News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ದೇಶದಲ್ಲಿ ಮೊದಲ ಬಾರಿಗೆ ಪೆಟ್ರೋಲ್‍ಗಿಂತ ದುಬಾರಿಯಾದ ಡೀಸೆಲ್.
ರಜನಿಕಾಂತ್ ಈ ಮಹಿಳೆಯನ್ನು ಈಗಲೂ ಹುಡುಕುತ್ತಿದ್ದಾರಂತೆ. ಯಾಕೆ ಗೊತ್ತಾ!
ದಯವಿಟ್ಟು ನಮ್ಮನ್ನು ಮರೆಯಬೇಡಿ. ಬಿರಾದರ್ ಅವರ ನೋವಿನ ಮಾತು!
ಪೌರಕಾರ್ಮಿಕರು ಕುಡಿಯಲು ನೀರು ಕೇಳಿದ್ದಕ್ಕೆ ಸಿಟ್ಟುಗೊಂಡು ರಸ್ತೆ ಮಧ್ಯದಲ್ಲಿ ಅಮಾನವೀಯ ರೀತಿ ವರ್ತಿಸಿದ ಮಹಿಳೆ.
ಪುಟ್ಟ ಮಗುವಿಗೆ ತುತ್ತು ತಿನ್ನಿಸಿ ಮಗುವಿನೊಂದಿಗೆ ಮಗುವಾಗಿ ಎಂಜಾಯ್. ವಿಡಿಯೋ ವೈರಲ್!
ಇಡೀ ಪ್ರಪಂಚ ತಲೆಕೆಡಿಸಿದ ಈ ಕ್ಯಾಪ್ಸಿಕಂ ಒಳಗೆ ಏನಿತ್ತು ಗೊತ್ತಾ?
ತಿರುವನಂತಪುರಂ ದೇವಾಲಯದ ಏಳನೇ ಬಾಗಿಲಿನ ರಹಸ್ಯ ಇಲ್ಲಿದೆ ನೋಡಿ.
ಟಿಕ್ ಟಾಕ್ ಖಾತೆ ಡಿಲಿಟ್ ಮಾಡಿ ದೇಶಪ್ರೇಮ ತೋರಿದ ಚಾಲೆಂಜಿಂಗ್ ಸ್ಟಾರ್. ಅಭಿಮಾನಿಗಳು ಖಾತೆ ಡಿಲೀಟ್.
300 ವರ್ಷ ನಮ್ಮ ದೇಶ ಅಳಿದ ಕುಟುಂಬದ ಕೊನೆಯ ರಾಣಿ ಯಾವ ಕೆಲಸ ಮಾಡ್ತಿದ್ದಾರೆ ಗೊತ್ತಾ?
ಕರೋನ ಎಫೆಕ್ಟ್, 4 ಲಕ್ಷ ಸಂಬಳ ಪಡೆಯುತ್ತಿದ್ದ ಪೈಲಟ್ ಈಗ ಡೆಲಿವರಿ ಬಾಯ್.
ದೇವರು-ಧರ್ಮ

ದಕ್ಷಿಣದ ಕಾಶಿ ಎಂದೇ ಪ್ರಸಿದ್ದಿ ಪಡೆದಿರುವ ಹಾಸನದ ರಾಮನಾಥಪುರದ ಬಗ್ಗೆ ನಿಮಗೆ ತಿಳಿಯದ ಮಾಹಿತಿ…ತಿಳಿಯಲು ಈ ಲೇಖನ ಓದಿ…

2853

ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿಗೆ ಸೇರಿದ ಒಂದು ಪುಣ್ಯ ಕ್ಷೇತ್ರ ರಾಮನಾಥಪುರ . ಹಾಸನದಿಂದ ದಕ್ಕಿಣಕ್ಕೆ 49ಕಿ.ಮೀ ಹಾಗೂ ತಾಲೂಕು ಕೇಂದ್ರ ಅರಕಲಗೂಡಿನಿಂದ 19ಕಿ.ಮೀ ಅಂತರದಲ್ಲಿ ಕಾವೇರಿ ನದಿ ದಡದಲ್ಲಿದೆ. ಈ ಕ್ಷೇತ್ರವು ದಕ್ಷಿಣಕಾಶಿ ಎಂದು ಪ್ರಖ್ಯಾತಿಗೊಂಡು ರಾರಾಜಿಸುತ್ತದೆ.

