ರಾಜಕೀಯ

ನರೇಂದ್ರ ಮೋದಿಯನ್ನು ಕೆಣಕಿದ ಮೋಹಕ ತಾರೆ ರಮ್ಯಾ!ಟ್ವಿಟ್ಟರ್ನಲ್ಲಿ ಟೀಕೆಗಳ ಸುರಿಮಳೆ…

1060

ಕನ್ನಡ ಸಿನಿಮಾ ತಾರೆ ಮತ್ತು ಕಾಂಗ್ರೆಸ್ ಯುವ ನಾಯಕಿ ರಮ್ಯಾರವರು ತಮ್ಮ ಟ್ವಿಟ್ಟರ್’ನ ಟ್ವಿಟ್’ಗಳ ಮೂಲಕ ಪೇಚಿಗೆ ಸಿಲುಕುವುದು ಸಾಮಾನ್ಯ.

ಹಾಗೆಯೇ ಈಗ ರಮ್ಯಾರವರು ಸೋಶಿಯಲ್ ಮೀಡಿಯಾದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಕೆಣುಕುವಂತ  ಪೋಸ್ಟ್’ಗಳನ್ನು ಮಾಡಿ ಇಕ್ಕಟ್ಟಿಗೆ ಸಿಲುಕಿದ್ದಾರೆ.

ಹೌದು, ಪ್ರಧಾನಿ ನರೇಂದ್ರ ಮೋದಿ ಅವರನ್ನು ಕೆಣಕಿ ಫೇಸ್ಬುಕ್ನಲ್ಲಿ ಸಂದೇಶ ಪ್ರಕಟಿಸಿದ ಕಾಂಗ್ರೆಸ್ ನಾಯಕಿ ರಮ್ಯಾ ಅವರು ಪೇಚಿಗೆ ಸಿಲುಕಿದ್ದಾರೆ.

ಅವರ ವಿರುದ್ಧ ಟ್ವಿಟರ್ನಲ್ಲಿ ಟೀಕೆ, ವ್ಯಂಗ್ಯದ ಸಂದೇಶಗಳು ಹರಿದಾಡತೊಡಗಿದ್ದು, ಈಗ ಇದೆಲ್ಲಾ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ರಮ್ಯಾರವರು ಮೋದಿಯನ್ನು ಕೆಣಕಿದ ಆ ಸಂದೇಶ ಏನು ಗೋತಾ..?

‘ಅಸ್ಸಾಂ, ಗುಜರಾತ್, ಬಿಹಾರದ ಪ್ರವಾಹ ಸಂತ್ರಸ್ತರ ಜತೆ ಪ್ರಧಾನಿ ನರೇಂದ್ರ ಮೋದಿ ಅವರು ಇರುವ ಚಿತ್ರವನ್ನು ತೋರಿಸಿದರೆ ನಿಮಗೆ  25,000 ನೀಡುತ್ತೇನೆ. ಚಿತ್ರವು ಫೋಟೊಶಾಪ್ ಮಾಡಿದ್ದಾಗಿರಬಾರದು’ ಎಂದು ರಮ್ಯಾ ಫೇಸ್ಬುಕ್ನಲ್ಲಿ ಸಂದೇಶ ಪ್ರಕಟಿಸಿದ್ದಾರೆ.

ಅಲ್ಲದೆ, ‘ಅಸ್ಸಾಂ, ಗುಜರಾತ್ ಅಥವಾ ಬಿಹಾರದ ಪ್ರವಾಹ ಸಂತ್ರಸ್ತರ ಜತೆಗೆ ಪ್ರಧಾನಿ ನರೇಂದ್ರ ಮೋದಿ ಅವರಿರುವ ಒಂದೇ ಒಂದು ಚಿತ್ರವೂ ಕಂಡುಬಂದಿಲ್ಲ’ ಎಂದು ರಮ್ಯಾ ಅವರು ಟ್ವೀಟ್ ಮಾಡಿದ್ದಾರೆ.

ರಮ್ಯಾರವರ  ವಿರುದ್ದ ಟ್ವಿಟರ್ನಲ್ಲಿ ಟೀಕೆಗಳ ಸಮರ :-

ರಮ್ಯಾ ಅವರು ತುಂಡುಡುಗೆ ಧರಿಸಿ ಕಡಲ ಕಿನಾರೆಯಲ್ಲಿ ನಿಂತಿರುವ ಚಿತ್ರವನ್ನು ಪ್ರಕಟಿಸಿರುವ ವ್ಯಕ್ತಿಯೊಬ್ಬರು ‘ಪ್ರವಾಹ ಸಂತ್ರಸ್ತರೊಬ್ಬರನ್ನು ರಕ್ಷಿಸಿದ ಬಳಿಕ ರಮ್ಯಾ ಮೇಡಂ’ ಎಂದು ವ್ಯಂಗ್ಯವಾಡಿದ್ದಾರೆ.

‘ಪ್ರವಾಹಪೀಡಿತ ಪ್ರದೇಶದಲ್ಲಿ ರಮ್ಯಾ ಅವರಿರುವ ವಿರಳ ಚಿತ್ರ’ ಎಂದು ವಿಕಾಸ್ ಕಲಾಪುರ್ ಎಂಬುವವರು ಟ್ವೀಟ್ ಮಾಡಿದ್ದಾರೆ. ಇಂಥದ್ದೇ ಇನ್ನೂ ಹಲವು ಟ್ವೀಟ್ಗಳು ಪ್ರಕಟವಾಗಿವೆ.

About the author / 

admin

Categories

Date wise

  • ಕೆಂದೆಳನೀರು

    ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು

ಏನ್ ಸಮಾಚಾರ