ಸಿನಿಮಾ

ಬಿಗ್ ಬಾಸ್ ಸಂಚಿಕೆ-5ರಲ್ಲಿ ನೀವೂ ಸಹ ಸ್ಪರ್ಧಿಸಬಹುದು!ಹೇಗಂತೀರಾ?ಈ ಲೇಖನಿ ಓದಿ….

2582

ಕನ್ನಡದ ಖಾಸಗಿ ಚಾನಲ್ ನಡೆಸುವ, ಕನ್ನಡದ ರಿಯಾಲಿಟಿ ಶೋ ‘ಬಿಗ್ ಬಾಸ್’ ಕಾರ್ಯಕ್ರಮ ಈಗಾಗಲೇ ತುಂಬಾ ಜನಪ್ರಿಯವಾಗಿದೆ. ನಿಮಗೆ ಗೊತ್ತಿರುವ ಹಾಗೆ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಇಲ್ಲಿಯವರಿಗೂ ವಿವಿಧ ಕ್ಷೇತ್ರಗಳಲ್ಲಿ ಗುರ್ತಿಸಿಕೊಂಡ ಸೆಲೆಬ್ರೆಟಿಗಳಿಗೆ ಮಾತ್ರ ಭಾಗವಹಿಸುವುದಕ್ಕೆ ಅವಕಾಶವಿತ್ತು.

ಆದ್ರೆ ಈಗ ಬಿಗ್ ಬಾಸ್ ಜನಪ್ರಿಯತೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗ್ತಾನೇ ಇದ್ದು, ಬಿಗ್ ಬಾಸ್ ಮೂಲಕ ಮತ್ತೊಂದು ಹೊಸ ದಾಖಲೆ ಮಾಡುವ ಪ್ರಯತ್ನ ಕೂಡ ನಡೆದಿದೆ. ಅದೇನಂದ್ರೆ ಮುಂದೆ ಬರಲಿರುವ ಬಿಗ್ ಬಾಸ್ ಸೀಸನ್ 5ರಲ್ಲಿ ಪಾಲ್ಗೊಳ್ಳಲು ವಾಹಿನಿ ಜನಸಾಮಾನ್ಯರಿಗೂ ಅವಕಾಶ ಕಲ್ಪಿಸಿದೆ.

ಬಿಗ್ ಬಾಸ್ ಸೀಸನ್ 5ರಲ್ಲಿ ಜನಸಾಮಾನ್ಯರಿಗೂ ಅವಕಾಶ…            

ಬಿಗ್ ಬಾಸ್ ನಲ್ಲಿ ಭಾಗವಹಿಸುವ ಆಸಕ್ತಿ ಉಳ್ಳವರು ಆನ್ ಲೈನ್ ಆಡಿಶನ್ ನಲ್ಲಿ ತಮ್ಮ ಅದೃಷ್ಟ ಪರೀಕ್ಷಿಸಬಹುದು. ನೀವ್ಯಾಕೆ ಬಿಗ್ ಬಾಸ್ ಸೀಸನ್ 5ರಲ್ಲಿ ಭಾಗವಹಿಸಲು ಇಷ್ಟಪಡುತ್ತೀರಾ? ಇತರರಿಗಿಂತ ನೀವು ಅರ್ಹರೆಂದು ನಿಮಗೇಕೆ ಅನಿಸುತ್ತದೆ? ಇಂತಹ ಸರಳ ಪ್ರಶ್ನೆಗಳನ್ನು ಕೇಳಲಾಗುತ್ತದೆ.

