News

ಮ್ಯೂಸಿಕ್ ಮಾಂತ್ರಿಕ ಎರ್.ಆರ್ ರೆಹಮಾನ್ ರವರನ್ನು ಭೇಟಿ ಮಾಡಿದ ಹಳ್ಳಿ ಪ್ರತಿಭೆ ಗಂಗಮ್ಮ..!
ಇಲ್ಲಿ ಬುಲೆಟ್ ಗೆ ದೇವಸ್ಥಾನ ಕಟ್ಟಿ ಪೂಜೆ ದಿನನಿತ್ಯ ಪೂಜೆ ಮಾಡ್ತಾರೆ..!ಕಾರಣ ಕೇಳಿದ್ರೆ ಶಾಕ್ ಆಗ್ತೀರಾ…
ಮಂಗಳವಾರದ ನಿಮ್ಮ ದಿನ ಭವಿಷ್ಯ ಮಂಗಳವೋ ಅಮಂಗಳವೋ ನೋಡಿ ತಿಳಿಯಿರಿ…
ನಿತ್ಯ ಭವಿಷ್ಯ ಸೋಮವಾರ,ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ತಿಳಿಯಿರಿ…
ನಿತ್ಯ ಭವಿಷ್ಯ ಭಾನುವಾರ, ಈ ದಿನದ ರಾಶಿ ಭವಿಷ್ಯದಲ್ಲಿ ಈ ರಾಶಿಗಳಿಗೆ ಧನ ಯೋಗದ ಲಾಭವಿದೆ!ನಿಮ್ಮ ಅದೃಷ್ಟದ ಸಂಖ್ಯೆಯನ್ನು ತಿಳಿಯಿರಿ…
ಬಿಗ್ ಬಾಸ್ ಮನೆಯಲ್ಲಿ ರಾಕೇಶ್ ಕಾಲಿಗೆ ಬಿದ್ದು ಕೈ ಮುಗಿದು ತಪ್ಪಾಯಿತೆಂದು ಕೇಳಿಕೊಂಡ ಅಕ್ಷತಾ..!
ತನ್ನ ವಿಶೇಷ ಅಭಿಮಾನಿಯೋಬ್ಬರನ್ನ ಭೇಟಿ ಮಾಡಲು ಮುಂದಾಗಿರುವ ಕಿಚ್ಚಾ ಸುದೀಪ್!ಏಕೆ ಗೊತ್ತಾ..?
ರಾಮ ಭಂಟ ಆಂಜನೇಯನ ‘ಜಾತಿ’ ಪ್ರಮಾಣ ಪತ್ರಕ್ಕಾಗಿ ಅರ್ಜಿ!
ದಿನ ಭವಿಷ್ಯ ಶನಿವಾರ, ಈ ದಿನದ ರಾಶಿ ಭವಿಷ್ಯದ ಜೊತೆಗೆ ನಿಮ್ಮ ಅದೃಷ್ಟದ ಸಂಖ್ಯೆ ಯಾವುದೆಂದು ತಿಳಿಯಿರಿ…
ಯಶ್ ರಾಧಿಕಾ ಸು ಪುತ್ರಿಗೆ ಅಂಬಿ ತಾತನಿಂದ ಸ್ವರ್ಗದಿಂದ ಬಂತು ಗಿಫ್ಟ್… ಸುಮಲತಾ ಬಿಚ್ಚಿಟ್ಟ ಸತ್ಯ..
ಉಪಯುಕ್ತ ಮಾಹಿತಿ

“ಪಪ್ಪಾಯಿ’ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಆದರೆ ಇದರ ಔಷಧೀಯ ಗುಣವನ್ನು ನೀವು ತಿಳಿದರೆ ಶಾಕ್ ಆಗ್ತೀರಾ..!

2938

ನೋಡಿದ ಕೂಡಲೇ ಮುಖ ಸಿಂಡರಿಸಿಕೊಂಡರೂ ರುಚಿ ನೋಡಿದ ಮೇಲೆ ಮತ್ತೆ ಮತ್ತೆ ತಿನ್ನಬೇಕೆಂಬ ಆಸೆ ಹುಟ್ಟಿಸುವ “ಪಪ್ಪಾಯಿ’ ಹಣ್ಣು ಯಾರಿಗೆ ತಾನೆ ಇಷ್ಟವಿಲ್ಲ. ಔಷಧೀಯ ಗುಣವನ್ನು ಕೂಡ ಹೊಂದಿರುವ ಪಪ್ಪಾಯಿ ಹಲವು ಖಾಯಿಲೆಗಳಿಗೆ ಔಷಧಿಯಾಗಿಯೂ ಬಳಕೆಯಾಗುತ್ತಿದೆ.ಪಪ್ಪಾಯಿ ಒಂದು ಅದ್ಭುತ ಹಣ್ಣಾಗಿದ್ದು ನಿತ್ಯದ ಆಹಾರದಲ್ಲಿ ಅದನ್ನು ಸೇರ್ಪಡೆಗೊಳಿಸಿಕೊಂಡರೆ ಒಳಿತಾಗುತ್ತದೆ. ಶರೀರದ ತೂಕ ಕಡಿಮೆ ಮಾಡಿಕೊಳ್ಳ ಬಯಸುವವರಿಗೆ ಇದು ಒಂದು ವರದಾನವೇ ಸರಿ.


