ನಮ್ಮ ಹಿರಿಯರು ಊಟ ಮಾಡುವಾಗ ಹೆಚ್ಚು ಮಾತಾಡಬೇಡಿ ಎಂದು ಕೂಗಿ ಕೂಗಿ ಹೇಳಿದರು ನಮಗೆ ಕೇಳಿಸಿದರು ಕೇಳಿಸಲಿಲವೇನೋ ಇಲ್ಲ ಎಂಬಂತೆ ವರ್ತಿಸುತ್ತೇವೆ, ಆದರೆ ಹೀಗೆ ಊಟ ಮಾಡುವಾಗ ಮಾತಾಡಿ ಹಲವು ಬಾರಿ ಗಂಟಲಿನಲ್ಲಿ ಸಿಕ್ಕಿಕೊಂಡಿರುವ ಸಂಗತಿಗಳು ಸಹ ನಡೆದಿರುತ್ತವೆ, ಆದರೂ ನಮಗೆ ಹೆಚ್ಚಾಗಿ ಊಟಕ್ಕೆ ಕುಳಿತಾಗಲೇ ಇಲ್ಲ ಸಲ್ಲದ ವಿಷಯಗಳು ನೆನಪಾಗುತ್ತವೆ.

ಆಹಾರವನ್ನ ತಿನ್ನುವಾಗ ಮಾತನಾಡುತ್ತ ತಿಂದರೆ ನಮ್ಮ ಗಮನ ತಿನ್ನುವ ಪದರತದ ಮೇಲೆ ಇರದೇ ಕೇವಲ ಮಾತಾಡು ವಿಷಯದ ಮೇಲೆಯೇ ಇರುತ್ತದೆ, ಇದರಿಂದ ಏನು ತಿನ್ನುತ್ತಿದ್ದೇವೆ, ಅಥವಾ ಏನು ತಿಂದೆವು ಎಂದು ಸಹ ಮರೆಯುತ್ತದೆ, ಅಷ್ಟರಮಟ್ಟಿಗೆ ಮಾತಿನಲ್ಲಿ ಮುಳುಗಿರುತ್ತೇವೆ.

ತಟ್ಟೆಯಲ್ಲಿ ಊಟ ಹಾಕಿಕೊಂಡ ಕೂಡಲೆ ಸುತ್ತಲೂ ಕೆಲವು ಸೂಕ್ಷ್ಮ ಕ್ರಿಮಿಗಳು ಸೇರುತ್ತವೆ. ನಾವು ತಿನ್ನುವುದನ್ನು ನಿಲ್ಲಿಸಿ ಮಾತನಾಡುವುದನ್ನು ಶುರು ಮಾಡಿದರೆ ಅವು ನಿಧಾನಕ್ಕೆ ಆಹಾರದ ಮೇಲೆ ದಾಳಿ ಮಾಡಬಹುದು. ನಾವು ಕೈಯನ್ನು ತಟ್ಟೆಯಲ್ಲಿ ವೇಗವಾಗಿ ಕದಲಿಸುತ್ತಿದ್ದರೆ ಮಾತ್ರ ಅವನ್ನು ದೂರ ಮಾಡಬಹುದು. ತಟ್ಟೆಯ ಸುತ್ತಲೂ ಕ್ಲೀನ್ ಆಗಿದ್ದರೂ ಅವು ದೂರ ಹೋಗುವುದಿಲ್ಲ. ಇದು ವೈಜ್ಞಾನಿಕವಾಗಿ ಸಾಬಿತಾಗಿದೆ.

1.ನಾವು ತಿನ್ನುವಾಗ ಏನು ತಿನ್ನುತ್ತಿದ್ದೋ ನೋಡಿಕೊಂಡು ತಿನ್ನಬೇಕು. ಅದೇ ರೀತಿ ತಿನ್ನುವಾಗ ಮನಸ್ಸೂ ಪ್ರಶಾಂತವಾಗಿ ಇರಬೇಕು. ಆಗಲೇ ತಿನ್ನುವುದರ ಬಗ್ಗೆ ಇಷ್ಟ ಆಗಿ ರಸಾಸ್ವಾದನೆ ನಡೆಯುತ್ತದೆ. ಇಲ್ಲದಿದ್ದರೆ ತಿಂದದ್ದು ಸರಿಯಾಗಿ ಜೀರ್ಣ ಆಗಲ್ಲ. ಮನಸ್ಸು ಸರಿ ಇಲ್ಲದಿದ್ದರೆ ಮಿದುಳೂ ಕೆಲಸ ಮಾಡಲ್ಲ. ಹಾಗಾಗಿ ಊಟ ಮಾಡುವಾಗ ಮಾತನಾಡದೆ, ನೆಮ್ಮದಿಯಾಗಿ, ಯಾವುದೇ ಗಾಬರಿ, ಕೋಪ ತಾಪ ಇಲ್ಲದಂತೆ ತಿನ್ನಬೇಕು.

2.ತಿನ್ನುವಾಗ ನಿಧಾನಕ್ಕೆ ತಿಂದರೆ ತಿಂದದ್ದು ಜೀರ್ಣವಾಗುತ್ತದೆ. ಆ ರೀತಿ ಅಲ್ಲದೆ ಮಾತನಾಡುತ್ತಾ ತಿಂದರೆ ನಮ್ಮ ಅಗತ್ಯಕ್ಕಿಂತ ಹೆಚ್ಚಾಗಿಯೂ ತಿನ್ನಬಹುದು ಅಥವಾ ತಿನ್ನದೆಯೂ ಇರಬಹುದು.

3.ನಮ್ಮ ಶ್ವಾಸ ನಾಡಿ, ಆಹಾರ ನಾಡಿ ಅಕ್ಕಪಕ್ಕದಲ್ಲೇ ಇರುತ್ತವೆ. ತಿನ್ನುವಾಗ ಒಂದು ಸಂಪೂರ್ಣ ತೆರೆದುಕೊಳ್ಳುತ್ತದೆ. ಅದಕ್ಕೆ ಸರಿಯಾಗಿ ಕೆಲಸ ಕೊಡದೆ ಮಾತನಾಡುತ್ತಾ ಸ್ವರಪೆಟ್ಟಿಗೆಗೆ ಮಾತ್ರ ಕೆಲಸ ಕೊಟ್ಟರೆ ಆಹಾರ ಶ್ವಾಸ ನಾಡಿಯಲ್ಲಿ ಸಿಲುಕುವ ಅಪಾಯ ಇದೆ.