ಆಡಿಶನ್ ಗೆ ರಿಜಿಸ್ಟ್ರೇಶನ್ ಈಗಾಗಲೇ ಓಪನ್ ಆಗಿದೆ. ಆಡಿಶನ್ ಮುಗಿದ ಬಳಿಕ ವಿಜೇತರ ಹೆಸರನ್ನು ಪ್ರಕಟಿಸಲಾಗುತ್ತದೆ. ಬಿಗ್ ಬಾಸ್ ಸೀಸನ್ 5 ಸಪ್ಟೆಂಬರ್ ನಲ್ಲಿ ಆರಂಭವಾಗಲಿದ್ದು, ಈ ಆಡಿಶನ್ ನಲ್ಲಿ ಗೆದ್ದವರು ಬಿಗ್ ಬಾಸ್ ಸ್ಪರ್ಧೆಯಲ್ಲಿ ಭಾಗವಹಿಸಬಹುದು.

ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ಬಿಗ್ ಬಾಸ್ ಸೀಸನ್ 5’ ಪ್ರಸಾರವಾಗಲಿದೆ. ನಟ ಕಿಚ್ಚ ಸುದೀಪ್ ಕಾರ್ಯಕ್ರಮದ ನಿರೂಪಣೆ ಮಾಡಲಿದ್ದಾರೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಸುದ್ದಿ

    ಶಾಕಿಂಗ್ ಸುದ್ದಿ..!ಪ್ರೀತಿಸಿದ ಯುವಕನೊಂದಿಗೆ ತನ್ನ ಪತ್ನಿಯನ್ನು ಮದ್ವೆ ಮಾಡಿದ್ದಲ್ಲದೇ ತನ್ನ ಮಗುವನ್ನು ಧಾರೆ ಎರೆದ ಪತಿಮಹಾರಾಯ..!

    ಪ್ರೀತಿ ಅನ್ನೋದು ನಿಸ್ವಾರ್ಥವಾಗಿರಬೇಕು. ಈ ವಾಕ್ಯಕ್ಕೆ ತಕ್ಕಂತಹ ಘಟನೆಯೊಂದು ಬಿಹಾರದಲ್ಲಿ ನಡೆದಿದೆ. ವ್ಯಕ್ತಿಯೊಬ್ಬ ತನ್ನ ಪತ್ನಿ ಸಂತೋಷದಿಂದ ಇರಲಿ ಅಂತಾ ಆಕೆಯ ಪ್ರಿಯಕರನೊಂದಿಗೆ ಮದುವೆ ಮಾಡಿಸಿದ್ದಾನೆ. ಇದರ ಜೊತೆಗೆ ತಮ್ಮಿಬ್ಬರ ದಾಂಪತ್ಯದಲ್ಲಿ ಹುಟ್ಟಿದ ಮಗುವನ್ನು ಉಡುಗೊರೆಯಾಗಿ ನೀಡಿದ್ದಾನೆ. ಬಿಹಾರದ ಭಗಲ್ಪುರ ಜಿಲ್ಲೆಯ ನಿವಾಸಿ ನಾಲ್ಕು ವರ್ಷಗಳ ಹಿಂದೆ, ಜಾರ್ಖಂಡನ ಗೊಡ್ಡಾ ಜಿಲ್ಲೆಯ ಗ್ರಾಮವೊಂದರ ಯುವತಿಯನ್ನು ಮದುವೆಯಾಗಿದ್ದ. ದಂಪತಿಗೆ ಒಂದು ಮಗುವಿತ್ತು. ಆದ್ರೆ ಕೆಲ ದಿನಗಳ ಹಿಂದೆ ಪ್ರಕರಣವೊಂದರಲ್ಲಿ ಸಿಲುಕಿ ಪತಿ ಜೈಲಿಗೆ ಹೋಗಿದ್ದನು. ಈ ಸಂದರ್ಭದಲ್ಲಿ ಆತನ…

  • ಸುದ್ದಿ

    BSNL ಲ್ಯಾಂಡ್ ಲೈನ್ ಫೋನ್ ಬಳಸುವವರಿಗೆ ಬಹುಮಾನವಾಗಿ ಕೊಡಲಿದೆ ದುಡ್ಡು..!ಯಾಕೆ ಗೊತ್ತಾ?

