ಸರ್ವರ್ ಸಮಸ್ಯೆಯಿಂದಾಗಿ ಜಗತ್ತಿನಾದ್ಯಂತ ಮೊಬೈಲ್ ಗ್ರಾಹಕರು ವಾಟ್ಸಪ್ ಕ್ರ್ಯಾಶ್ ಆದ ಹಿನ್ನೆಲೆಯಲ್ಲಿ ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗದೆ ಇರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ. ಇಂದು ಮಧ್ಯಾಹ್ನ ವಾಟ್ಸಪ್ ಮೂಲಕ ಸಂದೇಶ ಕಳುಹಿಸಲು ಸಾಧ್ಯವಾಗದಿರುವುದು ಗಮನಕ್ಕೆ ಬಂದಿದೆ ಎಂದು ಮಾಧ್ಯಮದ ವರದಿ ತಿಳಿಸಿದೆ.

ಸುಮಾರು 40 ನಿಮಿಷಗಳ ಕಾಲ ಕ್ರ್ಯಾಶ್ ಆಗಿದ್ದು, ಬಳಿಕ ವಾಟ್ಸಪ್ ಸರ್ವೀಸ್ ಕಾರ್ಯಾರಂಭಿಸಿದೆ ಎಂದು ಮಾಧ್ಯಮದ ವರದಿ ವಿವರಿಸಿದೆ.

ತಮ್ಮ ವಾಟ್ಸಪ್ ನಿಂದ ಸಂದೇಶ ಹೋಗದಿರುವುದನ್ನು ಕಂಡ ಕೆಲವರು ತಮ್ಮ ಗೆಳೆಯರ ಬಳಿ ಪರೀಕ್ಷಿಸಿದ್ದಾರೆ. ಆದರೆ ಗೆಳೆಯರ ವಾಟ್ಸಪ್ ನಿಂದಲೂ ಸಂದೇಶ ಹೋಗಿಲ್ಲ. ಡೌನ್ ಡಿಟೆಕ್ಟರ್ ಪ್ರಕಾರ, ಯುರೋಪನಾದ್ಯಂತ ಸಮಸ್ಯೆ ತಲೆದೋರಿರುವುದಾಗಿ ಹೇಳಿದೆ.
ಸರಿಪಡಿಸಲು ಮುಂದಾದ ವಾಟ್ಸ್‌ಆಪ್:-

ವಾಟ್ಸ್ಆಪ್ ಸರ್ವರ್ ಕ್ರ್ಯಾಶ್ ಆಗಿರುವ ಹಿನ್ನಲೆಯಲ್ಲಿ ಬಳಕೆದಾರರು ಕ್ಷಮೆ ಕೋರಿರುವ ವಾಟ್ಸ್ಆಪ್, ಈ ಸಮಸ್ಯೆಯನ್ನು ಪರಿಹರಿಸಲು ಟೆಕ್ನಿಕಲ್ ಟೀಮ್ ಕೆಲಸ ಮಾಡುತ್ತಿರವುದಾಗಿ ತಿಳಿಸಿದೆ.
ಈ ದೇಶಗಳಲ್ಲೇ ಹೆಚ್ಚು ಸಮಸ್ಯೆ:-

ಭಾರತ, ಸಿಂಗಾಪುರ್, ಮೋಝಾಂಬಿಕ್, ರಷ್ಯಾ, ವಿಯೆಟ್ನಾಮ್, ಇರಾಕ್ ಸೇರಿದಂತೆ ಜಗತ್ತಿನಾದ್ಯಂತ ವಾಟ್ಸಆಪ್ ಸೇವೆ ಸ್ಥಗಿತಗೊಂಡಿದೆ. ಇದರಿಂದಾಗಿ ಮೊಬೈಲ್ ಗ್ರಾಹಕರು ಸಂದೇಶಕ್ಕಾಗಿ ಬೇರೆ ಬೇರೆ ಆಪ್‌ಗಳ ಮೊರೆ ಹೋಗಿದ್ದಾರೆ.