ಸಿನಿಮಾ

ಕಿಚ್ಚ ನಟಿಸುತ್ತಿರುವ ಈ ಹಾಲಿವುಡ್ ಚಿತ್ರದಲ್ಲಿ, ಖ್ಯಾತ ನಾಯಕಿ ಮತ್ತು ನಿರ್ದೇಶಕ ಯಾರು ಗೊತ್ತಾ..?ಈ ಲೇಖನ ಓದಿ ಶಾಕ್ ಆಗ್ತೀರಾ…

835

ಕನ್ನಡದ ಖ್ಯಾತ ನಟ ಕಿಚ್ಚಾ ಸುದೀಪ್ ಹಾಲಿವುಡ್ ಚಿತ್ರವೊಂದಕ್ಕೆ ಸಹಿ ಹಾಕಿದ್ದು, ಶೀಘ್ರದಲ್ಲೇ ಚಿತ್ರೀಕರಣಕ್ಕಾಗಿ ವಿದೇಶಕೆ ತೆರಳಲಿದ್ದಾರೆ ಎಂಬ ಸುದ್ದಿಯೊಂದು ಗಾಂಧಿನಗರದಲ್ಲಿ ಕೇಳಿಬಂದಿದೆ.

ಕಿಚ್ಚಾ ಸುದೀಪ್ ಅಭಿಮಾನಿಗಳ ಟ್ವಿಟರ್ ಖಾತೆಯೊಂದರಿಂದ ಇಂತಹುದೊಂದು ಸುದ್ದಿ ಕೇಳಿಬಂದಿದ್ದು, ಟೀಂ ಕಿಚ್ಚಾ ಸುದೀಪ್ ಎಂಬಖಾತೆದಾರರು ನಟ ಸುದೀಪ್ ಅವರು ಹಾಲಿವುಡ್ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ. ಜುಲೈ 7  ರಂದು ಲಂಡನ್ ನಲ್ಲಿ ಶೂಟಿಂಗ್ ಆರಂಭವಾಗಲಿದ್ದು, ಶೀಘ್ರದಲ್ಲೇ ಸುದೀಪ್ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ಹಾರಲಿದ್ದಾರೆ ಎಂದು ಟ್ವೀಟ್ ಮಾಡಿದೆ.

ಹಾಲಿವುಡ್ ನ “ದಿ ರೈಸನ್” ಚಿತ್ರಕ್ಕೆ ಸುದೀಪ್ ಸಹಿ:-

ಸುದೀಪ್ ಅಭಿನಯಿಸುತ್ತಿರುವ ನೂತನ ಚಿತ್ರದ ಹೆಸರು ರೈಸನ್ ಎಂದು ಖಾತೆಯಲ್ಲಿ ಬರೆಯಲಾಗಿದ್ದು, ಚಿತ್ರವನ್ನು ಹಾಲಿವುಡ್ ನ ಖ್ಯಾತ ನಿರ್ದೇಶಕ ಎಡ್ಡಿ ಆರ್ಯ ನಿರ್ದೇಶಿಸುತ್ತಿದ್ದು, ಹೆಬ್ಬುಲಿ ಚಿತ್ರದಂತೆಯೇ ಸುದೀಪ್  ಈ ಚಿತ್ರದಲ್ಲೂ ಸೇನಾ ಯೋಧನ ಪಾತ್ರದಲ್ಲಿ ಕಾಣಿಸಿಕೊಳ್ಳಲ್ಲಿದ್ದಾರೆ ಎಂದು ಟ್ವೀಟ್ ಮಾಡಿದೆ. ಇನ್ನು ಈ ಸುದ್ದಿಗೆ ಸಂಬಂಧಿಸಿದಂತೆ ನಟ ಸುದೀಪ್ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲವಾದರೂ, ಸುದ್ದಿ ಮಾತ್ರ ಸಾಮಾಜಿಕ  ಜಾಲತಾಣಗಳಲ್ಲಿ ವೈರಲ್ ಆಗಿದೆ.

