Breaking News

2018 ರಲ್ಲಿ ಮೊದಲ ಬಾರಿಗೆ ಮತದಾನ ಮಾಡಲಿರುವ ಯುವಜನತೆಗೆ ಅರಿವು ಮೂಡಿಸಲು 5K ಓಟದಲ್ಲಿ ಸ್ಪರ್ಧಿಗಳೊಂದಿಗೆ ಸ್ವತಃ ತಾವೂ ಕೂಡ ಪಾಲ್ಗೊಂಡ ಮಲ್ಲೇಶ್ವರಂ ಶಾಸಕರಾದ ಡಾ.ಅಶ್ವತ್ಥ್ ನಾರಾಯಣ್ ರವರು..
ಕೋತಿಯಿಂದ ನಾಯಿಗೆ ಸಿಕ್ಕ ಮಾತೃ ವಾತ್ಸಲ್ಯ..!ಇದು ಹೇಗೆ ಸಾಧ್ಯ ಅಂತೀರಾ…
ಭಾರತೀಯ ಚಿತ್ರರಂಗದ ಮೊದಲ ಮಹಿಳಾ ಸೂಪರ್ಸ್ಟಾರ್ ಇನ್ನಿಲ್ಲ…
ಈ ದಿನದ ನಿಮ್ಮ ಭವಿಷ್ಯ ನೋಡಿ ತಿಳಿಯಿರಿ…
ಜ್ಞಾನಪೀಠ ಪ್ರಶಸ್ತಿ ಪಡೆದ ದ.ರಾ.ಬೇಂದ್ರೆಯವರ ಬಗ್ಗೆ ತಿಳಿಯಲು ಈ ಲೇಖನ ಓದಿ..
ಬಾರ್ಬಿಯಂತೆ ಕಾಣಲು ತಿಂಗಳಿಗೆ ಈ ಯುವತಿ ಭಾರೀ ಹಣ ಖರ್ಚು..!ತಿಳಿಯಲು ಈ ಲೇಖನ ಓದಿ…
ಪ್ಯಾನ್ ಕಾರ್ಡ್ ಇಲ್ಲದೇ ಈ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ… !ತಿಳಿಯಲು ಈ ಲೇಖನ ಓದಿ..
ಮಗಳ ಜನ್ಮದಿನಕ್ಕೆ ಬೆಂಗಳೂರು ದಂಪತಿಯಿಂದ ಕ್ಯಾನ್ಸರ್ ಆಸ್ಪತ್ರೆ ಗಿಫ್ಟ್..! ತಿಳಿಯಲು ಈ ಲೇಖನ ಓದಿ..
ಬಾಳೆ ಎಲೆಯಲ್ಲಿದೆ ಅನೇಕ ಸಮಸ್ಯೆಗಳಿಗೆ ಅದ್ಭುತವಾದ ಔಷದಿ ಗುಣ.!ತಿಳಿಯಲು ಈ ಲೇಖನ ಓದಿ..
ಸ್ಪೂನ್ ಬಿಟ್ಟು ನಿಮ್ಮಕೈಯಲ್ಲಿ ಊಟ ಮಾಡುವುದರಿಂದ ಎಷ್ಟೆಲ್ಲ ಲಾಭಗಳೀವೆ ನಿಮ್ಗೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..
Sports, ಕ್ರೀಡೆ

ದಾಖಲೆ ನಿರ್ಮಿಸಿದ ಕೊಹ್ಲಿ: ಏಕದಿನ ಕ್ರಿಕೆಟ್ ನಲ್ಲಿ ವೇಗದ 8 ಸಾವಿರ ರನ್ ಸಿಡಿಸಿದ ಮೊದಲ ಕ್ರಿಕೆಟಿಗ!

416

ದಾಖಲೆ ನಿರ್ಮಿಸಿದ ಕೊಹ್ಲಿ: ಏಕದಿನ ಕ್ರಿಕೆಟ್ ನಲ್ಲಿ ವೇಗದ 8 ಸಾವಿರ ರನ್ ಸಿಡಿಸಿದ ಮೊದಲ ಕ್ರಿಕೆಟಿಗ!
ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಬಾಂಗ್ಲಾದೇಶ ವಿರುದ್ಧ 96 ರನ್ ಗಳಿಸಿ ಶತಕ ವಂಚಿತಗೊಂಡು ,ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದ 8 ಸಾವಿರ ರನ್ ಪೂರೈಸಿದ ಕ್ರಿಕೆಟಿಗ.