ಹೃದಯ ಹಾಗೂ ನರಗಳ ದೌರ್ಬಲ್ಯ ಸಮಸ್ಯೆ ಇರುವವರಿಗೆ ನವಚೈತನ್ಯ ನೀಡುವ, ಅಜೀರ್ಣ ಮತ್ತು ಮಲಬದ್ಧತೆ ನಿವಾರಿಸಿ, ದೇಹದ ಕೊಬ್ಬು, ಕೊಲೆಸ್ಟ್ರಾಲ್‌ ಹಾಗೂ ಬೊಜ್ಜಿನ ಸಮಸ್ಯೆಗೆ ಉತ್ತಮ ಪರಿಹಾರವಾಗಿ ಕೆಲಸ ಮಾಡುವ ಪಪ್ಪಾಯಿ ಹಣ್ಣಿನ ಸೇವನೆ ಆರೋಗ್ಯಕ್ಕೆ ಉತ್ತಮ.

ಕರುಳಿನ ರಕ್ಷಕ:-

ಪಪ್ಪಾಯಿಜೀವನಿರೋಧಕ (ಆ್ಯಂಟಿ ಬಯಾಟಿಕ್)ಗಳಿಂದ ಹಾನಿಗೊಂಡ ಉತ್ತಮ ಕರುಳಿನ ಬ್ಯಾಕ್ಟೀರಿಯಾಗಳನ್ನು ಪುನಶ್ಚೇತನಗೊಳಿಸುತ್ತದೆ. ಕಿತ್ತಳೆ ಬಣ್ಣದ ಸಿಹಿಯಾದ ಈ ರಸಭರಿತ ಹಣ್ಣು ವಿಟಮಿನ್‌ಗಳು ಮತ್ತು ಇವು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು ಗುಣಕಾರಿ ಲಕ್ಷಣಗಳನ್ನುಹೊಂದಿದೆ.

ವಾಕರಿಕೆ ನಿವಾರಕ:

ಪಪ್ಪಾಯಿ ಕಿಣ್ವಗಳ ಒಂದು ಸಮೃದ್ಧ ಮೂಲವಾಗಿದ್ದು ಕರುಳಿನ ಆಮ್ಲವನ್ನು ಸಮತೋಲನಗೊಳಿಸುತ್ತದೆ. ಈ ಹಣ್ಣು ವಾಕರಿಕೆಯನ್ನು ಹೋಗಲಾಡಿಸುತ್ತದೆ.

ಒತ್ತಡ ಶಾಮಕ:

ಪಪ್ಪಾಯಿಯಲ್ಲಿರುವ ವಿಟಮಿನ್ ಸಿ ಒತ್ತಡದ ಹಾರ್ಮೋನ್‌ಗಳ ಹರಿವನ್ನು ನಿರ್ಬಂಧಿಸುತ್ತದೆ. ತನ್ಮೂಲಕ ಒತ್ತಡವನ್ನು ತಗ್ಗಿಸುತ್ತದೆ.

ಋತುಚರ್ಯೆ ಸುಗಮ:

ಋತು ಸಂಬಂಧಿ ತೊಂದರೆಗಳಿಗೆ ಪಪ್ಪಾಯಿ ರಾಮಬಾಣ ಎಂದು ಬಿಂಬಿತವಾಗಿದೆ. ಒಂದು ಪಪ್ಪಾಯಿ ಎಲೆ,ಹುಣಸೆಹಣ್ಣು ಮತ್ತು ಉಪ್ಪನ್ನು ಒಂದು ಲೋಟ ನೀರಿಗೆ ಹಾಕಿ ಕುದಿಸಿ ಕುಡಿಯಿರಿ. ಈ ಮಿಶ್ರಣ ರುಚಿಕರವಾಗಿಲ್ಲದಿದ್ದರೂ ಋತುದೋಷ  ಶಮನಗೊಳಿಸಬಲ್ಲದು ಎಂದು ವೈದ್ಯರು ತಿಳಿಸಿದ್ದಾರೆ.