ಈ ಹಿಂದೆ ಬಾಲಿವುಡ್ ನ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದ ಸುದೀಪ್ ಬಳಿಕ ತೆಲುಗಿನ ಈಗ ಚಿತ್ರದಲ್ಲಿ ಅಭಿನಯಿಸಿದ್ದರು. ಬಳಿಕ ಎಸ್ ಎಸ್ ರಾಜಮೌಳಿ ನಿರ್ದೇಶನ ಬಾಹುಬಲಿ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.  ಇದೀಗ ಸೂರಪ್ಪ ಬಾಬು ನಿರ್ಮಾಣದ ಕೋಟಿಗೊಬ್ಬ 3 ಚಿತ್ರದಲ್ಲಿ ಸುದೀಪ್ ಅಭಿನಯಿಸುತ್ತಿದ್ದು, ಈ ಚಿತ್ರಕ್ಕಾಗಿ ಸುದೀಪ್ ದಾಖಲೆಯ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿಯೂ ಕೂಡ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

ಇಲ್ಲಿ ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ:-ಆಂಧ್ರದಲ್ಲೂ ಕೆಂಪೇಗೌಡ ಸುದೀಪ್ ಫ್ಯಾನ್ಸ್ ಕ್ಲಬ್…

ಕನ್ನಡ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್. ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳಲ್ಲಿ ಈಗಾಗಲೇ ಹಲವಾರು ಸಿನಿಮಾಗಳ ಮೂಲಕ ತಮ್ಮದೇ ಛಾಪನ್ನು ಮೂಡಿಸಿದ್ದಾರೆ. ಆದರೆ ಈಗ ಹಾಲಿವುಡ್ ಗೆ ಎಂಟ್ರಿ ಕೊಡ್ತಿದ್ದಾರಂತೆ ಹಾಗಾದರೆ ಏನು ಅಂತ ಆ ಸ್ಟೋರಿ ಇಲ್ಲಿದೆ ನೋಡಿ.

ಹೌದು! ಸ್ಯಾಂಡವುಡ್, ಬಾಲಿವುಡ್, ಟಾಲಿವುಡ್ ನಂತಹ ಸಿನಿಮಾ ಜಗತ್ತಿನಲ್ಲಿ, ತಮ್ಮದೇ ಆದ ನಟನೆಯ ಮೂಲಕ ಕೋಟ್ಯಾಂತರ ಅಭಿಮಾನಿಗಳನ್ನ ಹೊಂದಿದ್ದಾರೆ. ಅದರಂತೆ ಈಗ ಹಾಲಿವುಡ್ ಗೆ ಭರ್ಜರಿಯಾಗಿ ಎಂಟ್ರಿ ಕೊಡ್ತಿದ್ದಾರೆ ಎಂದು ಗಾಂಧಿನಗರದಲ್ಲಿ ಮಾತಾಡಿಕೊಳ್ಳುತ್ತಿದ್ದಾರೆ.

ಹಾಲಿವುಡ್ ನ ಎಡ್ಡಿ ಆರ್ಯ ನಿರ್ದೇಶನದ “ರೈಸನ್ “ ಸಿನಿಮಾದಲ್ಲಿ ಸುದೀಪ್ ಸೇನಾಧಿಕಾರಿಯ ಪಾತ್ರದ ಮೂಲಕ ಭರ್ಜರಿ ಎಂಟ್ರಿ ಕೊಡಲಿದ್ದಾರಂತೆ, ಈ ಒಂದು ಸಿನಿಮಾ ‘ರೈಸನ್ ‘ ಸೈನ್ಸ್ ಫಿಕ್ಷನ್ ಕತೆ ಒಳಗೊಂಡಿದೆ. ಅಮೇರಿಕದ ಪೆನ್ಸೆಲ್ವೆನಿಯಾದಲ್ಲಿ ಸಮುದಾಯ ಒಂದು ವಾಸವಾಗಿರುತ್ತದಂತೆ, ಅಲ್ಲಿ ಉಲ್ಕಾಪಾತವಾಗಿ ಅನೇಕರು ಸಾವಿಗೀಡಾಗುತ್ತಾರಂತೆ, ರಸಾಯನಿಕ ಒಂದು ಬಿಡುಗಡೆಯಾಗಿ ಅಲ್ಲಿನ ಜನ ಅಪಾಯಕ್ಕೀಡಾಗುತ್ತಾರಂತೆ ಅವರನ್ನು ಕಾಪಾಡುವ ಪಾತ್ರದಲ್ಲಿ ಸುದೀಪ್ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಈಗಾಗಲೇ ಸಿನಿಮಾದ ನಿರ್ದೇಶಕರು, ಸ್ರ್ಕಿಪ್ಟ್ ಪೂರ್ಣಗೊಳಿಸಿ ಚಿತ್ರೀಕರಣದ ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆಯಂತೆ, ಡಿಸೆಂಬರ್ ಅಂತ್ಯಕ್ಕೆಲ್ಲ ಶೂಟಿಂಗ್ ಪ್ರಾರಂಭ ಮಾಡಲಾಗುತ್ತದೆ ಎಂದಿದ್ದಾರಂತೆ, ಸುದೀಪ್ ಕೂಡ ಸದ್ಯ ‘ದಿ ವಿಲನ್’ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಇದಾದ ನಂತರ ಒಪ್ಪಿಕೊಂಡ ಚಿತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದು, ಅದರೊಂದಿಗೆ ಹಾಲಿವುಡ್ ಚಿತ್ರಕ್ಕೆ ರೆಡಿಯಾಗಲಿದ್ದೇನೆಂದು ಹೇಳಿದ್ದಾರಂತೆ.

