ಭಾರತದ ಮಹಾತ್ವಾಕಾಂಕ್ಷೆ ಯೋಜನೆಯಾಗಿರುವ ಚಂದ್ರಯಾನ-2 ಅನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ISRO ವಿಜ್ಞಾನಿಗಳು ಆಹೋರಾತ್ರಿ ಪ್ರಯತ್ನಪಡುತ್ತಿದ್ದಾರೆ. ಕಳೆದ ಸೆ.7ರಂದುಸಂಪರ್ಕ ಕಡಿದುಕೊಂಡಿರುವ ವಿಕ್ರಮ್ ಲ್ಯಾಂಡರ್ ಈಗಚಂದ್ರನ ಮೇಲೆ ಲ್ಯಾಂಡ್ ಆಗಿದೆ.ವಿಕ್ರಮ್ ಲ್ಯಾಂಡರ್ ವಾಲಿದ ಸ್ಥಿತಿಯಲ್ಲಿದೆ ಎಂದುತಿಳಿದುಬಂದಿದೆ. ಆದರೆ ಸಂಪರ್ಕ ಇನ್ನೂಸಾಧ್ಯವಾಗಿಲ್ಲ. ನಾವಿನ್ನೂ ಭರವಸೆ ಕಳೆದುಕೊಂಡಿಲ್ಲ ಎಂದುವಿಜ್ಞಾನಿಗಳು ಹೇಳಿದ್ದಾರೆ.
ಭೂಮಿಯ
ಜತೆ ಸಂಪರ್ಕ ಕಳೆದುಕೊಂಡು ಚಂದ್ರನ ಮೇಲೆ ಅಪ್ಪಳಿಸಿರುವ ಚಂದ್ರಯಾನ-2
ನೌಕೆಯ ‘ಲ್ಯಾಂಡರ್’ ಛಿದ್ರವಾಗಿಲ್ಲ. ಆದರೆ
ವಾಲಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಈ ಹಿನ್ನೆಲೆಯಲ್ಲಿ ಲ್ಯಾಂಡರ್
ಜತೆ ಸಂಪರ್ಕವನ್ನು ಮರುಸ್ಥಾಪಿಸಲು
ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಅವಿರತ
ಪ್ರಯತ್ನವನ್ನು ಮುಂದುವರಿಸಿದ್ದಾರೆ.
ಸೆ.7ರಂದು ನಸುಕಿನ ಜಾವ ಚಂದ್ರನಿಂದ 2.1 ಕಿ.ಮೀ. ಎತ್ತರದಲ್ಲಿರುವಾಗ ನಿಗೂಢ ರೀತಿಯಲ್ಲಿ ಸಂಪರ್ಕ ಕಳೆದುಕೊಂಡಿದ್ದ ಲ್ಯಾಂಡರ್ ಇರುವ ಜಾಗವನ್ನು ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ಆರ್ಬಿಟರ್ ಭಾನುವಾರ ಪತ್ತೆ ಹಚ್ಚಿತ್ತು. ವಿಶೇಷ ಎಂದರೆ, ಇಸ್ರೋ ವಿಜ್ಞಾನಿಗಳು ಯಾವ ಜಾಗದಲ್ಲಿ ಲ್ಯಾಂಡರ್ ಅನ್ನು ಇಳಿಸಲು ಉದ್ದೇಶಿಸಿದ್ದರೋ ಅದಕ್ಕೆ ಸಮೀಪದಲ್ಲೇ ಲ್ಯಾಂಡರ್ ಬಿದ್ದಿರುವುದು ಆರ್ಬಿಟರ್ ಸೆರೆ ಹಿಡಿದಿರುವ ಚಿತ್ರದಲ್ಲಿ ಗೋಚರವಾಗಿದೆ ಎಂದು ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.
