ದಿನನಿತ್ಯದ ಚಟುವಟಿಕೆಯಲ್ಲಿ ನಿದ್ರೆಯೂ ಒಂದು. ಉತ್ತಮ ಆರೋಗ್ಯಕ್ಕೆ ಪೌಷ್ಟಿಕಾಂಶ ಭರಿತ ಆಹಾರ ಮುಖ್ಯವಾದಂತೆ ಉತ್ತಮ ನಿದ್ರೆಗೂ ನಾವು ಸೇವಿಸುವ ಆಹಾರ ಮಹತ್ತರವಾದ ಪಾತ್ರವನ್ನು ವಹಿಸುತ್ತದೆ.

ನಿದ್ರೆಗೆ ಪ್ರೋತ್ಸಾಹ ನೀಡುವ ಆಹಾರಗಳನ್ನು ಸೇವಿಸುವುದರಿಂದ ಯಾವುದೇ ತೊಂದರೆಗೆ ಒಳಗಾಗದೇ ಸುಲಭವಾಗಿ ನಿದ್ರೆಗೆ ಜಾರಬಹುದು. ಕೆಲವರು ನಿದ್ರಾ ಹೀನತೆಯಿಂದ ಪಾರಾಗಲು ಔಷಧಗಳನ್ನು ಸೇವಿಸುತ್ತಾರೆ. ಔಷಧಿಯಿಂದ ಆರೋಗ್ಯದ ಮೇಲೆ ಅಡ್ಡ ಪರಿಣಾಮ ಬೀರುವ ಸಾಧ್ಯತೆಗಳಿರುತ್ತವೆ. ಹಾಗಾಗಿ ನೈಸರ್ಗಿಕವಾಗಿ ದೊರೆಯುವ ಆಹಾರ ಪದಾರ್ಥಗಳನ್ನು ಸೇವಿಸಿದರೆ ಉತ್ತಮ ನಿದ್ರೆಯನ್ನು ಹೊಂದಬಹುದು. ಮಲಗುವ ಮುನ್ನ ಕೆಲವು ಆಹಾರ ಪದಾರ್ಥಗಳನ್ನು ಸೇವಿಸುವುದರಿಂದ ನಿದ್ರೆಯು ತಾನಾಗಿಯೇ ಒಲಿದು ಬರುತ್ತದೆ.
ಧಾನ್ಯಗಳು:-
ನಿದ್ರೆಗೆ ಮುಂಚೆ ಧಾನ್ಯಗಳಿಂದ ಕೂಡಿರುವ ಆಹಾರವನ್ನು ಸೇವಿಸಬೇಕು. ಕೆನೆತೆಗೆದ ಹಾಲಿನೊಂದಿಗೆ ಧಾನ್ಯಗಳ ಮಿಶ್ರಣದ ಆಹಾರವನ್ನು ಸೇವಿಸುವುದರಿಂದ ಕ್ಯಾಲ್ಸಿಯಂ ಮತ್ತು ಕಾರ್ಬೋಹೈಡ್ರೇಟ್ಗಳು ಉತ್ತಮ ಮೂಲವಾಗಿದೆ.

ಈ ಪೋಷಕಾಂಶವು ಹೊಟ್ಟೆಗೆ ಯಾವುದೇ ತೊಂದರೆ ನೀಡದರೆ ಉತ್ತಮ ನಿದ್ರೆಗೆ ಜಾರುವಂತೆ ಮಾಡುತ್ತದೆ.
ಬಾದಾಮಿ:-
ಬಾದಾಮಿಗಳು ಗುಣಮಟ್ಟದ ನಿದ್ರೆ ಪಡೆಯಲು ಸರಿಯಾದ ಪೋಷಕಾಂಶಗಳನ್ನು ಹೊಂದಿರುತ್ತವೆ. ಟ್ರಿಪ್ಟೊಫಾನ್ ಮತ್ತು ಮೆಗ್ನೀಸಿಯಮ್ ಗಳಿಂದ ಭರಿತವಾಗಿರುತ್ತದೆ.

ಇದು ಅಗತ್ಯವಾದ ವಿಶ್ರಾಂತಿಗಾಗಿ ನರ ಮತ್ತು ಸ್ನಾಯುವಿನ ಕಾರ್ಯವನ್ನು ನೈಸರ್ಗಿಕವಾಗಿ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಬಸಳೆ:-

ಬಸಳೆ ಅತ್ಯುತ್ತಮ ನಿದ್ರೆ ಪ್ರೇರಿತವಾಗಿದೆ. ಪೋಲೆಟ್, ಮೆಗ್ನೀಸಿಯಮ್ ಮತ್ತು B6 ಮತ್ತು C ನಂತಹ ವಿಟಮಿನ್ ಗಳಂತಹ ಪೌಷ್ಟಿಕಾಂಶಗಳ ಹೊರತಾಗಿ, ಅವುಗಳು ಶಾಂತಿಯುತ ನಿದ್ರೆಗಾಗಿ ಹೆಚ್ಚಿನ ಪ್ರಮಾಣದ ಕೊಡುಗೆ ನೀಡುವ ಗ್ಲುಟಮೈನ್ ಎಂಬ ಅಮೈನೊ ಆಮ್ಲದ ಸಹಾಯ ಮಾಡುವುದು.
ನವಧಾನ್ಯಗಳು:-
ನವಧಾನ್ಯಗಳ ಆಹಾರ ಪದಾರ್ಥಗಳು ಉತ್ತಮ ನಿದ್ರೆಯನ್ನು ಪ್ರಚೋದಿಸುತ್ತದೆ. ಸಿರೋಟೋನಿನ್ ನಂತಹ ವಿಶ್ರಾಂತಿ ವಿಶ್ರಾಂತಿಹಾರ್ಮೋನ್ಗಳನ್ನು ಉತ್ತೇಜಿಸುತ್ತವೆ.