ಹಾಲಿವುಡ್‌ ಡೈರೆಕ್ಟರ್‌ ಎಡಿ ಆರ್ಯ ನಿರ್ದೇಶನದ ‘ರೈಸನ್‌’ ಚಿತ್ರದಲ್ಲಿ ಸುದೀಪ್‌ ನಾಯಕರಾಗಿ ಮೊದಲಿಗೆ ಹಾಲಿವುಡ್‌ ಚಿತ್ರದಲ್ಲಿ ನಟಿಸಲಿದ್ದಾರೆ. ಈಗಾಗಲೇ ಆಸ್ಪ್ರೇಲಿಯಾ, ಅಮೆರಿಕದಲ್ಲಿ ಚಿತ್ರೀಕರಣ ನಡೆಯುತ್ತಿದೆ. ಸೈಂಟಿಫಿಕ್‌ ಥ್ರಿಲ್ಲರ್‌ ಚಿತ್ರ ಇದಾಗಿದ್ದು, ನಿರ್ದೇಶಕ ಎಡಿ ಸ್ವತಃ ಕತೆ, ಚಿತ್ರಕಥೆ ಬರೆದಿದ್ದಾರೆ.

ಈ ಚಿತ್ರದಲ್ಲಿ ಸುದೀಪ್‌ಗೆ ಇಬ್ಬರುನಾಯಕಿಯರು. ವಿದೇಶಿ  ಹುಡುಗಿಯ ಪಾತ್ರದಲ್ಲಿ ನಿಕೋಲ್‌ ಶಾಲ್ಮೋ ನಟಿಸುತ್ತಿದ್ದಾರೆ. ಇವರು ತಮ್ಮ ದೃಶ್ಯಗಳ ಶೂಟಿಂಗ್‌ನಲ್ಲಿ ಈಗಾಗಲೇ ಪಾಲ್ಗೊಂಡಿದ್ದಾರೆ. ಭಾರತೀಯ ಮೂಲದ ನಾಯಕಿ ಪಾತ್ರಕ್ಕಾಗಿ ನಟಿಯನ್ನು ಹುಡುಕಲಾಗುತ್ತಿದೆ.

 

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ

  • ಉಪಯುಕ್ತ ಮಾಹಿತಿ

    ಭಾರತ ಸೇರಿದಂತೆ ಜಗತ್ತಿನಾದ್ಯಂತ ಕೆಲಕಾಲ ವಾಟ್ಸಪ್ ಕ್ರ್ಯಾಶ್ ಆಗಿದೆ..!ತಿಳಿಯಲು ಇದನ್ನು ಓದಿ..

    ಸರ್ವರ್ ಸಮಸ್ಯೆಯಿಂದಾಗಿ ಜಗತ್ತಿನಾದ್ಯಂತ ಮೊಬೈಲ್ ಗ್ರಾಹಕರು ವಾಟ್ಸಪ್ ಕ್ರ್ಯಾಶ್ ಆದ ಹಿನ್ನೆಲೆಯಲ್ಲಿ ಸಂದೇಶ ಕಳುಹಿಸಲು ಮತ್ತು ಸ್ವೀಕರಿಸಲು ಸಾಧ್ಯವಾಗದೆ ಇರುವ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.

