ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಕಾರ್ಯಕ್ರಮವು ದಿನದಿಂದ ದಿನಕ್ಕೆ ವೀಕ್ಷಕರಲ್ಲಿ ಕ್ರೇಜ್ ಜಾಸ್ತಿ ಮಾಡುತ್ತಿದ್ದು,ಶೋ ಮುಗಿಯೋದಕ್ಕೆ ಕೇವಲ 6 ದಿನಗಳು ಬಾಕಿ ಉಳಿದಿವೆ. ಕೆಲ ವೀಕ್ಷಕರಿಂದ ‘ಡ್ರಾಮಾ ಕ್ವೀನ್’ ಅಂತಲೇ ಕರೆಯಿಸಿಕೊಂಡಿದ್ದ ಅನುಪಮಾ ಗೌಡ ಭಾನುವಾರ ನಡೆದ ಎಲಿಮಿನೇಷನ್ ಪಂಚಾಯ್ತಿಯಲ್ಲಿ ಮನೆಗೆ ಕಳುಹಿಸಲಾಗಿತ್ತು.

ಆದರೂ ಕೂಡ ಮನೆಯಲ್ಲಿ ಚಂದನ್ ಶೆಟ್ಟಿ ನಿವೇದಿತಾ ಗೌಡ ದಿವಾಕರ್ ಜಯರಾಮ್ ಕಾರ್ಥಿಕ್ ಸಮೀರ್ ಆಚಾರ್ಯ ಶೃತಿ ಪ್ರಕಾಶ್ ಒಟ್ಟು 6 ಸದಸ್ಯರಿದ್ದರು.. ಎಲಿಮಿನೇಟ್ ಮಾಡುವಾಗ ಕೊನೆಯಲ್ಲಿ ಟ್ವಿಸ್ಟ್ ಕೊಟ್ಟ ಕಿಚ್ಚ, ನೀವೆಲ್ಲಾ ಟಾಪ್ 5 ಸ್ಪರ್ದಿಗಳಲ್ಲ ಎಂದು ಎಲ್ಲರಿಗೂ ಶಾಕ್ ಕೊಟ್ಟಿದ್ದರು.ಇದು ವೀಕ್ಷಕರಲ್ಲಿ ಕೂಡ ಕ್ರೇಜ್ ಉಂಟುಮಾಡಿತ್ತು.

ಟಾಪ್ 5 ಸ್ಪರ್ದಿಗಳು ಯಾರು..
ಆದ್ರೆ ಸುದೀಪ್ ಹೇಳಿದಂತೆ ವಾರದ ಶುರುವಿನಲ್ಲಿಯೇ ಮನೆಯಿಂದ ಶೃತಿ ಪ್ರಕಾಶ್ ಹೊರ ಬೀಳುವ ಮೂಲಕ ಅಂತಿಮ ಐದು ಸ್ಪರ್ಧಿಗಳು ಯಾರು ಎಂಬುದು ಖಚಿತವಾಗಿದೆ. ಹೌದು, ಶೃತಿ ಎಲಿಮಿನೇಟ್ ಆಗಿದ್ದರೆ ಫಿನಾಲೆಯ ಒಂದು ಹೆಜ್ಜೆ ಬಾಕಿ ಇರುವಾಗ ಮುಗ್ಗರಿಸಿದಂತಾಗಿದೆ. ಮೊನ್ನೆಯಷ್ಟೇ ಅನುಪಮಾ ಗೌಡ ಅವರು ಬಿಗ್ ಬಾಸ್ ಮನೆಯಿಂದ ಹೊರ ಬಿದ್ದಿದ್ದರು. ಈಗ ಶೃತಿ ಪ್ರಕಾಶ್ ಹೊರ ಬೀಳುವ ಮೂಲಕ ಅಂತಿಮ ಐದು ಸ್ಪರ್ಧಿಗಳು ಯಾರು ಎಂಬುದು ಖಚಿತವಾಗಿದೆ. ಚಂದನ್ ಶೆಟ್ಟಿ, ಜಯರಾಂ ಕಾರ್ತಿಕ್, ಸಮೀರ್ ಆಚಾರ್ಯ, ದಿವಾಕರ್, ನಿವೇದಿತಾ ಗೌಡ ಅವರು ಅಂತಿಮ ಐದರಲ್ಲಿ ಸ್ಥಾನ ಪಡೆದಿದ್ದಾರೆ.

ಮಧ್ಯರಾತ್ರಿ ಎಲಿಮನೇಷನ್..!
ಆದ್ರೆ ಬಿಗ್’ಬಾಸ್ ಮತ್ತೊಂದು ಬಿಗ್ ಟ್ವಿಸ್ಟ್ ನೀಡಿದ್ದಾರೆ. ಹೌದು,ನಿನ್ನೆ ಮಧ್ಯರಾತ್ರಿ ಬಿಗ್ ಬಾಸ್ ಶಾಕಿಂಗ್ ನ್ಯೂಸ್ ಒಂದನ್ನು ಹೊರಹಾಕಿದ್ದಾರೆ. ಅದು ರಾತ್ರೋ ರಾತ್ರಿ ಎಲಿಮನೇಷನ್.. ನಿನ್ನೆ ಮಧ್ಯರಾತ್ರಿ ಸಮೀರ್ ಆಚಾರ್ಯ ಮನೆಯಿಂದ ಹೊರ ಬಂದಿದ್ದಾರೆ ಎಂಬ ಸುದ್ದಿಗಳು ಬಂದಿವೆ.ಸದ್ಯಕ್ಕೆ ಟಿ ಆರ್ ಪಿ ಯಲ್ಲಿ ಕಿಂಗ್ ಎನಿಸಿಕೊಂಡಿರುವ, ವೀಕ್ಷಕರಲ್ಲಿ ದಿನದಿಂದ ದಿನಕ್ಕೆ ಕ್ರೇಜ್ ಉಂಟು ಮಾಡುತ್ತಿರುವ ಬಿಗ್’ಬಾಸ್ ನ ಮುಂದಿನ ನಡೆ ನಿಜಕ್ಕೂ ಕುತೂಹಲ ಮೂಡಿಸಿರುವುದು ಸತ್ಯ..