    ಸರ್ಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿ BSNL (ಭಾರತ್ಸಂಚಾರ್ ನಿಗಮ್ ಲಿಮಿಟೆಡ್) ವಿಶಿಷ್ಟವಾದ ಯೋಜನೆಯೊಂದನ್ನು ಆರಂಭಿಸಿದೆ. ಇದು ಲ್ಯಾಂಡ್ ಲೈನ್ಹಾಗೂ ಬ್ರ್ಯಾಡ್ ಬ್ಯಾಂಡ್ ಬಳಕೆದಾರರಿಗೆ ಮಾತ್ರ ಅನ್ವಯ ಆಗುತ್ತದೆ. ಏನು ಈ ವಿಶಿಷ್ಟ ಯೋಜನೆ ಅಂತೀರಾ? 5 ನಿಮಿಷದ ವಾಯ್ಸ್ ಕಾಲ್ ಮಾಡಿದರೆ ಬಿಎಸ್ ಎನ್ ಲ್ ನಿಂದಲೇ 6 ಪೈಸೆ ನೀಡಲಾಗುತ್ತದೆ. ಹೌದು, ಸರಿಯಾಗಿಯೇ ಓದುತ್ತಾ ಇದ್ದೀರಾ. ಕರೆಮಾಡಿ, ಐದು ನಿಮಿಷ ಮಾತನಾಡಿದರೆ ಆರು ಪೈಸೆ ನೀಡುವ ಸ್ಕೀಂ ಇದು. ಭಾರತದಲ್ಲೇ ಇಂಥ ಯೋಜನೆ ಇದೇ ಮೊದಲ…

  • ಜ್ಯೋತಿಷ್ಯ

    ದಿನ ಭವಿಷ್ಯ ಮಂಗಳವಾರ, ನಿಮ್ಮ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(19 ಫೆಬ್ರವರಿ, 2019) ಹೆಚ್ಚುವರಿ ಹಣವನ್ನು ರಿಯಲ್ ಎಸ್ಟೇಟ್‌ನಲ್ಲಿ ಹೂಡಿಕೆ ಮಾಡಬೇಕು. ಬೇಕಷ್ಟು ಮೊದಲೇ ಯೋಜಿಸಿದ ಪ್ರಯಾಣದ…

  • inspirational

    ನಟ ನಾಗಾರ್ಜುನ ಫಾರ್ಮ್ ಹೌಸ್‍ನಲ್ಲಿ ಪತ್ತೆಯಾದ ಅಸ್ಥಿಪಂಜರ….!

    ಟಾಲಿವುಡ್ ನಟ ನಾಗಾರ್ಜುನ ಅಕ್ಕಿನೇನಿ ಅವರ ಫಾರ್ಮ್ ಹೌಸ್‍ನಲ್ಲಿ ವ್ಯಕ್ತಿಯ ಅಸ್ಥಿಪಂಜರ ಪತ್ತೆಯಾಗಿದೆ.ಪಾಪಿರೆಡ್ಡಿಗುಡ್ಡ ಗ್ರಾಮದಲ್ಲಿ ನಾಗಾರ್ಜುನ ಅವರ 40 ಎಕರೆ ಜಮೀನಿದೆ. ಸುಮಾರು ದಿನಗಳಿಂದ ಈ ಜಮೀನ್ ಅನ್ನು ಉಪಯೋಗಿಸುತ್ತಿರಲಿಲ್ಲ. ಆದರೆ ಈಗ ಇದೇ ಜಮೀನಿನಲ್ಲಿ ಸಿಕ್ಕ ಅಜ್ಞಾತ ಶವವನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಪೊಲೀಸರ ಪ್ರಕಾರ 40 ಎಕರೆ ಜಮೀನಿನಲ್ಲಿ ನಾಗಾರ್ಜುನ ಪತ್ನಿ ಅಮಲಾ ಅವರು ಕೃಷಿ ಮಾಡುವ ಆಸಕ್ತಿ ವಹಿಸಿದ್ದರು. ಹೀಗಾಗಿ ಅವರು ಕೆಲಸಗಾರರನ್ನು ಜಮೀನಿಗೆ ಕಳುಹಿಸಿ ಭೂಮಿ ಸಿದ್ಧಪಡಿಸಲು ಹೇಳಿದ್ದರು. ಕೆಲಸಗಾರರು ಜಮೀನು ಸಿದ್ಧಪಡಿಸಲು…

