News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ಗೌತಮ ಬುದ್ಧನ ಬಗ್ಗೆ ನೀವು ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು..
ಬೆಳ್ಳುಳ್ಳಿ ತಿಂದರೆ ಕರೋನಾ ವೈರಸ್ ಸಾಯುತ್ತದೆಯೆ..? ಇಲ್ಲಿದೆ ಉತ್ತರ
ಚೈತ್ರ ಮಾಸದಲ್ಲಿ ಬೇವನ್ನು ತಿನ್ನುವುದು ಪ್ರಯೋಜನಕಾರಿ
ವಿಶ್ವದ ನಂಬರ್ 1 ಶ್ರೀಮಂತ ಬೆಜೋಸ್​ನ ಹಿಂದಿಕ್ಕಿದ ಬರ್ನಾರ್ಡ್ ಅರ್ನಾಲ್ಟ್
ಕೊರೊನಾ 3ನೇ ಅಲೆ ಎದುರಿಸುವುದಕ್ಕೆ ರಾಜ್ಯ ಸರ್ಕಾರ ಸಿದ್ಧತೆ; ಆಸ್ಪತ್ರೆಗಳಲ್ಲೇ ಆಕ್ಸಿಜನ್ ಪ್ಲಾಂಟ್ ತೆರೆಯಲು ಚರ್ಚೆ
ವಾಸ್ಕೋಡಿಗಾಮ ಭಾರತಕ್ಕೆ ಬಂದು ಇಂದಿಗೆ 520 ವರ್ಷ! ಹೇಗಿತ್ತು ಆತನ ಪ್ರಯಾಣ?
ಮಾರಕ ಕರೋನಾ ಬಗ್ಗೆ ನಾವೆಷ್ಟು ತಿಳಿದಿದ್ದೇವೆ ಮತ್ತು ನಾವು ಏನೆಲ್ಲಾ ತಿಳಿಯಬೇಕು
ಉಬ್ಬಸ ಸಮಸ್ಯೆಗೆ ಮನೆ ಮದ್ದು
ಹೃದಯಾಘಾತ ( Heart attack ) ತಪ್ಪಿಸಲು ಇಲ್ಲಿವೆ ಸಿಂಪಲ್ ಟಿಪ್ಸ್
ಮಂಗಳ ಗ್ರಹ
ದೇಶ-ವಿದೇಶ

ಭಾರತದಲ್ಲಿ ಪತ್ನಿಯನ್ನು ಬಿಟ್ಟು ವಿದೇಶಗಳಿಗೆ ಹೋಗುವ ಪತಿಯರಿಗೆ ದೊಡ್ಡ ಶಾಕ್..!ತಿಳಿಯಲು ಈ ಲೇಖನ ಓದಿ…

322

ವಿದೇಶಗಳಲ್ಲಿ ಉದ್ಯೋಗ ಮಾಡುತ್ತಾ.. ಕೋಟ್ಯಂತರ ಆಸ್ತಿ ಸಂಪಾದಿಸಿದ್ದೇವೆ… ಎಂದು ಬಹಳಷ್ಟು ಮಂದಿ ಎನ್‌ಆರ್‌ಐಗಳು ನಮ್ಮ ದೇಶದ ಯುವತಿಯನ್ನು ಮದುವೆಯಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಯುವತಿಯರ ತಂದೆತಾಯಿ ಸಹ ಆ ಯುವಕ ಎಂತಹವನು ಎಂದು ಆಲೋಚಿಸದೆ, ಹಿಂದೆ ಮುಂದೆ ನೋಡದೆ ಲಕ್ಷಾಂತರ ವರದಕ್ಷಿಣೆ ಸುರಿದು ತಮ್ಮ ಹೆಣ್ಣುಮಕ್ಕಳ ಮದುವೆ ಮಾಡುತ್ತಿದ್ದಾರೆ. ಆದರೆ ಇದೆಲ್ಲಾ ಚೆನ್ನಾಗಿದೆ. ಆದರೆ ಆ ಎನ್‌ಆರ್‌ಐ ಅಳಿಯ, ತಮ್ಮ ಮಗಳನ್ನು ಗರ್ಭಿಣಿ ಮಾಡಿ, ಅಥವಾ ಇನ್ಯಾವುದೋ ಕಾರಣಗಳಿಂದ ಆಕೆಯನ್ನು ಬಿಟ್ಟುಬಿಟ್ಟು ವಿದೇಶಗಳಿಗೆ ಹೋಗುತ್ತಿದ್ದಾನೆ. ಅಂತಹ ಸಮಯದಲ್ಲಾಗುತ್ತದೆ ಅವಸ್ಥೆ. ಇಂದಿನ ಬಹಳಷ್ಟು ಹೆಣ್ಣುಮಕ್ಕಳು ಇಂತಹ ತೊಂದರೆ ಅನುಭವಿಸುತ್ತಿದ್ದಾರೆ. ತೀವ್ರ ಸಮಸ್ಯೆಗಳ ಸುಳಿಗೆ ಸಿಗುತ್ತಿದ್ದಾರೆ. ಆದರೆ ಕೇಂದ್ರ ಸರಕಾರ ಶೀಘ್ರದಲ್ಲೇ ಇಂತಹ ಯುವತಿಯರಿಗೆ ಒತ್ತಾಸೆಯಾಗಿ ಒಂದು ಹೊಸ ಕಾನೂನು ತರಲಿದೆ.

