ಈ ಸರ್ಕಾರದಲ್ಲಿ
ನಾನು ಆರೋಗ್ಯ ಮಂತ್ರಿಯಾಗಿ ಕೆಲಸ ಮಾಡುತ್ತಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಕೆಲಸ ಮಾಡೋಕ್ಕೆ ನಿಮಗೆ
ಆಗಲ್ಲ ಎಂದ್ರೆ ಇಲ್ಲಿಂದ ತೊಲಗಿ ಎಂದು ಕೊಡಗು ಜಿಲ್ಲೆಯ ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ಸರ್ಕಾರಿ
ವೈದ್ಯರಿಗೆ ಆರೋಗ್ಯ ಸಚಿವ ಬಿ.ಶ್ರೀರಾಮುಲು ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾತ್ರಿ
ವೇಳೆಯಲ್ಲಿ ಮಡಿಕೇರಿಯ ಜಿಲ್ಲಾ ಆಸ್ಪತ್ರೆಗೆ ಆಗಮಿಸಿ,
ಆಸ್ಪತ್ರೆಯ ಸ್ಥಿತಿಗತಿಗಳ ಬಗ್ಗೆ ಪರಿಶೀಲನೆ ಹಾಗೂ
ವಾಸ್ತವ್ಯ ಹೂಡಲು ಭೇಟಿ ನೀಡಿದ
ಆರೋಗ್ಯ ಮಂತ್ರಿ ಶ್ರೀರಾಮುಲುರವರು, ಆಸ್ಪತ್ರೆಯ
ಒಳಗೆ ಪರಿಶೀಲನೆ ನಡೆಸಿ ಆಸ್ಪತ್ರೆಯಲ್ಲಿ ಇದ್ದಂತಹ
ರೋಗಿಗಳನ್ನು ಮಾತನಾಡಿಸಿ ಮಾಹಿತಿ ಕಲೆ ಹಾಕಿದರು,
ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ
ಅವರು ಎಂತಹ ಪರಿಸ್ಥಿತಿಗೂ ನಾನು
ಬಗ್ಗುವುದಿಲ್ಲ. ಸರ್ಕಾರಿ ವೈದ್ಯರು ಎರಡು
ಬೋಟ್ಗಳ ಮೇಲೆ ಕಾಲು
ಇಡಬಾರದು.
ಪ್ರತಿವರ್ಷ
ಸಾವಿರಾರು ವಿದ್ಯಾರ್ಥಿಗಳು ಎಂಬಿಬಿಎಸ್ ಪದವಿ ಮುಗಿಸಿ ಹೊರ
ಬರುತ್ತಿದ್ದು, ನಿರುದ್ಯೋಗದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಒಂದು ವೇಳೆ ಸರ್ಕಾರಿ
ವೈದ್ಯರು ಎರಡೂ ಕಡೆ ಕೆಲಸ
ಮಾಡುವುದೇ ಆದ್ರೆ ಮೊದಲು ಇಲ್ಲಿಂದ
ತೊಲಗಿ ಎಂದು ಸರ್ಕಾರಿ ವೈದ್ಯರು
ಖಾಸಗಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಎಂಬ
ಆರೋಪಕ್ಕೆ ಖಾರವಾಗಿಯೇ ಪ್ರತಿಕ್ರಿಯಿಸಿದ್ರು.
ಇನ್ನು ವೈದ್ಯರು ಕರ್ತವ್ಯಕ್ಕೆ ಸೇರುವಾಗ
ಸರ್ಕಾರಿ ಕೆಲಸ ದೇವರ ಕೆಲಸ
ಎಂದು ಪ್ರಮಾಣ ಮಾಡಿರುತ್ತೀರ. ಅದರಂತೆ
ನೀವು ನಡೆದುಕೊಳ್ಳಬೇಕು. ಎಲ್ಲಾ ಜಿಲ್ಲಾ ಆರೋಗ್ಯ
ಅಧಿಕಾರಿಗಳು ಹಾಗೂ ಆಸ್ಪತ್ರೆ ಸಿಬ್ಬಂದಿಗಳನ್ನು
ನಿಯೋಜಿಸಬೇಕು. ಒಂದು ವೇಳೆ ಇದು
ಸಾಧ್ಯವಾಗದಿದ್ರೆ ರಾಜ್ಯಮಟ್ಟದಲ್ಲಿ ಟೆಂಡರ್ ಕರೆದು ಸಿಬ್ಬಂದಿ
ನೇಮಿಸುತ್ತೇವೆ ಎಂದರು.
ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…
ಕಳೆದ 19 ವರ್ಷಗಳಲ್ಲಿ ಉಭಯ ತಂಡಗಳ ನಡುವೆ 128 ಏಕದಿನ ಪಂದ್ಯ ನಡೆದಿವೆ. ಆದರೆ, ಐಸಿಸಿ ಆಯೋಜನೆಯ ಏಕದಿನ ಟೂರ್ನಿಯೊಂದರ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತ-ಪಾಕಿಸ್ತಾನ ತಂಡಗಳು ಫೈನಲ್ನಲ್ಲಿ ಭಾನುವಾರ ಎದುರಾಗುತ್ತಿವೆ.
ರಸ್ತೆ ಅಪಘಾತದ ಬಗ್ಗೆ ನಟ ದರ್ಶನ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ರಸ್ತೆಯಲ್ಲಿ ಸಂಚಾರ ಮಾಡುವಾಗ ಸುರಕ್ಷಿತವಾಗಿ ಇರಲು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಕಳೆದ ವರ್ಷ ದರ್ಶನ್ ಪುತ್ರ ವಿನೀಶ್ ಹುಟ್ಟುಹಬ್ಬಕ್ಕೆ ದೂರದ ಊರಿನಿಂದ ಅಭಿಮಾನಿಗಳು ಆಗಮಿಸಿದ್ದರು. ಈ ವೇಳೆ ರಸ್ತೆ ಅಪಘಾತ ಸಂಭವಿಸಿತ್ತು. ಇದರಲ್ಲಿ ಅಭಿಮಾನಿಯೊಬ್ಬರು ನಿಧನ ಹೊಂದಿದರು. ಈ ದುರ್ಘಟನೆಯನ್ನು ದರ್ಶನ್ ಇನ್ನು ಮರೆತಿಲ್ಲ. ಈ ವರ್ಷ ವಿನೀಶ್ ಹುಟ್ಟುಹಬ್ಬ ಹತ್ತಿರದಲ್ಲಿ ಇದ್ದು, ಕಾರ್ಯಕ್ರಮಕ್ಕೆ ಆಗಮಿಸುವ ಅಭಿಮಾನಿಗಳಿಗೆ ದರ್ಶನ್ ಮನವಿ ಮಾಡಿದ್ದಾರೆ. ”ಅಭಿಮಾನಿಗಳಲ್ಲಿ ಕಳಕಳಿಯ ಮನವಿ….