ಲ್ಯಾಂಡರ್
ಜತೆಗಿನ ಸಂಪರ್ಕವನ್ನು ಮರುಸ್ಥಾಪಿಸಲು
ಸಾಧ್ಯವೇ ಎಂಬ ನಿಟ್ಟಿನಲ್ಲಿ ಸರ್ವ
ಪ್ರಯತ್ನಗಳನ್ನೂ ವಿಜ್ಞಾನಿಗಳು
ಆರಂಭಿಸಿದ್ದಾರೆ. ಬೆಂಗಳೂರಿನ
ಪೀಣ್ಯದ ಇಸ್ರೋ ಟೆಲಿಮೆಟ್ರಿ, ಟ್ರ್ಯಾಕಿಂಗ್ ಹಾಗೂ
ಕಮಾಂಡ್ ನೆಟ್ವರ್ಕ್ (ಇಸ್ಟ್ರಾಕ್) ಕೇಂದ್ರದಲ್ಲಿನ ವಿಜ್ಞಾನಿಗಳು
ಈ ಸಂಬಂಧ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು
ವಿವರಿಸಿದ್ದಾರೆ.ಲ್ಯಾಂಡರ್ನಲ್ಲಿನ ವ್ಯವಸ್ಥೆ ಚೆನ್ನಾಗಿಯೇ ಕೆಲಸ ಮಾಡುತ್ತಿದ್ದರೆ ಮಾತ್ರ ಸಂಪರ್ಕ ಮರುಸಾಧಿಸಬಹುದು. ಆದರೆ ಆ ಸಂಭವ ಇಲ್ಲದ ಕಾರಣ ಮರುಸಂಪರ್ಕ ಸಾಧ್ಯತೆ ಕ್ಷೀಣವಾಗಿದೆ ಎಂದೂ ಹೇಳಿದ್ದಾರೆ.
ಇಸ್ರೋ ಲ್ಯಾಂಡರ್ ಅನ್ನು ಪತ್ತೆ ಹಚ್ಚಿದ್ದು ಹೇಗೆ?:ಲ್ಯಾಂಡರ್ನಿಂದ ಸಂಪರ್ಕ ಕಡಿತಗೊಂಡ ಹಿನ್ನೆಲೆಯಲ್ಲಿ ಲ್ಯಾಂಡರ್ ಇಳಿಯಲು ನಿಗದಿಯಾಗಿದ್ದ ಸ್ಥಳವನ್ನೇ ಗುರಿಯಾಗಿಸಿ, ಚಂದ್ರನ ಸುತ್ತಲೂ ಸುತ್ತುತ್ತಿರುವ ಆರ್ಬಿಟರ್ ಶನಿವಾರ ಫೋಟೋವೊಂದನ್ನು ಕ್ಲಿಕ್ಕಿಸಿತ್ತು. ಈ ಫೋಟೋದಲ್ಲಿ ಅಸ್ಪಷ್ಟವಸ್ತುವೊಂದು ಗೋಚರವಾಗಿತ್ತು. ಆದರೆ ಈ ವೇಳೆ ಫೋಟೋದಲ್ಲಿ ಸೆರೆಯಾಗಿದ್ದು ಲ್ಯಾಂಡರ್ ಹೌದೋ ಅಲ್ಲವೋ ಎಂಬುದು ಇಸ್ರೋಗೆ ಖಚಿತವಿರಲಿಲ್ಲ. ಅದಕ್ಕಾಗಿ ಅದೇ ಅಕ್ಷಾಂಶ ಮತ್ತು ರೇಖಾಂಶದಲ್ಲಿ ಹಿಂದಿನ ದಿನ ಆರ್ಬಿಟರ್ ತೆಗೆದಿದ್ದ ಫೋಟೋಗಳನ್ನೇ ತಾಳೆ ಹಾಕಲಾಯಿತು. ಈ ವೇಳೆ ಹಿಂದಿನ ದಿನದ ಫೋಟೋದಲ್ಲಿ ಲ್ಯಾಂಡರ್ ಬಿದ್ದ ಸ್ಥಳದಲ್ಲಿ ಯಾವುದೇ ವಸ್ತುಗಳ ಕುರುಹು ಸಿಕ್ಕಿರಲಿಲ್ಲ. ಹೀಗಾಗಿ ತಾವು ಸೆರೆಹಿಡಿದಿದ್ದು ವಿಕ್ರಂ ಲ್ಯಾಂಡರ್ನದ್ದೇ ಎಂದು ಇಸ್ರೋ ವಿಜ್ಞಾನಿಗಳಿಗೆ ಖಚಿತವಾಯ್ತು.