ಇನ್ನು ಮುಂದೆ ಎನ್‌ಆರ್‌ಐಗಳು ಯಾರಾದರೂ ಸರಿ… ಭಾರತದಲ್ಲಿ ಯುವತಿಯರು ಮದುವೆ ಮಾಡಿಕೊಂಡು ಅವರೊಂದಿಗೆ ಸ್ವಲ್ಪ ಸಮಯ ಕಳೆದು ಬಳಿಕ ಅವರನ್ನು ಬಿಟ್ಟುಬಿಟ್ಟು ವಿದೇಶಗಳಿಗೆ ಹೋಗಿ ಇನ್ನು ಅವರು ಮರಳಿ ಬಾರದಿದ್ದರೆ ಅಂತಹವರಿಗೆ ಭಾರತದಲ್ಲಿ ಇರುವ ಆಸ್ತಿಯನ್ನು ಸರಕಾರ ಅಟ್ಯಾಚ್ ಮಾಡಿಕೊಳ್ಳುತ್ತದೆ.

ಆರಂಭದಲ್ಲಿ ಮೂರು ಸಲ ಅಂತಹ ಎನ್‌ಆರ್‌ಐಗಳಿಗೆ ಕೇಂದ್ರ ನೋಟೀಸ್ ಕಳುಸಲಿದೆ. ಅದಕ್ಕೆ ಪ್ರತಿಕ್ರಿಯಿಸದಿದ್ದರೆ ಆ ಎನ್‌ಆರ್‌ಐ ಬಾರದೆ ತಪ್ಪಿಸಿಕೊಂಡು ಓಡಾಡುತ್ತಿದ್ದಾನೆಂದು ಭಾವಿಸಿ ಆತನ ಮೇಲೆ ಪ್ರಕರಣ ದಾಖಲಿಸುತ್ತಾರೆ. ಅಷ್ಟೇ ಅಲ್ಲ, ಅವರಿಗೆ ಭಾರತದಲ್ಲಿ ಇರುವ ಆಸ್ತಿಗಳನ್ನು ಅಟ್ಯಾಚ್ ಮಾಡಿ ಸ್ವಾಧೀನ ಪಡಿಸಿಕೊಳ್ಳುತ್ತಾರೆ.

ಮೇಲೆ ತಿಳಿಸಿದ ಕಾನೂನನ್ನು ಶೀಘ್ರದಲ್ಲೇ ಜಾರಿಗೆ ತರಲಿದ್ದಾರೆ. ಇದರ ಬಗ್ಗೆ ಈಗಾಗಲೇ ಕೇಂದ್ರ ಮಹಿಳಾ ಶಿಶು ಸಂರಕ್ಷಣಾ ಇಲಾಖೆ ಸಚಿವೆ ಮೇನಕಾ ಗಾಂಧಿ ನೇತೃತ್ವದಲ್ಲಿ ಜಾರಿಗೆ ತರುವ ಕೆಲಸಗಳು ನಡೆಯುತ್ತಿವೆ. ಶೀಘ್ರದಲ್ಲೇ ಈ ಕಾನೂನು ಜಾರಿಗೆ ಬರಲಿದೆ. ಇದು ಜಾರಿಗೆ ಬಂದರೆ ಆಗ ಎನ್‌ಆರ್‌ಐಗಳು ಸುಳಿಗೆ ಸಿಲುಕಿ ತೊಂದರೆ ಅನುಭವಿಸುತ್ತಿರುವ ಮಹಿಳೆಯರಿಗೆ ಸಹಕಾರಿಯಾಗಲಿದೆ.

ದೇಶದಲ್ಲಿ ಈಗಾಗಲೆ ಮಹಿಳೆಯರನ್ನು ಬಿಟ್ಟುಬಿಟ್ಟ ಅಂತಹ ಎನ್‌ಆರ್‌ಐ ಪ್ರಕರಣಗಳು 3328ರವೆಗೂ ಇವೆ. ಈ ಹಿನ್ನೆಲೆಯಲ್ಲಿ ಈ ಕಾನೂನು ಜಾರಿಗೆ ಬಂದರೆ ಆಗ ಅಂತಹ ಮಹಿಳೆಯರಿಗೆ ಸಾಕಷ್ಟು ಸಹಕಾರಿಯಾಗಲಿದೆ ಎಂದು ಸರಕಾರ ಭಾವಿಸುತ್ತಿದೆ

 

About the author / 

Nimma Sulochana

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