News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಗೃಹಜ್ಯೋತಿ ಯೋಜನೆಗೆ ಅರ್ಜಿಸಲ್ಲಿಕೆ ಹೇಗೆ? ಜೂನ್‌ 15 ರಿಂದ ಅರ್ಜಿ ಆಹ್ವಾನ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-35 ಸಾವಿರ ದಂಡ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
2000 ರೂಪಾಯಿ ಮುಖಬೆಲೆ ನೋಟು ಚಲಾವಣೆಯನ್ನು ಹಿಂಪಡೆದ ಭಾರತೀಯ ರಿಸರ್ವ್ ಬ್ಯಾಂಕ್ !
ಬಿಜೆಪಿ 2023 ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?
ಬಂಗಾರಪೇಟೆ (ಮೀ) ವಿಧಾನಸಭಾ ಕ್ಷೇತ್ರದ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿ
ಹಸುವಿನ ಹೊಟ್ಟೆಯಲ್ಲಿ ಇತ್ತು ಬರೋಬರಿ 15 ಕೆಜಿ !!!!!!!!!
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-20 ಸಾವಿರ ದಂಡ
ಉಪಯುಕ್ತ ಮಾಹಿತಿ

ಲೈಫಲ್ಲಿ ಗೆಲ್ಲಲೇಬೇಕು ಅನ್ನೋರು, ಇದನ್ನ ಮಿಸ್ ಮಾಡದೇ ಓದಿ..!

2127

ಸೋಲು.. ಯಾರಿಗಾಗಿಲ್ಲ..? ಎಷ್ಟು ಜನ ಎದುರಿಸಿಲ್ಲ..? ಸೋಲದೇ ಇದ್ದವನು ಗೆದ್ದ ಉದಾಹರಣೇನೇ ಇಲ್ಲ..! ಸೋತಾಗ ಸತ್ತೆ ಅನ್ಕೊಂಡ್ರೆ ನೀವು ಶಾಶ್ವತವಾಗಿ ಸೋತಹಾಗೆ..! ಸೋತಾಗ, ಇದ್ಯಾವ ಸೋಲು, ನಾನು ಗೆದ್ದೇ ಗೆಲ್ತೀನಿ ಅನ್ಕೊಂಡ್ರೆ ಮಾತ್ರ ಲೈಫ್ ಜಿಂಗಾಲಾಲ..! ತುಂಬಾ ಸೋತವನನ್ನು ಕೇಳಿನೋಡಿ, ಇನ್ನಾಗಲ್ಲ ನಾನು ಸೋತು ಸುಣ್ಣ ಆಗ್ಬಿಟ್ಟಿದೀನಿ.. ಏನ್ ಮಾಡುದ್ರೂ ಕೈ ಹತ್ತುತಿಲ್ಲ.. ಏನ್ ಮಾಡ್ಬೇಕೋ ಗೊತ್ತಾಗ್ತಿಲ್ಲ ಅಂತ ಹೇಳ್ತಾರೆ.! ಅದೇ ಗೆದ್ದವರನ್ನು ಮಾತಾಡ್ಸಿ ನೋಡಿ. ಸೋತವನಿಗಿಂತ ಜಾಸ್ತಿ ಸಲ ಅವರೂ ಸೋತಿರ್ತಾರೆ..!

ಅಂತಹ ಸೋತು ಗೆದ್ದವರಲ್ಲಿ ಕೆಲವರ ಬಗ್ಗೆ ತಿಳಿಯೋಣ:-

ನಮ್ಮ ಡಾ. ಅಬ್ದುಲ್ ಕಲಾಂರವರು ಪೈಲಟ್ ಸಂದರ್ಶನದಲ್ಲಿ ತಿರಸ್ಕರಿಸಲಪಟ್ಟವರು, ಮುಂದೆ ಆದದ್ದೆಲ್ಲಾ ಇಂದು ಇತಿಹಾಸ.

ನರೇಂದ್ರ ಮೋದಿಯವರು ಚಿಕ್ಕವರಿದ್ದಾಗ ಚಹಾ ಮಾರುತ್ತಿದ್ದರು, ಅವರ ಸತತ ಪ್ರಯತದ ಫಲವಾಗಿ  ಇಂದು ಅವರು ಭಾರತದ ಪ್ರಧಾನ ಮಂತ್ರಿಯಾಗಿದ್ದಾರೆ.

ಅಮಿತಾಬ್ ಬಚ್ಚನ್’ರಿಗೆ ಆಲ್ ಇಂಡಿಯಾ ರೇಡಿಯೋ ನಿನ್ನ ಧ್ವನಿ ಕರ್ಕಶವಾಗಿದೆ ಎಂದು ಕೆಲಸ ನಿರಾಕರಿಸುತ್ತು.