ತ್ರೇತಾಯುಗದ ರಾಮಾಯಣಕ್ಕೂ ಈ ಕಲಿಯುಗದ ರಾಮನಾಥಪುರಕ್ಕೂ ಬಹಳ ಹತ್ತಿರದ ಸಂಬಂಧವಿದೆ. ಈ ಸ್ಥಳವನ್ನು ಕೃತಯುಗದಲ್ಲಿ ಸಂವರ್ತಕಾಪುರಿ, ತ್ರೇತಾಯುಗದಲ್ಲಿ ವಾಸವಾಪುರಿ, ದ್ವಾಪರಯುಗದಲ್ಲಿ ವಹ್ನಿಕಾಪುರ ಹಾಗೂ ಈ ಕಲಿಯುಗದಲ್ಲಿ ರಾಮನಾಥಪುರ, ದಕ್ಷಿಣಕಾಶಿ, ಭಾಸ್ಕರ ಕ್ಷೇತ್ರವೆಂದು ಕರೆಯಲಾಗುತ್ತಿದ್ದು ಇವುಗಳಿಗೆ ಗ್ರಾಮದಲ್ಲಿರುವ ಕುರುಹುಗಳೇ ಸಾಕ್ಷಿಯನ್ನು ಬದಗಿಸುತ್ತಿದೆ.

ಪುರಾಣ ಕತೆ…

ತ್ರೇತಾಯುಗದದಲ್ಲಿ ಲಂಕಾಧಿಪತಿ ಬ್ರಾಹ್ಮಣವಾದ ರಾವಣನನ್ನು ಲೋಕೋದ್ಧಾರಾಕ್ಕಾಗಿ ಸಂಹರಿಸಿದ ನಂತರ ಶ್ರೀರಾಮ ಅಯೋಧ್ಯೆಗೆ ಮರಳಿದ ಮೇಲೆ ಬ್ರಾಹ್ಮಣನಾದ ರಾವಣನ ಅಸುರ ಪರಿವಾರವನ್ನು ಸಂಹರಿಸಿದ್ದರಿಂದ ಬ್ರಹ್ಮಹತ್ಯಾ ದೋಷಪರಿಹರಿಸಿಕೊಳ್ಳಲು ತೀರ್ಮಾನಿಸುತ್ತಾನೆ. ಅಲ್ಲದೇ ಕುಲಗುರು ವಶಿಷ್ಠರ ಬತ್ತಾಸೆ ಮೇರೆಗೆ ಪುಷ್ಟಕ ವಿಮಾನದಲ್ಲಿ ಪರಿವಾರ ಸಮೇತ ರಾಮನಾಥಪುರ(ವಾಸವಾಪುರಿ)ಕ್ಕೆ ಬಂದು ಅಗಸ್ತ್ಯ ಋಷಿಗಳು ವಿಹ್ನಿ ಪುಷ್ಕರಣಿಯ ಸಮೀಪದಲ್ಲಿ ಉದ್ಭವಿಸಿರುವ ಶಿವಲಿಂಗದ ವಿಷಯವನ್ನು ರಾಮನಿಗೆ ತಿಳಿಸಿದಾಗ ಅದನ್ನು ಹುಡುಕಿ ಪುಷ್ಕರಣಿಯಲ್ಲಿರುವ ಉದ್ಭವ ಶಿವಲಿಂಗವನ್ನು ಪೂಜಿಸುತ್ತಾನೆ. ಈ ಮೂಲಕ ದೋಷ ಪರಿಹರಿಸಿಕೊಂಡ ಎಂಬುದು ಇತಿಹಾಸ ತಿಳಿಸುತ್ತದೆ. ವಾಸವಾಪುರಿ ಎಂದು ಕರೆಸಿಕೊಂಡಿದ್ದ ಗ್ರಾಮ ಅಂದಿನಿಂದ ರಾಮನಾಥಪುರ ಎಂದಾಯಿತು ಎನ್ನುತ್ತವೆ ಸ್ಥಳ ಪುರಣ.

ರಾಮನಾಥಪುರದಲ್ಲಿರುವ ದೇವಾಲಯಗಳು…

ರಾಮನಾಥಪುರದಲ್ಲಿ ಸುಬ್ರಹ್ಮಣ್ಯ, ಅಗಸ್ತ್ಯೇಶ್ವರ, ರಾವೇಶ್ವರ, ಪಟ್ಟಬಿರಾಮ, ಲಕ್ಷಿನರಸಿಂಹ, ವಾಸವಪುರಿ ಆಂಜನೇಯ, ಶ್ರೀ ಪರಕಾಲ ಮಠದ ಹಯಗ್ರೀವಸ್ವಾವ, ಆರ್ಯ ವೈಶ್ಯ ಛತ್ರದಲ್ಲಿ ಕನ್ನಿಕಾಪರವೇಶ್ವರಿ, ವರದಾನ ಬಸವೇಶ್ವರ, ಕಾಲುವೆಯಮ್ಮ, ಲಕ್ಷ್ಮಣೇಶ್ವರ ದೇವಾಲಯಗಳಿಂದ ಧರ್ಮಪರಂಪರೆಯ ಮತ್ತು ಭಕ್ತಿಯ ಕೇಂದ್ರವಾಗಿದೆ.