ಬ್ಯಾಟ್ಸ್ಮನ್ಗಳಿಗೆ ಐಸಿಸಿ ಏಕದಿನ ಶ್ರೇಯಾಂಕದಲ್ಲಿ ಕೊಹ್ಲಿ ಅಗ್ರಸ್ಥಾನ ಪಡೆದಿದ್ದಾರೆ
ವಿರಾಟ್ ಕೊಹ್ಲಿ ಮತ್ತೊಂದು ದಾಖಲೆ ನಿರ್ಮಿಸಿದ್ದು, ಬಾಂಗ್ಲಾದೇಶ ವಿರುದ್ಧ 96 ರನ್ ಗಳಿಸಿ ಶತಕ ವಂಚಿತಗೊಂಡು ,ಕೊಹ್ಲಿ ಏಕದಿನ ಕ್ರಿಕೆಟ್ ನಲ್ಲಿ ಅತೀ ವೇಗದ 8 ಸಾವಿರ ರನ್ ಪೂರೈಸಿದ ಕ್ರಿಕೆಟಿಗ.

ಲಂಡನ್ ನ ಎಡ್ಜ್ ಬ್ಯಾಸ್ಟನ್ ಕ್ರೀಡಾಂಗಣದಲ್ಲಿ ನಡೆದ 2ನೇ ಸೆಮಿ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಕೊಹ್ಲಿ ಈ ದಾಖಲೆ ನಿರ್ಮಿಸಿದ್ದು, ತಮ್ಮ 175ನೇ ಇನ್ನಿಂಗ್ಸ್ ನಲ್ಲಿ 8 ಸಾವಿರ ಪೂರೈಸಿದ ವಿಶ್ವದ ಮೊದಲ ಆಟಗಾರ ಎಂಬ ಕೀರ್ತಿಗೆ ಕೊಹ್ಲಿ ಭಾಜನರಾಗಿದ್ದಾರೆ. ಆ  ಮೂಲಕ ಕೊಹ್ಲಿ 8 ಸಾವಿರ ರನ್ ಪೂರೈಸಿದ ಕ್ರಿಕೆಟಿಗರ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
2008ರಲ್ಲಿ ಏಕದಿನ ಕ್ರಿಕೆಟ್ ಗೆ ಪದಾರ್ಪಣೆ ಮಾಡಿದ್ದ ವಿರಾಟ್ ಕೊಹ್ಲಿ ಆರಂಭದಲ್ಲಿ ಹಿನ್ನಡೆ ಅನುಭವಿಸಿದ್ದರಾದರೂ, ಬಳಿಕ ತಮ್ಮ ಅದ್ಬುತ ಫಾರ್ಮ್ ನಿಂದಾಗಿ ಟೀಂ ಇಂಡಿಯಾದಲ್ಲಿ ಸುಧೀರ್ಘವಾಗಿ ಸ್ಥಾನ ಕಾಯ್ದುಕೊಂಡಿದ್ದರು.  ಇದೀಗ ಅದೇ ಅದ್ಭುತ ಪ್ರದರ್ಶನದಿಂದಾಗಿ ಕೊಹ್ಲಿ ಟೀಂ  ಇಂಡಿಯಾ ನಾಯಕ ಸ್ಥಾನಕ್ಕೇರಿದ್ದು, ಏಕದಿನದಲ್ಲಿ ಕೊಹ್ಲಿ ಅವರ ಬ್ಯಾಟಿಂಗ್ ಸರಾಸರಿ ಬರೊಬ್ಬರಿ 92.37ರಷ್ಟಿದೆ. ಕಳೆದ ವರ್ಷ ಕೊಹ್ಲಿ 85.50 ಬ್ಯಾಟಿಂಗ್ ಸರಾಸರಿ ಹೊಂದಿದ್ದರು.