ಕ್ಯಾನ್ಸೆರ್ ನಿವಾರಕ:-

ಪಪ್ಪಾಯಿಯಲ್ಲಿರುವ ಜೀವಸತ್ವ ಪಾಪಿನ್ ಮೇಲೆ ಅಧ್ಯಯನ ನಡೆಯುತ್ತಿದೆ. ಈ ಜೀವಸತ್ವವು ಕ್ಯಾನ್ಸರ್ ರೋಗಿಗಳಲ್ಲಿ ಕಿಮೋ ಥೆರಪಿ ಚಿಕಿತ್ಸೆಯ ಬಳಿಕ ತಲೆದೋರುವ ತೊಂದರೆಗಳ ಉಪಶಾಮಕವಾಗಿ ಕೆಲಸ ಮಾಡುತ್ತದೆ. ಪಪ್ಪಾಯಿ ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗಿ ಕ್ಯಾನ್ಸರ್ ವಿರುದ್ಧ ಹೋರಾಡಲು ಕಸುವು ಲಭಿಸುತ್ತದೆ.

ಹೊಟ್ಟೆನೋವು ನಿವಾರಕ:-

ಒಂದು ಚಮಚ ಪಪ್ಪಾಯಿ ಬೀಜದ ಪೌಡರ್ನ್ನು ಪ್ರತಿದಿನ ೩ ಬಾರಿ ಬೆಚ್ಚಗಿನ ನೀರಿನಲ್ಲಿ  ಬೆರೆಸಿ ಕುಡಿಯುವುದರಿಂದ ಹೊಟ್ಟೆನೋವು ಶಮನವಾಗುತ್ತದೆ.

ರಕ್ತ ಪರಿಚಲನೆಗೆಪೂರಕ :-

ಜನನ ನಿಯಂತ್ರಣ ಗುಳಿಗೆ ಸೇವಿಸುವವರು, ಧೂಮಪಾನಿಗಳು ಮುಂತಾದವರಿಗೆ ರಕ್ತ ಹೆಪ್ಪುಗಟ್ಟುವ ಸಮಸ್ಯೆ ಉಂಟಾಗುತ್ತದೆ. ಪಪ್ಪಾಯಿ ಸೇವನೆಯು ರಕ್ತ ಹೆಪ್ಪುಗಟ್ಟದಂತೆ
ತಡೆಯುತ್ತದೆ.

ಲಿವರ್ ತೊಂದರೆ ಕಡಮೆಯಾಗುತ್ತದೆ:-

ಒಂದು ಚಮಚ ಪಪ್ಪಾಯಿ ಬೀಜದ ಪೌಡರ್  ಅರ್ಥ ನಿಂಬೆ ರಸ ಸೇರಿಸಿ ದಿನಕ್ಕೆ ೨ ಬಾರಿ ಸೇವಿಸುವುದರಿಂದ ಲಿವರ್ ಆರೋಗ್ಯವಾಗಿರುತ್ತದೆ.

 

About the author / 

Nimma Sulochana

Follow Us on Facebook

Categories

ಇಂದಿನ ಅವಮಾನ
0C
humidity: 0%
wind: 0km/h
H 0 • L 0

Date wise

  • 6ನೇ ವೇತನ ಆಯೋಗದ ಗಾಳಿಸುದ್ದಿಗೆ ಕಿವಿ ಕೊಡಬೇಡಿ – ಇಲ್ಲಿದೆ ನಿಜವಾದ ಭಜೆಟ್ನ ಸುದ್ದಿ

    ನೌಕರರ ಉತ್ಪಾದಕತೆ ಹಾಗೂ ಸರ್ಕಾರದ ವಿವಿಧ ಇಲಾಖೆಗಳ ಕಾರ್ಯದಕ್ಷತೆಯನ್ನು ಹೆಚ್ಚಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಆಯೋಗ ಮುಂದಿನ ವರದಿಯಲ್ಲಿ ಶಿಫಾರಸು ಮಾಡಲಿದೆ. ವೇತನ ಹೆಚ್ಚಳ ಹಾಗೂ ಕಾರ್ಯದಕ್ಷತೆ ಮತ್ತು ಶ್ರಮತೆಯನ್ನು ಹೆಚ್ಚಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಲಿದೆ. ಈ ಮೂಲಕ ತನ್ನ ಕಲ್ಯಾಣ ಕಾರ್ಯಕ್ರಮಗಳನ್ನು ಇನ್ನಷ್ಟು ಉತ್ತಮವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ.

ಏನ್ ಸಮಾಚಾರ