ದಕ್ಷಿಣ ಗಂಗೆ ಕಾವೇರಿ…

ದಕ್ಷಿಣ ಗಂಗೆ ಎಂದು ಪ್ರಸಿದ್ದಿಯನ್ನು ಪಡೇದಿರುವ ಕಾವೇರಿ ನದಿ. ಗಂಗಾ ನದಿಯಲ್ಲಿ ಸ್ನಾನಮಾಡಿ ಕಾಶಿ ರಾಮೇಶ್ವರನ ದರ್ಶನ ಪಡೆದರೆ ಪಾಪನಿವಾರಣೆಯಾಗುತ್ತದೆ ಎಂಬ ನಂಬಿಕೆ ಹೇಗೆ ಉತ್ತರಭಾರತದ ಪ್ರವಾಸಿಗರಿಗೆ ಇದೆಯೋ ಹಾಗೆಯೇ ದಕ್ಷಿಣದ ಕಾವೇರಿ ನದಿಯಲ್ಲಿ ಮಿಂದು ರಾಮೇಶ್ವರನ ದರ್ಶನ ಪಡೆದರೆ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆ ಹೇಗೊ ಹಾಗೆ ಉತ್ತರಭಾರತದಲ್ಲಿ ದಕ್ಷಿಣದ ಕಾವೇರಿ ನದಿಯಲ್ಲಿ ರಾಮೇಶ್ವರನ ದರ್ಶನ ಪಡೆದರೆ ಪಾಪ ನಿವಾರಣೆಯಾಗುತ್ತದೆ ಎಂಬ ನಂಬಿಕೆಯು ದಕ್ಷಿಣ ಪ್ರವಾಸಿಗರಿಗೆ ಇದೆ.

ಶ್ರೀ ಗಂಗಾದಿ ಸಮಸ್ತ ದೇವತೆಗಳು ವರ್ಷಕೊಮ್ಮೆ ತುಲಾಸಂಕ್ರಮಣದ ಮುಹೊರ್ತದಲ್ಲಿ ಕಾವೇರಿಯನ್ನು ಕೂರಿ ಒಂದು ತಿಂಗಳು ಅವಳೊಡನೆ ನೆಲೆಸಿರುತ್ತಾರೆ ಎಂದು ಸ್ಕಂದ ಪುರಾಣದಲ್ಲಿರುವ ಕಾವೇರಿ ಮಹಾತ್ಮೆಯಲ್ಲಿ ಹೇಳಲಾಗಿದೆ. ಪ್ರಾಚೀನ ಋಷಿಗಳು ಸ್ಮರಿಸುತ್ತಾ ಬಂದ ಸಪ್ತನದಿಗಳಲ್ಲಿ ಶ್ರೀ ಕಾವೇರಿಯು ಸೇರಿದ್ದಾಳೆ. ಈ ಕ್ಷೇತ್ರದ ಕಾವೇರಿ ನದಿಯಲ್ಲಿ ಪವಿತ್ರ ವಹ್ನಿಪುಷ್ಕರಣಿ, ಗಾಯಿತ್ರಿ ಶಿಲೆ, ಗೋಗರ್ಭ, ಮೇನಕಾಶಿಲೆ, ಹನುಮಂತನ ಗೋವು, ಕಪಿಲಾತೀರ್ಥ, ಕುಮಾರಧಾರಾ ತೀರ್ಥಗಳು ಇಲ್ಲಿಗೆ ಬರುವ ಭಕ್ತರ ಪಾಲಿನ ಪವಿತ್ರ ಸ್ಥಳವಾಗಿವೆ.