ಸಚಿನ್, ಗಂಗೂಲಿ, ಲಾರಾ ದಾಖಲೆ ಧೂಳಿಪಟ
ಇದೇ ವೇಳೆ ವಿರಾಟ್ ಕೊಹ್ಲಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮತ್ತು ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನೂ ಕೂಡ ಹಿಂದಿಕ್ಕಿದ್ದಾರೆ. ಸಚಿನ್ 8 ಸಾವಿರ ರನ್ ಪೂರೈಸಲು 210 ಇನ್ನಿಂಗ್ಸ್ ಗಳನ್ನು ತೆಗೆದುಕೊಂಡಿದ್ದರೆ, ಗಂಗೂಲಿ 200 ಇನ್ನಿಂಗ್ಸ್ ಗಳಲ್ಲಿ 8  ಸಾವಿರ ರನ್ ಪೂರೈಸಿದ್ದರು. ಅಂತೆಯೇ ವೆಸ್ಟ್ ಇಂಡೀಸ್ ಬ್ಯಾಟಿಂಗ್ ಲೆಜೆಂಡ್ಸ ಬ್ರಿಯಾನ್ ಲಾರಾ 211 ಇನ್ನಿಂಗ್ಸ್ ಗಳಲ್ಲಿ 8 ಸಾವಿರ ರನ್ ಪೂರೈಸಿದ್ದರು.
ಕೊಹ್ಲಿ, ಡಿ ವಿಲ್ಲಿಯರ್ಸ್ ಮತ್ತು ವಾರ್ನರ್ ವಿರುದ್ಧ ಅಗ್ರ ಸ್ಥಾನ ಪಡೆದರು.  ಐಸಿಸಿ ಏಕದಿನ ಶ್ರೇಯಾಂಕ ಪಟ್ಟಿಯಲ್ಲಿ  ವಿರಾಟ್ ಕೊಹ್ಲಿ, ಭಾರತ ತಂಡದ ನಾಯಕತ್ವದಲ್ಲಿ ಎರಡು ಸ್ಥಾನಗಳನ್ನು ಏರಿಸಿದ್ದಾರೆ. 2017 ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಮೂರನೇ ಶ್ರೇಯಾಂಕಿತ ಕೊಹ್ಲಿ – ಎಬಿ ಡಿ ವಿಲಿಯರ್ಸ್ನ 22 ನೇ ಸ್ಥಾನ ಮತ್ತು ಡೇವಿಡ್ ವಾರ್ನರ್ ಅವರ ಹಿಂದೆ 19 ಪಾಯಿಂಟ್ಗಳನ್ನು ಗಳಿಸಿದರು.
ಜೂನ್ 13 ರಂತೆ ಐಸಿಸಿ ಏಕದಿನ ತಂಡಗಳ ಶ್ರೇಯಾಂಕಗಳು

1. ದಕ್ಷಿಣ ಆಫ್ರಿಕಾ (119 ಅಂಕಗಳು) 2. ಆಸ್ಟ್ರೇಲಿಯಾ (117)
3. ಭಾರತ (117) | 4. ಇಂಗ್ಲೆಂಡ್ (114)
5. ನ್ಯೂಜಿಲೆಂಡ್ (111) | 6. ಬಾಂಗ್ಲಾದೇಶ (95)
7. ಶ್ರೀಲಂಕಾ (93) | 8. ಪಾಕಿಸ್ತಾನ (91)
9. ವೆಸ್ಟ್ ಇಂಡೀಸ್ (77) | 10. ಅಫ್ಘಾನಿಸ್ತಾನ (54)
11. ಜಿಂಬಾಬ್ವೆ (46) | 12. ಐರ್ಲೆಂಡ್ (41).

 

1. ವಿರಾಟ್ ಕೊಹ್ಲಿ (862 ಅಂಕಗಳು)
2. ಡೇವಿಡ್ ವಾರ್ನರ್ (861)
3. ಎಬಿ ಡಿ ವಿಲಿಯರ್ಸ್ (847)
4. ಜೋ ರೂಟ್ (798)
5. ಕೇನ್ ವಿಲಿಯಮ್ಸನ್ (779)
6. ಕ್ವಿಂಟನ್ ಡಿ ಕೊಕ್ (769)
7. ಫಾಫ್ ಡು ಪ್ಲೆಸಿಸ್ (768)
8. ಬಾಬರ್ ಅಜಮ್ (763)
9. ಮಾರ್ಟಿನ್ ಗುಪ್ಟಿಲ್ (749)
10. ಶಿಖರ್ ಧವನ್ (746)

About the author / 

Basavaraj Gowda

ads

ads

ಎಲ್ಲ