ಗಣನೀಯವಾಗಿ ಇವುಗಳನ್ನು ಸೇವಿಸುವುದರಿಂದ ಗುಣಮಟ್ಟದ ನಿದ್ರೆಯನ್ನು ಪಡೆಯ ಬಹುದು.
ಬಾಳೆಹಣ್ಣು:-
ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್ ಗಳಂತಹ ನಿದ್ರೆ-ಪ್ರಚೋದಿಸುವ ಪೋಷಕಾಂಶಗಳ ಅತ್ಯುತ್ತಮ ಮೂಲವಾಗಿದೆ. ಇದು ಟೈಪ್ಟೋಫಾನ್ನಿಂದ ಕೂಡಿರುವ ಉತ್ತಮ ಆಹಾರವಾಗಿದೆ.

ಅವು ಸಿರೊಟೋನಿನ್ ಮತ್ತು ಮೆಲಟೋನಿನ್ ನಂತಹ ನಿದ್ರೆ ಹಾರ್ಮೋನುಗಳನ್ನು ಬಿಡುಗಡೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.
ಜೇನುತುಪ್ಪ:-
ಜೇನುತುಪ್ಪವು ಮೆಲಟೋನಿನ್ ಬಿಡುಗಡೆ ಮಾಡಲು ಪ್ರಚೋದಿಸುವುದರ ಮೂಲಕ ಮೆದುಳಿಗೆ ಎಚ್ಚರಿಕೆಯನ್ನು ನೀಡುತ್ತದೆ.

ಜೇನುತುಪ್ಪವು ಓರೆಕ್ಸಿನ್ ಬಿಡುಗಡೆ ಮಾಡುವ ಮೂಲಕ ದೇಹವನ್ನು ಸಡಿಲ ಗೊಳಿಸುತ್ತದೆ.
ಓಟ್ಸ್:-
ಉಪಹಾರಕ್ಕೆ ಪ್ರಸಿದ್ಧಿ ಪಡೆದ ತಿಂಡಿಗಳಲ್ಲಿ ಓಟ್ಸ್ ಸಹ ಒಂದು. ರಾತ್ರಿ ವೇಳೆ ಇದನ್ನು ಲಘುವಾಗಿ ಸೇವಿಸುವುದರಿಂದ ಸಂಕೀರ್ಣವಾದ ಕಾರ್ಬೋಹೈಡ್ರೇಟ್ಗಳನ್ನು ಪಡೆಯಬಹುದು.

ಇವು ಜೀರ್ಣವಾಗಲು ಧೀರ್ಘ ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ ರಾತ್ರಿ ನಿದ್ರೆಯ ನಡುವೆ ಹಸಿವನ್ನು ತಡೆಯುತ್ತದೆ.
ಸಿಹಿ ಗೆಣಸು:-
ಸಿಹಿ ಗೆಣಸು ಅತ್ಯುತ್ತಮ ನಿದ್ರೆ ಪಡೆಯಲು ಮೊದಲ ಆಯ್ಕೆಯಾಗಿ ಪರಿಗಣಿಸಬಹುದು. ಇದು ನಿದ್ರೆ-ಉತ್ತೇಜಿಸುವ ಸಂಕೀರ್ಣ ಕಾರ್ಬೋಹೈಡ್ರೇಟ್ ಗಳನ್ನು ಮತ್ತು ಪೊಟ್ಯಾಸಿಯಮ್ ಗಳನ್ನು ಸಮೃದ್ಧವಾಗಿ ಪಡೆದುಕೊಂಡಿದೆ.

ಒಂದು ಗ್ಲಾಸ್ ಬೆಚ್ಚಗಿನ ಹಾಲು:-
ಮಕ್ಕಳಿರುವಾಗ ಮಲಗುವ ಮುನ್ನ ಒಂದು ಗ್ಲಾಸ್ ಹಾಲನ್ನು ಕುಡಿದು ಮಲಗುತ್ತಿದ್ದೆವು ಎನ್ನುವುದು ಆಗಾಗ ನಿಮಗೆ ನೆನಪಾಗಬಹುದು.

ಹೌದು, ಮಲಗುವ ಮುನ್ನ ಒಂದು ಗ್ಲಾಸ್ ಹಾಲನ್ನು ಸೇವಿಸಿದರೆ ಉತ್ತಮ ನಿದ್ರೆಯನ್ನು ಪಡೆಯಬಹುದು.
ಡಾರ್ಕ್ ಚಾಕೋಲೇಟ್ಸ್:-

ಡಾರ್ಕ್ ಚಾಕೋಲೇಟ್ಸ್ ಸಿರೋಟಿನ್‌ಗಳನ್ನು ಒಳಗೊಂಡಿರುತ್ತದೆ.ಇದು ಮನಸ್ಸು ಮತ್ತು ದೇಹವನ್ನು ಉತ್ತಮ ರೀತಿಯಲ್ಲಿ ವಿಶ್ರಾಂತಿಗೆ ಒಳಗಾಗುವಂತೆ ಮಾಡುತ್ತದೆ.