ಜೀವನಶೈಲಿ

ಬಾರ್ಬಿಯಂತೆ ಕಾಣಲು ತಿಂಗಳಿಗೆ ಈ ಯುವತಿ ಭಾರೀ ಹಣ ಖರ್ಚು..!ತಿಳಿಯಲು ಈ ಲೇಖನ ಓದಿ…

176

ಬಾರ್ಬಿ ಡಾಲ್ ಅನ್ನು ಎಲ್ರೂ ಇಷ್ಟಪಡ್ತಾರೆ. ಕೆಲವು ಯುವತಿಯರು ಬಾರ್ಬಿಯಂತೆ ಸ್ಲಿಮ್ & ಬ್ಯೂಟಿಫುಲ್ ಆಗಿ ಕಾಣಲು ಸರ್ಕಸ್ ಮಾಡ್ತಾರೆ. ಇದಕ್ಕಾಗಿ ಚಿತ್ರ ವಿಚಿತ್ರ ಕಾಸ್ಮೆಟಿಕ್ ಚಿಕಿತ್ಸೆ ತೆಗೆದುಕೊಳ್ತಾರೆ.ಜೆಕ್ ರಿಪಬ್ಲಿಕ್ ದೇಶದ ಯುವತಿಯೊಬ್ಬಳು ಬಾರ್ಬಿಯಂತೆ ಕಾಣಲು ತಿಂಗಳಿಗೆ ಬರೋಬ್ಬರಿ ಸಾವಿರ ಪೌಂಡ್(90 ಸಾವಿರ ರೂ.) ಖರ್ಚು ಮಾಡಿ ಸುದ್ದಿಯಾಗಿದ್ದಾಳೆ.

ಪೆರುಗ್ವೆಯ ಯುವತಿಯೊಬ್ಬಳು ಬಾರ್ಬಿಯಂತೆ ಕಾಣಲು ತಿಂಗಳಿಗೆ 1000 ಪೌಂಡ್ ಖರ್ಚು ಮಾಡ್ತಿದ್ದಾಳೆ. ಗೇಬ್ರಿಯೆಲಾ ಜಿರಾಕೊವಾಗೆ 16 ವರ್ಷದವಳಿದ್ದಾಗಿನಿಂದ್ಲೇ ಬಾರ್ಬಿ ಹುಚ್ಚು ಶುರುವಾಗಿತ್ತು. ಇದಕ್ಕಾಗಿ ಆಕೆ ಉದ್ದನೆಯ ಕೃತಕ ಕೂದಲು, ಬಾರ್ಬಿಯಂತಹ ಕಣ್ರೆಪ್ಪೆ, ತುಟಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾಳೆ.

ಗೇಬ್ರಿಯೆಲಾಗೆ ಈಗ 18 ವರ್ಷವಾಗಿದ್ದು ಆಕೆಯ ಹತ್ತಿರ 300 ಬಾರ್ಬಿಗಳಿವೆ. ಅಷ್ಟೇ ಅಲ್ಲದೇ ಬಾರ್ಬಿಯಂತೆ ಕಾಣಲು ತನ್ನ ಸ್ತನವನ್ನು ಕೂಡ ಹೆಚ್ಚಿಸಿಕೊಂಡಿದ್ದಾಳೆ. ಬಾರ್ಬಿಯಂತೆ ಸೌಂದರ್ಯ ಪಡೆಯಲು ಆಕೆ ಮತ್ತಷ್ಟು ಸೌಂದರ್ಯವರ್ಧಕ ಶಸ್ತಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದಾಳೆ. ಈ ಶಸ್ತ್ರಚಿಕಿತ್ಸೆಯಲ್ಲಿ ಆಕೆಗೆ ಬಟ್ ಇಂಪ್ಲಾಂಟ್ಸ್, ರಿಬ್ ರಿಮೂವಲ್ಸ್ ಹಾಗೂ ಸ್ತನ ಹೆಚ್ಚಿಸಿಕೊಳ್ಳುವಂತೆ ಮಾಡಲಾಗುತ್ತದೆ. ಈ ಎಲ್ಲ ಶಸ್ತ್ರಚಿಕಿತ್ಸೆಯಿಂದ ಜೀವಂತವಾದ ಬಾರ್ಬಿ ಡಾಲ್ ನಂತೆ ಗೇಬ್ರಿಯೆಲಾ ಆಗಲಿದ್ದಾಳೆ.

ಬೇರೆ ಜೀವಂತ ಬಾರ್ಬಿ ಡಾಲ್ ಹಾಗೂ ನನ್ನ ಹತ್ತಿರ ಇರುವ ಬಾರ್ಬಿ ಡಾಲ್ ನೋಡಿ ಈ ರೀತಿ ಶಸ್ತ್ರಚಿಕಿತ್ಸೆ ಮಾಡಕೊಳ್ಳಲು ನನಗೆ ಸ್ಪೂರ್ತಿ ಆಯ್ತು. ನಾನು ಚಿಕ್ಕವಳು ಆಗಿದ್ದಾಗಿನಿಂದ ನನ್ನ ಹತ್ತಿರ ಸಾಕಷ್ಟು ಬಾರ್ಬಿ ಡಾಲ್‍ಗಳಿವೆ. ನಂತರ ನಾನು ನಿಜವಾದ ಬಾರ್ಬಿ ಡಾಲ್ ನನ್ನು ನೋಡಿದೆ. ಆಗ ಇದು ನನಗಾಗಿಯೇ ಇದೆ ಎಂದುಕೊಂಡೆ. ನನಗೆ ನೈಸರ್ಗಿಕ ಲುಕ್‍ನಲ್ಲಿ ಯಾವುದೇ ನಂಬಿಕೆ ಇಲ್ಲ. ನೈಸರ್ಗಿಕ ಸೌಂದರ್ಯ ಈಗ ಇರುವುದಿಲ್ಲ ಎಂದು ಹೇಳಿದ್ದಾಳೆ.

ಪ್ರತಿದಿನ ಬಾರ್ಬಿಯಂತೆ ಮೇಕಪ್ ಮಾಡಿಕೊಳ್ಳಲು ಗೇಬ್ರಿಯೆಲಾಗೆ 3.5 ಗಂಟೆಗಳು ಬೇಕಾಗುತ್ತವೆ. ತನ್ನ ಇಮೇಜ್ ಕಾಪಾಡಿಕೊಳ್ಳಲು ಫುಲ್ ಮೇಕಪ್ ನಲ್ಲಿ ಇರುವುದು ಅನಿವಾರ್ಯ ಎನ್ನುತ್ತಾಳೆ. ಗೇಬ್ರಿಯಾಲಾಳ ತಾಯಿ ಕೂಡ ಇದಕ್ಕೆ ಸಪೋರ್ಟ್ ಮಾಡ್ತಿದ್ದಾಳಂತೆ.

About the author / 

Basavaraj Gowda

Categories

Date wise

  • ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು!!

    ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…

ಏನ್ ಸಮಾಚಾರ