ಹೆಚ್ಚಿನ ಜನರು ಫೋನ್ ಹ್ಯಾಂಗ್ಗಳ ಸಮಸ್ಯೆಯಿಂದ ಅಥವಾ ನಿಧಾನವಾಗಿರುವುದರಿಂದ ತೊಂದರೆಗೀಡಾಗುತ್ತಾರೆ. ನಿಮ್ಮ ಸ್ಮಾರ್ಟ್ಫೋನ್ನಲ್ಲಿ ನೀವು ಸಹ ಈ ರೀತಿಯ ತೊಂದರೆಯಿಂದ ಬಳಲುತ್ತಿದ್ದರೆ, ಈ ಸಮಸ್ಯೆಯಿಂದ ನಿಮಗೆ ಮುಕ್ತಿ ನೀಡಲು ಐದು ಕ್ರಮಗಳನ್ನು ಅನುಸರಿಸಿ. ಈ ಕ್ರಮಗಳೊಂದಿಗೆ ನಿಮ್ಮ ಫೋನ್ ಸ್ಥಗಿತಗೊಳ್ಳುವುದನ್ನು ಅಥವಾ ನಿಧಾನಗೊಳಿಸುವುದನ್ನು ಸಹ ನೀವು ನಿಲ್ಲಿಸಬಹುದು. ಕೆಲವೊಮ್ಮೆ ಫೋನ್ನ ಮೆಮೊರಿ ತುಂಬಿರುತ್ತದೆ. ಆದ್ದರಿಂದ ಫೋನ್ ನಿಧಾನವಾಗಿ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ. ಫೋನ್ನ ಆಂತರಿಕ ಸ್ಥಳದ ಹೊರತಾಗಿ, ಫೋನ್ ನಿಧಾನವಾಗಲು ಫೋನ್ನ RAM ಸಹ ಕಾರಣವಾಗಿದೆ. ನಿಮ್ಮ ಫೋನ್…
ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಳಿ ಅನೇಕ ದುಬಾರಿ ಕಾರುಗಳು ಮತ್ತು ಬೈಕ್ಗಳು ಇವೆ. ಆದರೂ ದರ್ಶನ್ ಲೂನಾ ಗಾಡಿಯಲ್ಲಿ ಸವಾರಿ ಮಾಡಿದ್ದಾರೆ. ನಟ ದರ್ಶನ್ ಅವರ ಪಾಲಿಗೆ ಈ ಲೂನಾ ಗಾಡಿ ಲಕ್ಕಿಯಾಗಿದೆ. ಯಾಕೆಂದರೆ ಈ ಲೂನಾ ಗಾಡಿಯನ್ನು ದರ್ಶನ್ ತಂದೆ ತೂಗುದೀಪ್ ಶ್ರೀನಿವಾಸ್ ಅವರು ಕೊಡಿಸಿದ್ದರು. ಹೀಗಾಗಿ ದರ್ಶನ್ ಇಂದಿಗೂ ಅಪ್ಪ ಕೊಡಿಸಿದ ಗಾಡಿನಾ ಜೋಪಾನವಾಗಿ ಕಾಪಾಡಿಕೊಂಡಿದ್ದಾರೆ. ದರ್ಶನ್ ನಟನಾಗಿ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಡುವ ಮೊದಲು ಲೈಟ್ ಬಾಯ್ ಆಗಿದ್ದರು. ಆಗ ಈ ಲೂನಾ ಗಾಡಿನಾ…
ವಿಯೆಟ್ನಾಂನ ವಿಯರ್ ಜೆಟ್ ಸದ್ಯದಲ್ಲೇ ಭಾರತಕ್ಕೂ ಬರುತ್ತಿದೆ. ಬಿಕಿನಿ ಏರ್ ಲೈನ್ ಅಂತಾನೇ ಇದು ಫೇಮಸ್ ಆಗಿದೆ. ಈ ವಿವಾದಾತ್ಮಕ ವಿಮಾನಯಾನ ಸಂಸ್ಥೆ ನವದೆಹಲಿಯಿಂದ ಹೊ ಚಿ ಮಿನ್ಹ್ ನಗರಕ್ಕೆ ವಿಮಾನ ಪ್ರಯಾಣ ಆರಂಭಿಸುವುದಾಗಿ ಘೋಷಿಸಿದೆ. ಈ ವಿಮಾನದಲ್ಲಿರೋ ಗಗನಸಖಿಯರೆಲ್ಲ ಕೇವಲ ಬಿಕಿನಿಯಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ. ಈ ಬಿಕಿನಿ ಸುಂದರಿಯರು ಭಾರತಕ್ಕೂ ಬರುತ್ತಿದ್ದಾರೆ. ಬಿಕಿನಿ ಸುಂದರಿಯರು… ಈ ಬಿಕಿನಿ ಸುಂದರಿಯರೀಗ ಭಾರತಕ್ಕೂ ಆಗಮಿಸುತ್ತಿರುವುದು ಪ್ರಯಾಣಿಕರಲ್ಲಿ ತೀವ್ರ ಕುತೂಹಲ ಹುಟ್ಟಿಸಿದೆ.ವಾರದಲ್ಲಿ ನಾಲ್ಕು ದಿನಗಳ ಕಾಲ ಈ ವಿಮಾನ ಹಾರಾಟ…