ರಾಜಕೀಯ

ರಾಜ್ಯದಲ್ಲಿ ಲೋಕಸಭಾ ಫಲಿತಾಂಶ 4 ಗಂಟೆ ವಿಳಂಬ!

339

ಪ್ರತಿ ಲೋಕಸಭಾ ಕ್ಷೇತ್ರಗಳಲ್ಲಿ 40 ವಿವಿ ಪ್ಯಾಟ್ ಮತ ಯಂತ್ರಗಳ ಎಣಿಕೆ ಮಾಡಬೇಕು. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣಾ ಫಲಿತಾಂಶ 4 ಗಂಟೆ ತಡವಾಗಿ ಪ್ರಕಟವಾಗಬಹುದು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್ ಮಾಹಿತಿ ನೀಡಿದ್ದಾರೆ.ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮೇ 23(ನಾಳೆ)ರಂದು ಬೆಳಗ್ಗೆ 8 ಗಂಟೆಗೆ ಮೊದಲು ರಿಟರ್ನಿಂಗ್ ಅಧಿಕಾರಿಯ ಕಚೇರಿಯಲ್ಲಿ ಅಂಚೆ ಮತಪತ್ರಗಳ ಎಣಿಕೆ ಆರಂಭಿಸಲಾಗುತ್ತದೆ. ಬಳಿಕ ಇವಿಎಂಗಳಲ್ಲಿನ 28 ಲೋಕಸಭಾ ಕ್ಷೇತ್ರಗಳ ಮತ ಎಣಿಕೆ ಆರಂಭವಾಗುತ್ತದೆ ಎಂದು ತಿಳಿಸಿದರು.


ಹಿಂದೆ 12 ಗಂಟೆಗೆ ಮುಗಿಯುತ್ತಿತ್ತು. ಆದರೆ ಈಗ ಒಂದು ರೌಂಡ್ ಎಣಿಕೆಗೆ 45 ನಿಮಿಷ ಬೇಕಾಗುತ್ತದೆ. 57 ಅಭ್ಯರ್ಥಿಗಳು ಬೆಳಗಾವಿ ಕ್ಷೇತ್ರದಲ್ಲಿ ಇದ್ದಾರೆ. ಅಲ್ಲದೆ ನಾವು ಬೇಗ ಎಣಿಕೆ ಮಾಡಲು ಸಾಧ್ಯವಿಲ್ಲ. ಬೇಗ ಎಣಿಕೆ ಮುಗಿಸುವ ಪ್ರಯತ್ನ ಮಾಡುತ್ತೇವೆ. ಆದರೆ ಸ್ವಲ್ಪ ತಡ ಆಗಬಹುದು. 3 ಗಂಟೆಯ ಒಳಗೆ ಬಹುತೇಕ ರಿಸಲ್ಟ್ ಕೊಡುತ್ತೇವೆ. ಸಂಜೆ 6 ಗಂಟೆ ಒಳಗೆ 28 ಕ್ಷೇತ್ರಗಳ ರಿಸಲ್ಟ್ ಕೊಡಲಾಗುತ್ತದೆ ಎಂದು ಹೇಳಿದರು.ಇದೂವರೆಗೆ 98, 606 ಪೋಸ್ಟಲ್ ಬ್ಯಾಲೆಟ್ ಬಂದಿದೆ. 25, 768 ಸರ್ವಿಸ್ ವೋಟರ್ಸ್ ಪೋಸ್ಟಲ್ ಬ್ಯಾಲೆಟ್ ಬಂದಿದೆ. 5 ವಿವಿ ಪ್ಯಾಟ್ ಗಳನ್ನು ವೇಗವಾಗಿ ಎಣಿಕೆ ಮಾಡಲಾಗುತ್ತದೆ ಎಂದರು.


ಎಣಿಕೆ ಕಾರ್ಯ: ಅಧಿಕೃತ ಪಾಸ್ ಇದ್ದವರಿಗೆ ಮಾತ್ರ ಎಣಿಕಾ ಕೇಂದ್ರಕ್ಕೆ ಪ್ರವೇಶ ಕೊಡಲಾಗುವುದು. ಪೊಲೀಸ್ ಸಿದ್ಧತೆ ಮಾಡಲಾಗಿದೆ. ಕೌಂಟರ್ ಸೆಂಟರ್ ಗೆ ವೀಕ್ಷಕರಿಗೆ ಹೊರತುಪಡಿಸಿ ಯಾರೂ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. 18 ರಿಂದ 33 ರೌಂಡ್ಸ್ ಎಣಿಕೆ ನಡೆಯುತ್ತದೆ. ಮತದಾರರ ಸಂಖ್ಯೆ ಆಧಾರದಲ್ಲಿ ಎಷ್ಟು ರೌಂಡ್ಸ್ ಅನ್ನೋದು ಡಿಸೈಡ್ ಆಗುತ್ತದೆ. ಬೆಂಗಳೂರು ಸೆಂಟ್ರಲ್ ಕ್ಷೇತ್ರದಲ್ಲಿ ಅತೀ ಹೆಚ್ಚು ರೌಂಡ್ಸ್ ಮತ ಎಣಿಕೆ ನಡೆಯುತ್ತದೆ ಎಂದು ಅವರು ಮಾಹಿತಿ ನೀಡಿದರು.

ಕೌಂಟಿಂಗ್ ಟೇಬಲ್ ಅಳವಡಿಕೆ: ಮತ ಎಣಿಕೆಗೆ 28 ಕ್ಷೇತ್ರಗಳಲ್ಲಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗಿದೆ. ಅಡಿಷನಲ್ ಎಆರ್ ಓ- 180 ಮಂದಿ ಇರಲಿದ್ದಾರೆ. 28 ಲೋಕಸಭಾ ಹಾಗೂ 2 ಕ್ಷೇತ್ರಗಳ ಬೈ ಎಲೆಕ್ಷನ್ ಮತ ಎಣಿಕೆ 23ರಂದು ಬೆಳಗ್ಗೆ 8 ಗಂಟೆಗೆ ನಡೆಯುತ್ತದೆ. ಶೇ. 80.23 ಅತೀ ಹೆಚ್ಚು ಮತದಾನ ಮಂಡ್ಯದಲ್ಲಿ ಆಗಿದೆ. ದಕ್ಷಿಣ ಕನ್ನಡದಲ್ಲಿ ಶೇ. 77.90, ತುಮಕೂರಿನಲ್ಲಿ ಶೇ.77.90 ಮತದಾನವಾಗಿತ್ತು. ಶೇ.53.47 ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತೀ ಕಡಿಮೆ ಮತದಾನವಾಗಿದೆ. 28 ಕ್ಷೇತ್ರಗಳಲ್ಲಿ 461 ಮಂದಿ ಕಣದಲ್ಲಿದ್ದಾರೆ. 3224 ಕೌಂಟಿಂಗ್ ಟೇಬಲ್ ಗಳನ್ನ ಅಳವಡಿಸಲಾಗಿದೆ ಎಂದರು.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