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ನೀರಿನ ಸಂರಕ್ಷಣೆಗಾಗಿ ನ್ಯೂಸ್ 18 ಹಮ್ಮಿಕೊಂಡಿರುವ #Mission Paani ಆಂದೋಲನ ಸಾಕಷ್ಟು ಪರಿಣಾಮಕಾರಿಯಾಗಿದೆ. ಇಶಾ ಫೌಂಡೇಶನ್ ಸಂಸ್ಥಾಪಕ ಸದ್ಗುರು ನೀರಿನ ಸಂರಕ್ಷಣೆ ಕುರಿತು ನ್ಯೂಸ್ 18 ನಡೆಸಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ನೀರನ್ನು ಸಂರಕ್ಷಿಸುವುದು ಹೇಗೆ? ಬರಗಾಲದಿಂದ ತತ್ತರಿಸಿ ಹೋಗಿರುವ ಭೂಮಿಯನ್ನು ಉಳಿಸಿಕೊಳ್ಳುವುದರ ಬಗ್ಗೆ ಮಾಹಿತಿ ನೀಡಿದ್ದಾರೆ. ಕಾಡಿನ ನಾಶವಾಗುತ್ತಿರುವ ಹಿನ್ನೆಲೆ, ಮಳೆ ನೀರು ನದಿಗಳಿಗೆ ಬೇಗನೇ ಹರಿದು ಪ್ರವಾಹಕ್ಕೆ ಕಾರಣವಾಗುತ್ತಿದೆ ಎಂದೂ ಸಹ ತಿಳಿಸಿದರು. ತಮಿಳುನಾಡಿನಲ್ಲಿ ಈ ವರ್ಷ ಬರಗಾಲ ಸೃಷ್ಟಿಯಾಗಿದ್ದು, ಎಲ್ಲೆಡೆ ನೀರಿಗೆ ಹಾಹಾಕಾರ ಶುರುವಾಗಿದೆ….
ಚೀನಾ ದೇಶವು ಅತ್ಯಂತ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅದರಲ್ಲೂ ಅಭಿವೃದ್ಧಿ ಮತ್ತು ಸಾಹಸ ವಿಷಯದಲ್ಲಿ ಚೀನಾದವರು ಬೇರೆ ದೇಶಗಳಿಗಿಂತ ಭಿನ್ನ.ಏಕೆಂದರೆ ಏನಾದರೂ ಹೊಸತೊಂದು ಜಗತ್ತಿಗೆ ತೋರಿಸುತ್ತಾ ಬಂದಿದ್ದಾರೆ. ಈಗ ಇದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಅರಣ್ಯ ನಗರ ನಿರ್ಮಾಣ ಮಾಡುವ ಹೊಸ ಸಾಹಸಕ್ಕೆ ಚೀನಾ ಮುಂದಾಗಿದೆ.