  • ಸ್ಪೂರ್ತಿ

    19 ವರ್ಷದ ಈ ಯುವತಿ ತನ್ನ ಓದಿಗಾಗಿ ಮಾಡಿದ್ದು ಏನು ಗೊತ್ತಾ..!ಮುಂದೆ ಓದಿ ಶಾಕ್…

    ಜೀವನ ನಾವು ಅಂದುಕೊಂಡಷ್ಟು ಸುಲಭವೂ ಅಲ್ಲ, ಹಾಗೆಯೇ ಕಷ್ಟವೆಂದು ಕುಳಿತು ಕೊಳ್ಳುವಷ್ಟು ಕಷ್ಟವು ಅಲ್ಲ. ಜೀವನದಲ್ಲಿ ಕಷ್ಟ ಸುಖ ಎರಡು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಒಮ್ಮೆ ಕಷ್ಟ ಬಂದರೆ ಮತ್ತೊಮ್ಮೆ ಸುಖ ಬರುತ್ತದೆ. ಕಷ್ಟ ಬಂದಾಗ ಕುಗ್ಗದೆ, ಸುಖ ಬಂದಾಗ ಹಿಗ್ಗದೇ ಜೀವನವನ್ನ ನಡೆಸ ಬೇಕು. ಕಷ್ಟಗಳು ಬಂದವೆಂದು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವ ಬದಲು ಛಲದಿಂದ ಕಷ್ಟಗಳನ್ನ ಎದುರಿಸಿ ಮುಂದೆ ಸಾಗಬೇಕು. ನಾವೀಗ ಹೇಳಲಿರುವ ಯುವತಿ ಸಹ ಇದೇ ಪಟ್ಟಿಗೆ ಸೇರುತ್ತಾಳೆ.

  • ಆಧ್ಯಾತ್ಮ

    ಶಿವನ ಆಭರಣಗಳಲ್ಲಿ ಅಡಗಿರುವ ಸತ್ಯವೇನು ಗೊತ್ತಾ..?ತಿಳಿಯಲು ಈ ಲೇಖನ ಓದಿ…

    ಹಿಂದೂ ಧರ್ಮದಲ್ಲಿ ಶಿವನನ್ನು “ದೇವಾದಿದೇವ” ಮಹಾದೇವ ಎಂದು ಆರಾಧಿಸುತ್ತಾರೆ. ಬ್ರಹ್ಮ ವಿಷ್ಣು ಮಹೇಶ್ವರ ಎಂಬ ತ್ರಿಮೂರ್ತಿಗಳಲ್ಲಿ ಮಹೇಶ್ವರನೇ ಹೆಚ್ಚು ಶಕ್ತಿಶಾಲಿ ಎಂದು ನಂಬುವ ಕಾರಣ ಇತರ ದೇವರುಗಳೂ ಸಂಕಟಬಂದಾಗ ಶಿವನ ಬಳಿ ಸಹಾಯ ಬೇಡಿ ಧಾವಿಸುವ ಹಲವಾರು ದೃಷ್ಟಾಂತಗಳನ್ನು ಪುರಾಣಗಳಲ್ಲಿ ಕಾಣಬಹುದು. ಶಿವನನ್ನು ಭಕ್ತರು ಇನ್ನೂ ಹಲವಾರು ಹೆಸರುಗಳಿಂದ ಕರೆಯುತ್ತಾರೆ.