  • Sports

    ಶಿವಂದುಬೆಗೆ ಕೋವಿಡ್-19

    ಶಿವಂದುಬೆಗೆ ಕೋವಿಡ್-19 ಪತ್ತೆಯಾಗಿದೆ.ವೀಡೀಯೊ ಅನಲಿಸ್ಟ್ ಸಹಾಯಕ ಸಿಬ್ಬಂದಿಗೆ ಕೋವಿಡ್-19 ಪತ್ತೆಯಾಗಿದೆ. ಶಿವಂದುಬೆ ಬದಲಿ ಆಟಗಾರನಾಗಿ ಸಾಯಿರಾಜ್ ಪಾಟೀಲ್ ಹೆಸರು ಘೋಷಣೆ ಮಾಡಿದ್ದಾರೆ. ಇಂದು ಮುಂಬೈ ತಂಡ ರಣಜಿ ಟ್ರೋಫಿ ಪಂದ್ಯಾವಳಿಯಲ್ಲಿ ಭಾಗವಹಿಸಲು ಕೋಲ್ಕತ್ತಾ ನಗರಕ್ಕೆ ತೆರಳಬೇಕಿತ್ತು. ಕೋವಿಡ್-19 ದೃಢಪಟ್ಟ ಹಿನ್ನೆಲೆಯಲ್ಲಿ ಶಿವಂದುಬೆ ತೆರಳಲಿಲ್ಲ ಕೋವಿಡ್-19 ಕಾರಣದಿಂದ ರಣಜಿ ಟ್ರೋಫಿ ಪಂದ್ಯಾವಳಿಯನ್ನು 6 ನಗರಗಳಲ್ಲಿ ಆಯೋಜಿಸಲಾಗಿದೆ. ಅವು ಯಾವುವೆಂದರೆ ಕೋಲ್ಕತ್ತಾ ಬೆಂಗಳೂರು ಚೆನ್ನೈ ಅಹಮದಾಬಾದ್ ಮುಂಬೈ ತಿರುವನಂತಪುರಂ  

    Loading

  • Cinema

    ಸಮಾಜ ಸೇವೆಗೆಂದು ಕೈ ಜೋಡಿಸಿದ ದರ್ಶನ್ ಹಾಗು ಚಿಕ್ಕಣ್ಣ…..

    ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರಿಗೆ ಪ್ರಾಣಿ, ಪಕ್ಷಿ ಹಾಗೂ ಪರಿಸರದ ಮೇಲೆ ಇರುವ ಪ್ರೀತಿಯಿಂದ ಅರಣ್ಯ ಇಲಾಖೆ ನೆರವಿಗೆ ಮುಂದಾಗಿರುವುದು ಎಲ್ಲರಿಗೂ ತಿಳಿದಿದೆ. ಸದ್ಯ ದರ್ಶನ್ ಅವರ ಈ ಕಾರ್ಯಕ್ಕೆ ಹಾಸ್ಯ ನಟ ಚಿಕ್ಕಣ್ಣ ಅವರು ಕೂಡ ಕೈ ಜೋಡಿಸಿದ್ದಾರೆ. ಹೌದು, ದರ್ಶನ್ ಅವರು ತಮ್ಮ ಸಫಾರಿಯ ವೇಳೆ ಸೆರೆ ಹಿಡಿದಿದ್ದ ಫೋಟೋವನ್ನು ನಟ ಚಿಕ್ಕಣ್ಣ 1 ಲಕ್ಷ ರೂ. ನೀಡಿ ಖರೀದಿ ಮಾಡಿದ್ದಾರೆ. ಈ ಕುರಿತು ಮಾಹಿತಿ ನೀಡಿ ಟ್ವೀಟ್ ಮಾಡಿರುವ ದರ್ಶನ್, ‘ನಮ್ಮ…

  • ಜ್ಯೋತಿಷ್ಯ

    ಆಂಜನೇಯ ಸ್ವಾಮಿಯನ್ನು ನೆನೆಯುತ್ತಾ ಈ ದಿನದ ರಾಶಿ ಭವಿಷ್ಯದಲ್ಲಿ ಏನಿದೆ ನೋಡಿ….

    ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892 ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು  ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವು ನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ 966 321 8892 ಮೇಷ(26 ಜನವರಿ, 2019) ಹಣದ ಲಾಭ ನಿಮ್ಮ ನಿರೀಕ್ಷೆಯಂತಿರುವುದಿಲ್ಲ. ಇಂದು ನೀವು ಮನೆಯಲ್ಲಿ ಸೂಕ್ಷ್ಮಸಮಸ್ಯೆಯನ್ನು ಬಗೆಹರಿಸಲು ನಿಮ್ಮ…

  • ಜೀವನಶೈಲಿ

    ಖಾಲಿ ಹೊಟ್ಟೆಯಲ್ಲಿ ಚಹಾ(ಟೀ) ಕುಡಿದರೆ ಏನಾಗುತ್ತೆ ಗೊತ್ತಾ?

    ನಾವು ದಿನಾಲು ಬೆಳಿಗ್ಗೆ ಎದ್ದ ತಕ್ಷಣ ನಮಗೆ ಏನಿಲ್ಲಾ ಅಂದ್ರು ಬಿಸಿ ಬಿಸಿ ಚಹಾ(ಟೀ) ಬೇಕೇ ಬೇಕು. ಒಂದು ಸಮೀಕ್ಷೆಯ ಪ್ರಕಾರ ಶೇ. ತೊಂಬತ್ತಕ್ಕೂ ಹೆಚ್ಚು ಭಾರತೀಯರು ನಿತ್ಯವೂ ಕನಿಷ್ಠ ಮೂರು ಕಪ್ ಚಹಾ ಕುಡಿಯುತ್ತಾರೆ. ಆದರೆ ಚಹಾ ಕುಡಿಯುವವರಲ್ಲಿ ಹೆಚ್ಚಿನವರು ದಿನದ ಪ್ರಥಮ ಆಹಾರವಾಗಿ ಒಂದು ಟೀ ಸೇವಿಸುತ್ತಾರೆ. ಕೆಲವರಂತೂ ಹಾಸಿಗೆಯಿಂದ ಏಳುವ ಮುನ್ನವೇ ಬೆಡ್ ಟೀ ಎಂದು ಕುಡಿಯುತ್ತಾರೆ.

  • ಸುದ್ದಿ

    ರೇಸಿಂಗ್ ಪ್ರಿಯರಿಗೆ ‘ಅಪಾಚಿ RR 310’ 2.27 ಲಕ್ಷ ರೂ. ಮೌಲ್ಯದ ಟಿವಿಎಸ್ ಬೈಕ್ ಬಿಡುಗಡೆ…!

    ಹೊಸೂರು: ದ್ವಿಚಕ್ರ ವಾಹನ ಉತ್ಪಾದನಾ ಸಂಸ್ಥೆ ಟಿವಿಎಸ್ ಮೋಟಾರ್ ರೇಸಿಂಗ್ ಸ್ಪರ್ಧೆಗೆ ಅನುಕೂಲಕರವಾದ ರೇಸ್ ಟ್ಯೂನ್ಡ್(ಆರ್ ಟಿ) ಸ್ಲಿಪ್ಪರ್ ಕ್ಲಚ್ ಅನ್ನು ಒಳಗೊಂಡ ನೂತನ ಟಿವಿಎಸ್ ಅಪಾಚಿ ಆರ್ ಆರ್ 310 ಅನ್ನು ಬಿಡುಗಡೆಗೊಳಿಸಿದೆ. ಇದರ ಬೆಲೆ 2.27 ಲಕ್ಷ ರೂ.ಗಳಾಗಿದ್ದು, ಇದು ಸುಧಾರಿತ ಹಾಗೂ ಟಿವಿಎಸ್ ರೇಸಿಂಗ್‍ ವಾಹನಗಳ ಶ್ರೀಮಂತ ಪರಂಪರೆಯಿಂದ ತಯಾರಾದ ವಾಹನವಾಗಿದೆ. ಇದು ಗ್ರಾಹಕರ ದ್ವಿಚಕ್ರ ವಾಹನ ಚಲಾವಣೆಯ ಅನುಭವವನ್ನು ಹೆಚ್ಚಿಸುತ್ತದೆ. ಹಾಗೂ, ಅತಿಯಾದ ವೇಗದಲ್ಲಿ ಚಲಿಸುವಾಗ, ಮುಖ್ಯವಾಗಿ ತಿರುವುಗಳಲ್ಲಿ ವಾಹನದ ಸ್ಥಿರತೆಯನ್ನು…