ಧೀರುಬಾಯಿ ಅಂಬಾನಿಯವರು ಒಂದು ಕಾಲದಲ್ಲಿ ಪೆಟ್ರೋಲ್ ಬಂಕ್’ನಲ್ಲಿ ಕೆಲಸ ಮಾಡುತ್ತಿದ್ದವರು. ಮುಂದೆ ಭಾರತದ ನಂಬರ್ ಒನ್ ಶ್ರೀಮಂತರಾದರು.

ಥಾಮಸ್ ಆಲ್ವಾ ಎಡಿಸನ್ ವಿದ್ಯುತ್ ಬಲ್ಬ್ ಕಂಡುಹಿಡಿಯಲು 10000 ಬಾರಿ ಪ್ರಯತ್ನ ಪಟ್ಟು ಸೋತಿದ್ದರು, ಆದರೆ ಪ್ರಯತ್ನ ಬಿಡಲಿಲ್ಲ..

ಆಲ್ಬರ್ಟ್ ಐನಸ್ಟೀನ್’ರ ಶಾಲಾ ಶಿಕ್ಷಕಿ ಇವನೊಬ್ಬ ಹುಚ್ಚ ಮತ್ತು ಬುದ್ದಿಹೀನ ಮಗು ಎಂದಿದ್ದರು, ಮತ್ತು ಐನಸ್ಟೀನ್’ರಿಗೆ 4 ವರ್ಷದವರಿಗೂ ಮಾತನಾಡಲು 7 ವರ್ಷದವರೆಗೂ ಓದಲು ಬರುತ್ತಿರಲಿಲ್ಲ.

ಲಿಯೋನಲ್ ಮೆಸ್ಸಿ ತಮ್ಮ ಪುಟ್’ಬಾಲ್ ಟ್ರೈನಿಂಗ್ ಹಣಕ್ಕಾಗಿ ಚಹಾ ಅಂಗಡಿಯಲ್ಲಿ ಸೇವನಕನಾಗಿ ಕೆಲಸ ಮಾಡುತ್ತಿದ್ದರು.

ಬಿಲ್ ಗೇಟ್ಸ್ ಕಾಲೇಜಿನಲ್ಲಿ ಫೇಲ್ ಆಗಿ ಕಾಲೇಜಿನಿಂದ ಹೊರಬಿದ್ದವರು. ಇವತ್ತಿನ ಜಗತ್ತಿನ ನಂಬರ್ ಒನ್ ಕುಬೇರರು.

KFC ಸಂಸ್ಥಾಪಕ ಕೊಲೊನೆಲ್ ಸ್ಯಾಂಡಸ್ ತನ್ನ 61ರ ವಯಸ್ಸಿನಲ್ಲಿ 1009 ಬಾರಿ ತನ್ನ ಕೈ ರುಚಿಯ ಚಿಕನ್ ಮಾಡಿ ಮಾರಲು ಹೋಗಿ ಸೋತಿದ್ದರು, ಆದರೆ ಪ್ರಯತ್ನ ನಿಲ್ಲಿಸಲಿಲ್ಲ.

ಸ್ಟೀವ್ ಜಾಬ್ಸ್ ಒಂದು ಕಾಲದಲ್ಲಿ ಗೆಳೆಯರ ಮನೆಯ ಮೇಲೆ ಮಲಗಿ ಎದ್ದು, ಊಟಕ್ಕಾಗಿ ದೇವಸ್ಥಾನದ ಉಚಿತ ಪ್ರಸಾದ ತಿನ್ನುತ್ತಿದ್ದರು. ಗೆಳೆಯರ ಮನೆಯಲ್ಲಿ ಆಪಲ್ ಕಂಪನಿ ಸ್ಥಾಪಿಸಿದರು. ನಂತರ ನಿಮಗೆ ಗೊತ್ತಿರುವ ಹಾಗೆ ಅವರು ಹಿಂತಿರುಗಿ ನೋಡಲೇ ಇಲ್ಲ.

ಜೆ.ಕೆ. ರೌಲಿಂಗರ ಹ್ಯಾರಿ ಪಾಟರ್ ಕೃತಿಯು 12ಬಾರಿ ಪಬ್ಲಿಷರ್’ಗಳಿಂದ ತಿರಸ್ಕ್ರುತವಾಗಿತ್ತು.ಆದ್ರೆ ಅವರು ಪ್ರಯತ್ನ ಬಿಡಲಿಲ್ಲ.

ಮೈಕಲ್ ಜೋರ್ಡಾನ್ ಹೈ ಸ್ಕೂಲ್ ಬಾಸ್ಕೆಟ್ ಬಾಲ್ ತಂಡದಿಂದ ಹೊರದಬ್ಬಲ್ಪಟ್ಟವರು.ಇಂದು ಜಗತ್ತಿನ ನಂಬರ್ ಒನ್ ಬಾಸ್ಕೆಟ್ ಬಾಲ್ ಆಟಗಾರ.

 

 

 

 

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