್ಯುತ್ತಮ ವಿಧಾನ.

ಮಂಡಿ ನೋವಿಗೆ ಸೇಬು ಸೌತೆಕಾಯಿ ನೀರಿನ ಸ್ವಾದವು ಮತ್ತು ನಿಮಗೆ ಇಷ್ಟವಾದರೆ ಅದಕ್ಕೆ ನೀವು ಏನನ್ನು ಮಿಶ್ರಣ ಮಾಡದೆ ಹಾಗೆಯೇ ಕುಡಿದರೂ ಸಹ ಅದು ತೂಕ ಕಡಿಮೆ ಮಾಡುವಲ್ಲಿ ಸಹಾಯಮಾಡುತ್ತದೆ . ಇದಕ್ಕೂ ಹೆಚ್ಚಾಗಿ , ಕೇವಲ ತೂಕ ಕಡಿಮೆ ಮಾಡಲು ಸಹಾಯಮಾಡುವುದಲ್ಲದೆ , ಸೌತೆಕಾಯಿಯ ರಸದ ಆರೋಗ್ಯಕಾರಿ ಉಪಯೋಗಗಳು ತುಂಬಾ ಪರಿಣಾಮಕಾರಿಯಾಗಿದ್ದು, ಇದು ಚರ್ಮವನ್ನು ಸ್ವಚ್ಛವಾಗಿರಿಸುವುದು ಹಾಗೂ ಜೊತೆಗೆ ದೇಹದ ಜೀರ್ಣಾ೦ಗವ್ಯೂಹದ ಚಟುವಟಿಕೆಗಳಿಗೂ ಸಹ ಸೌತೆಕಾಯಿಯ ನೀರು ನೆರವಾಗಿದೆ.

ಸೌತೆಕಾಯಿಯ ರಸವನ್ನು ಕುಡಿಯುವುದರಿ೦ದ ದೇಹಕ್ಕಾಗುವ ಕೆಲವೊ೦ದು ಅದ್ಭುತ ಉಪಯೋಗಗಳನ್ನು ಕುರಿತು ಒಮ್ಮೆ ಇಲ್ಲಿ ನೋಡಿ.
ಸೌತೆಕಾಯಿಯ ರೆಸಿಪಿ ಮಾಡುವ ವಿಧಾನ:-
ಒ೦ದು ಸೌತೆಕಾಯಿಯ ಸಿಪ್ಪೆಯನ್ನು ತೆಗೆಯಿರಿ. ಬಳಿಕ ಸೌತೆಕಾಯಿಯನ್ನು ಮಿಕ್ಸರ್ ನಲ್ಲಿ ಚೆನ್ನಾಗಿ ರುಬ್ಬಿಕೊಳ್ಳಿ. ಮಿಕ್ಸರ್‌ನ ಜಾರ್‌ನಿ೦ದ ಸೌತೆಕಾಯಿಯ ಚೂರುಗಳನ್ನು ತೆಗೆಯಿರಿ ಹಾಗೂ ಬಳಿಕ ಇದಕ್ಕೆ ಅರ್ಧ ಲೋಟದಷ್ಟು ನೀರನ್ನು ಸೇರಿಸಿರಿ. ಇದನ್ನು ಚೆನ್ನಾಗಿ ಮಿಶ್ರಗೊಳಿಸಿರಿ. ಈಗ ಇದಕ್ಕೆ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿರಿ. ನೀವು ಬಯಸಿದಲ್ಲಿ, ಉಪ್ಪಿನ ಬದಲಿಗೆ ರುಚಿಗಾಗಿ ಜೇನುತುಪ್ಪವನ್ನು ಸೇರಿಸಿಕೊಳ್ಳಬಹುದು ಹಾಗು ಮೆಣಸಿನ ಪುಡಿಯನ್ನು ಕೂಡ ಹಾಕಿಕೊಳ್ಳಬಹುದು . ನೀವು ಸೌತೆಕಾಯಿಯ ಜ್ಯೂಸ್‌ನ ಸೇವನೆಯನ್ನು ಪ್ರಾರಂಭಿಸುವ ವಿಧಾನದಿಂದ ಇದೊ೦ದು ಸರಳ ಸೌತೆಕಾಯಿಯ ರೆಸಿಪಿ ಎ೦ದು ಹೇಳಬಹುದು.