ಸಂಬಂಧ

ಮದುವೆಯಾದ ಹುಡುಗ ನಿಮಗೆ ತಕ್ಕ ವರನೇ ಎಂದು ತಿಳಿದುಕೊಳ್ಳುವುದು ಹೇಗೇ..? ಈ ಗುಣಗಳು ನಿಮ್ಮ ಸಂಗಾತಿಯಲ್ಲಿದ್ದರೆ ಆತ ನಿಮಗೆ ತಕ್ಕ ವ್ಯಕ್ತಿ ಎಂದು ಅರ್ಥ…

783

ಮದುವೆ ಎಂಬುದೇ ವಿಚಿತ್ರ ನಂಟು. ಎಲ್ಲಿಯೋ ಇದ್ದ ಹುಡುಗ – ಹುಡುಗಿ ಮದುವೆ ಎಂಬ ಸಂಬಂಧ ದೊಂದಿಗೆ ಬೆಸೆಯುತ್ತದೆ. ಹುಡುಗ ಏನೋ ಸಂತಸದಲ್ಲೇ ಮದುವೆಯಾಗುತ್ತಾನೆ. ಆದರೆ……

ಹುಡುಗ ಏನೋ ಸಂತಸದಲ್ಲೇ ಮದುವೆಯಾಗುತ್ತಾನೆ. ಆದರೆ ಹುಡುಗಿ ತಾನು ಹುಟ್ಟಿ ಬೆಳೆದ ಮನೆ, ತನ್ನ ಕುಟುಂಬ ತನ್ನವರು ಎಂಬ ಎಲ್ಲಾ ಸಂಬಂಧವನ್ನು ಬಿಟ್ಟು ಇನ್ನೊಂದು ಮನೆಗೆ ಜೀವನ ಪೂರ್ತಿ ಕಳೆಯಲು ಹೋಗಬೇಕು. ಇಷ್ಟೆಲ್ಲಾ ಆದ ಮೇಲೆ ಆತನನ್ನೇ ನಿಮ್ಮ ಜೀವನವಾಗಿ ಸ್ವೀಕರಿಸಲೇಬೇಕು.

ಆದರೆ ಮದುವೆಯಾದ ಹುಡುಗ ನಿಮಗೆ ತಕ್ಕ ವರನೇ ಎಂದು ತಿಳಿದುಕೊಳ್ಳುವುದು ಹೇಗೇ..? ಈ ಗುಣಗಳು ನಿಮ್ಮ ಸಂಗಾತಿಯಲ್ಲಿದ್ದರೆ ಆತ ನಿಮಗೆ ತಕ್ಕ ವ್ಯಕ್ತಿ ಎಂದು ಅರ್ಥ…

  • ಉತ್ತಮ ಸ್ನೇಹಿತನಂತೆ ಎಲ್ಲಾ ಸಂದರ್ಭದಲ್ಲೂ ನಿಮಗೆ ಸಹಾಯ ಮಾಡುವ ಗುಣವಿರಬೇಕು.
  • ಆತನ ಮಾತು, ಪ್ರೀತಿ ಅಥವಾ ಆತನ ಏನೆ ಮಾಡಿದರೂ ಸಹ ನಿಮಗೆ ಆತ ಇಷ್ಟವಾದರೆ…ನೀವು ನಿಮ್ಮ ಫ್ಯಾಮಿಲಿ ಜೊತೆ ಅಥವಾ ಫ್ರೆಂಡ್ಸ್ ಜೊತೆ ಸಮಯ ಕಳೆಯಲು ಬಯಸಿದಾಗ ನಿಮ್ಮ ಇಷ್ಟದಂತೆ ಇರಲು ಬಿಡುವ ಗುಣ.
  • ನಿಮಗೆ ಯಾವ ಸಂದರ್ಭದಲ್ಲಿ ಸಹಾಯ ಅಥವಾ ಬೆಂಬಲ ಬೇಕು ಎಂಬುದನ್ನು ಅರಿತು ನಿಮ್ಮ ಬೆನ್ನೆಲುಬಾಗಿ ನಿಲ್ಲವಂತಹ ಗುಣವಿರಬೇಕು.
  • ಇದು ಮಹಿಳೆಯರು ಮಾಡುವಂತಹ ಕೆಲಸ. ಅಡುಗೆ ಎಲ್ಲಾ ಮಹಿಳೆಯರೇ ಮಾಡಬೇಕು ಎಂಬುದನ್ನು ಹೇಳದೆ ಯಾವುದೇ ಕೆಲಸದಲ್ಲೂ ನಿಮಗೆ ಜೊತೆಯಾಗಿ ಕೈ ಜೋಡಿಸಿ ನಿಲ್ಲುವ ವ್ಯಕ್ತಿತ್ವ.
  • ನಿಮಗಾಗಿ ಏನು ಬೇಕಾದರೂ ಮಾಡುವ ವ್ಯಕ್ತಿ ನಿಮಗೆ ಸಿಕ್ಕಿದರೆ ನೀವೇ ಲಕ್ಕಿ ಗರ್ಲ್.

ಜೊತೆಯಾಗಿ ನಡೆ ಯುತ್ತಿದ್ದರೆ ಸುಮ್ಮನೆ ಕೈ ಹಿಡಿಯುವುದು, ಸಂತಸವಾದಾಗ ಹಣೆ ಮೇಲೊಂದು ಹೂಮುತ್ತು ನೀಡುವುದು ಹಾಗೂ ನಿಮ್ಮನ್ನು ಅಪ್ಪಿಕೊಳ್ಳುವ ವ್ಯಕ್ತಿತ್ವ ಅವನದ್ದಾಗಿದ್ದರೆ ಆತ ಉತ್ತಮ ವ್ಯಕ್ತಿ. ಜಗಳ ದಾಂಪತ್ಯದಲ್ಲಿ ಸಾಮಾನ್ಯ. ಆದರೆ ಯಾವುದೋ ವಿಷಯಕ್ಕೆ  ಜಗಳವಾಡಿ ನಂತರ ನಿಮ್ಮ ಬಳಿ ಮಾತನಾಡದೆ ಇರಲು ಸಾಧ್ಯವಾಗದೆ ಏನಾದರೊಂದು ನೆಪ ಹೇಳಿ ಮಾತನಾಡುವ ಗುಣ ಹೊಂದಿದ ವ್ಯಕ್ತಿ.

ನಿಮ್ಮಿಬ್ಬರ ಮಾತು ನಡವಳಿಕೆ ಅಥವಾ ಯೋಚನಾ ಲಹರಿ ಒಂದೇ ರೀತಿ ಆಗಿದ್ದರೆ ಮತ್ತೇನು ಬೇಕು ಸಂಸಾರ ಎಂಬ ದೋಣಿಯನ್ನು ಸಾಗಿಸಲು..? ಕೊನೆಗೆ ಪೂರ್ತಿ ಫ್ಯಾಮಿಲಿಯಲ್ಲಿ ನೀವೇ ಅವರಿಗೆ ನಂ 1 ಸ್ಥಾನ ತುಂಬುವವರಾಗಿದ್ದರೆ… ನೀವು ಸರಿಯಾದ ವ್ಯಕ್ತಿಯನ್ನೇ ಮದುವೆಯಾಗಿದ್ದೀರಿ ಎಂದು ಅರ್ಥ.

About the author / 

Basavaraj Gowda

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