ಸುದ್ದಿ

ಬಾಲಿವುಡ್​ಗೆ ಸೈ ಕನ್ನಡಕ್ಕೆ ಜೈ: ಈ ಬಾರಿಯ ಬಿಗ್ ಬಾಸ್​ನಲ್ಲಿ ಕಾಣಿಸಿಕೊಳ್ಳಲಿದ್ದಾರಾ ಸಲ್ಮಾನ್ ಖಾನ್‌?

7

‘ಬಿಗ್‌ಬಾಸ್‌’ ರಿಯಾಲಿಟಿ ಶೋನಲ್ಲಿ ಒಂದಷ್ಟು ಜನ ಸ್ಪರ್ಧಿಗಳಾಗಿ ಎಂಟ್ರಿ ನೀಡಿದರೆ, ಮತ್ತೊಂದಿಷ್ಟು ಜನ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ನೀಡುತ್ತಾರೆ. ಜತೆಗೆ ಸಿನಿಮಾ ಪ್ರಮೋಷನ್‌ಗಾಗಿ ಅನೇಕರು ಬಿಗ್‌ಬಾಸ್‌ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಬಾಲಿವುಡ್‌ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಕೂಡ ಬೆಂಗಳೂರಿನ ಬಿಡದಿಯಲ್ಲಿರುವ ಬಿಗ್‌ಬಾಸ್ ಮನೆಗೆ ಕಾಲಿಟ್ಟರೆ ಅಚ್ಚರಿ ಇಲ್ಲ!

ಇಂಥದ್ದೊಂದು ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಆದರೆ, ಇತ್ತೀಚಿಗಷ್ಟೇ ನಡೆದ ‘ಬಿಗ್‌ಬಾಸ್’ ಪ್ರೆಸ್‌ಮೀಟ್‌ನಲ್ಲಿ ಸಲ್ಮಾನ್‌ ಆಗಮನದ ಬಗ್ಗೆ ಸುದೀಪ್‌ ಕ್ಲಾರಿಟಿ ನೀಡಿದ್ದಾರೆ. ‘ನಾವಿಬ್ಬರು ಒಂದೇ ದಿನ ಬಿಗ್‌ಬಾಸ್‌ನ ಬೇರೆ ಬೇರೆ ಆವೃತ್ತಿಗಳ ಶೂಟಿಂಗ್‌ನಲ್ಲಿ ಬಿಜಿ ಆಗಿರುತ್ತೇವೆ. ಅವರಿಲ್ಲಿ ಬರಲು ಸಾಧ್ಯವಿಲ್ಲ’ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಆದರೆ, ಒಂದು ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅದೇನೆಂದರೆ, ಕನ್ನಡದ ಬಿಗ್‌ಬಾಸ್‌ಗೆ ಸುದೀಪ್ ನಿರೂಪಕರಾದರೆ, ಹಿಂದಿ ಬಿಗ್‌ಬಾಸ್‌ಗೆ ಸಲ್ಮಾನ್‌ ನಿರೂಪಕರು. ಸದ್ಯ ಅವರ ಸಾರಥ್ಯದಲ್ಲೀಗ ಬಿಗ್‌ಬಾಸ್‌ ಸೀಸನ್ 13 ಆರಂಭಗೊಂಡಿದೆ. ಇಬ್ಬರಿಗೂ ಬಿಗ್‌ಬಾಸ್‌ ವೇದಿಕೆ ಹೊಸದೇನಲ್ಲ.

ಜತೆಗೆ ‘ದಬಾಂಗ್ 3’ ಚಿತ್ರದ ಮೂಲಕ ಸಲ್ಮಾನ್‌ ಖಾನ್‌ ಚೊಚ್ಚಲ ಬಾರಿಗೆ ಕನ್ನಡಕ್ಕೂ ಕಾಲಿಡಲಿದ್ದಾರೆ. ಹೌದು, ಆ ಚಿತ್ರ ಕನ್ನಡಕ್ಕೆ ಡಬ್ ಆಗಿ ಡಿ.20ಕ್ಕೆ ತೆರೆಕಾಣಲಿದೆ. ಅದರಲ್ಲಿ ಸಲ್ಮಾನ್‌ ಜತೆ ಸುದೀಪ್ ಕೂಡ ನಟಿಸಿದ್ದಾರೆ. ಒಂದುವೇಳೆ, ಸಲ್ಮಾನ್‌ ಕನ್ನಡ ಬಿಗ್‌ಬಾಸ್‌ಗೆ ಬಂದರೆ ಸಿನಿಮಾಕ್ಕೆ ಸಾಕಷ್ಟು ಲಾಭಗಳಿವೆ ಎಂಬುದು ಕನ್ನಡದ ಅಭಿಮಾನಿಗಳ ಲೆಕ್ಕಾಚಾರ.

About the author / 

admin

Categories

Date wise

  • ರಾಜ್ಯದಲ್ಲಿ ಟಫ್ ರೂಲ್ಸ್ ಮತ್ತೆ ಜಾರಿ

    ರಾಜ್ಯ ಸರ್ಕಾರವು ಇಂದಿನಿಂದ ನೈಟ್ ಕರ್ಫ್ಯೂ & ವಾರಾಂತ್ಯದ ಕರ್ಫ್ಯೂ ಜಾರಿ ಮಾಡಲು ನಿರ್ಧರಿಸಲಾಗಿದೆ.ಈಗಾಗಲೇ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ ಮುಂದಿನ 2ವಾರಗಳ ಕಾಲ ಮುಂದುವರಿಸಲು ನಿರ್ಧರಿಸಲಾಗಿದೆ ರಾತ್ರಿ 10ರಿಂದ ಬೆಳಿಗ್ಗೆ 5 ರವರೆಗೆ ನೈಟ್ ಕರ್ಫ್ಯೂ ಜಾರಿ ಮಾಡಲಾಗಿದೆ.ವಾರಾಂತ್ಯದ ಕರ್ಫ್ಯೂವನ್ನು ದಿನಾಂಕ 7ರಿಂದ ಶುಕ್ರವಾರ ರಾತ್ರಿ 10 ಗಂಟೆಯಿಂದ 10 ರ ಸೋಮವಾರ ಬೆಳಿಗ್ಗೆ 5 ರವರೆಗೆ ಜಾರಿ ಮಾಡಲಾಗಿದೆ   ಸರ್ಕಾರಿ ಕಚೇರಿಗಳು ಮಾಲ್​ಗಳಿಗೆ ಭಾರತ ಸರ್ಕಾರದ ಮಾರ್ಗಸೂಚಿ ಅನುಸರಿಸಲಾಗುವುದು. * ಚಿತ್ರಮಂದಿರ, ಮಾಲ್,…

     728,037 total views,  734 views today

ಏನ್ ಸಮಾಚಾರ