ಪ್ರೀತಿ ಅನ್ನೋದು ನಿಸ್ವಾರ್ಥವಾಗಿರಬೇಕು. ಈ ವಾಕ್ಯಕ್ಕೆ ತಕ್ಕಂತಹ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಸಂತೋಷದಿಂದ ಇರಲಿ ಅಂತಾ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ. ಇದರ ಜೊತೆಗೆ ತಮ್ಮಿಬ್ಬರ ದಾಂಪತ್ಯದಲ್ಲಿ ಹುಟ್ಟಿದ ಮಗುವನ್ನು ಉಡುಗೊರೆಯಾಗಿ ನೀಡಿದ್ದಾನೆ. ಬಿಹಾರದ ಭಗಲ್ಪುರ ಜಿಲ್ಲೆಯ ನಿವಾಸಿ ನಾಲ್ಕು ವರ್ಷಗಳ ಹಿಂದೆ, ಜಾರ್ಖಂಡನ ಗೊಡ್ಡಾ ಜಿಲ್ಲೆಯ ಗ್ರಾಮವೊಂದರ ಯುವತಿಯನ್ನು ಮದುವೆಯಾಗಿದ್ದ. ದಂಪತಿಗೆ ಒಂದು ಮಗುವಿತ್ತು. ಆದ್ರೆ ಕೆಲ ದಿನಗಳ ಹಿಂದೆ ಪ್ರಕರಣವೊಂದರಲ್ಲಿ ಸಿಲುಕಿ ಪತಿ ಜೈಲಿಗೆ ಹೋಗಿದ್ದನು. ಈ ಸಂದರ್ಭದಲ್ಲಿ ಆತನ…
ಆಟವಾಡುವುದೆಂದರೆ…ಯಾವ ಮಕ್ಕಳಿಗೆ ತಾನೇ ಇಷ್ಟವಿಲ್ಲ ಹೇಳಿ.. ಒಂದು ಕಾಲದಲ್ಲಿ ಬಯಲಲ್ಲಿ ಆಟವಾಡುತ್ತಿದ್ದ ಮಕ್ಕಳು ಈಗ ನಾಲಕ್ಕು ಗೋಡೆಗಳ ಮಧ್ಯೆ, ಆನ್ ಲೈನ್ ಆಟಗಳನ್ನು ಆಡುತ್ತಿದ್ದಾರೆ. ಈಗಂತೂ ಸಂಪೂರ್ಣ ಡಿಜಿಟಲ್ ಜಮಾನ. ಎದ್ದರೂ ಕೂತರೂ ಮೊಬೈಲ್ ಕಂಪ್ಯೂಟರ್ಗಳದ್ಧೆ ಹವಾ.. ಅದರಲ್ಲೂ ಪುಟ್ಟ ಮಕ್ಕಳು ಆನ್ ಲೈನ್ ಗೇಮ್`ಗಳಿಗೆಂದರೆ ಇನ್ನಿಲ್ಲದಂತೆ ತೊಡಗಿಕೊಳ್ಳುತ್ತಿದ್ಧಾರೆ.
ಪಂಡಿತ್ ರಾಘವೇಂದ್ರ ಸಾಮ್ವಿ ಗಳು ಶ್ರೀ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಅರ್ಚಕರು ಮಾಂತ್ರಿಕರು 9901077772 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂ ನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇ ಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತು ನೀವು ಉತ್ತರ ತಿಳಿಯಲು ಬಯಸುವಿರಾ? ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ(ಪ್ರೀತಿ ಪ್ರೇಮ ಮದುವೆ ದಾಂಪತ್ಯ ಕುಟುಂಬ ವಿದ್ಯೆ ಉದ್ಯೋಗ ವ್ಯಾಪಾರ ಮಕ್ಕಳು)9901077772 call/ what ಮೇಷ ನಿಮ್ಮ ಬಾಲ್ಯದ…
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 ಮೇಷ(20 ನವೆಂಬರ್, 2018) ಹಣಕಾಸಿನಲ್ಲಿ ಸುಧಾರಣೆ ನೀವು ಪ್ರಮುಖ ಖರೀದಿಗಳನ್ನುಮಾಡುವುದನ್ನು ಅನುಕೂಲಕರವಾಗಿಸುತ್ತದೆ. ಮನೆಯಲ್ಲಿನ ಕೆಲವು ಬದಲಾವಣೆಗಳು ನಿಮ್ಮನ್ನು ಭಾವುಕರನ್ನಾಗಿಸಬಹುದು- ಆದರೆ ನಿಮಗೆ ಮುಖ್ಯವಾದವರಿಗೆನೀವು…