ಇಲ್ಲಿಯ ಕಾವೇರಿ ನದಿಯಲ್ಲಿ ಗೌತಮಶಿಲೆ ಇತ್ತು. ಇದರ ಜೊತೆಗಿಲ್ಲಿ ಗೌತಮ ಮಹರ್ಷಿಗಳ ಪಾದದ ಗುರುತು ಸಹಾ ಇಲ್ಲಿ ಇತ್ತು. ಆದರೆ ಈಗ ಇಲ್ಲ, ಕ್ರಿ.ಶ 1935ರ ಡಿಸೆಂಬರ್ 9ರಂದು  ರಾಮನಾಥಪುರ ಮತ್ತು ಮಲ್ಲಿಪಟ್ಟಣ ನಡುವೆ ಸೇತುವೆಯನ್ನು ನಿರ್ಮಾಣವನ್ನು ಮಾಡಬೇಕಾದರೆ ಬ್ರೀಟಿಷ್ ಚಕ್ರವರ್ತಿ 5ನೆಯ ಜಾರ್ಜನ ಅಜ್ಞೆಯಂತೆ ಆ ಶಿಲೆಗೆ ಸಿಡಿಮದ್ದು ಸ್ಪೋಟಿಸಲಾಯಿತು ಆ ಸ್ಪೋಟಗೊಂಡಾಗ 3 ಭಾರಿ ರಾಮ-ಕೃಷ್ಣ-ಗೋವಿಂದ ದು ಧ್ವನಿ ಕೇಳಿತೆಂದು ಇಲ್ಲಿನ ಹಿರಿಯರು ಹೆಳುತ್ತರೆ.

ಆಗಸ್ತ್ಯೇಶ್ವರ ಲಿಂಗ…

ಕಾವೇರಿ ನದಿಯ ಮಧ್ಯದಲ್ಲಿರುವ ಲಿಂಗವನ್ನು ಆಗಸ್ತ್ಯೇಶ್ವರ ಲಿಂಗ ವೆಂದು ಹೆಸರು.ನದಿ ರೂಪದಲ್ಲಿ ಹರಿದು ಬರುತ್ತಿರುವ ಕಾವೇರಿಗೆ ಅಗಸ್ತ್ಯರು ತನ್ನ ಸತಿ ಮೇಲಿನ ವ್ಯಾಮೋಹದಿಂದ 12 ಯೋಜನೆಗಳಿಗೊಂದರಂತೆ ಶಿವಲಿಂಗವನ್ನು ಪ್ರತಿಷ್ಟಾಪಿಸಿದರು. ಅಗಸ್ತ್ಯರು ಪ್ರತಿಷ್ಠಾಪಿಸಿದ ಲಿಂಗಕ್ಕೆ ಅವರ ಹೆಸರೆ ಬಂದಿದೆ.ಗುರುಸಾರ್ವಭೌಮರಾದ ಶ್ರೀ ವ್ಯಾಸರಾಜರು ಈ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿ ಅಗಸ್ತ್ಯೇಶ್ವರ ದೇಗುಲದ ಬಲಗಡೆ ಹನುಮಂತನನ್ನು ಪ್ರತಿಷ್ಠಾಪಿಸಿದರು. ಅದ್ದರಿಂದ  ವಿಗ್ರಹಕ್ಕೆ ಶ್ರೀ ವ್ಯಾಸಾಂಜನೇಯ ಎಂದು ಹೆಸರು ಬಂದಿದೆ.

ಮೃತಸಂಜೀವಿನಿ ಮಹಿಮೆ…

ಇನ್ನು ಕಾವೇರಿ ನದಿ ನಡುವೆ ಇರುವ ಗೋಗಲ್ಲು (ಗೋಗರ್ಭ)ಕ್ಕೆ ಒಂದು ಐತಿಹ್ಯವಿದೆ. ಇದ್ಕಕೆ “ವೃತಸಂಜೀವಿನಿ” ಎಂದು ಕರೆಯುತ್ತರೆ. ದೇವ-ದಾನವರ ಯುದ್ಧದಲ್ಲಿ ವಿಷ್ಣುವಿನಿಂದ ಅಮೃತ ಪಾನ ಮಾಡಿದ ದೇವತೆಗಳು ರಾಕ್ಷಸರನ್ನು ಸೋಲಿಸಿದರು. ಸೋತ ರಾಕ್ಷಸರು ತಮ್ಮ ಪೂಜ್ಯ ಗುರುಗಳಾದ ಶುಕ್ರಾಚಾರ್ಯರಲ್ಲಿಗೆ ಬಂದು ನಮ್ಮನು  ದೇವತೆಗಳಗಿಂದ ರಕ್ಷಿಸಬೇಕೆಂದು ಮೊರೆಯಿಟ್ಟಾಗ ಶುಕ್ರಾಚರ್ಯರು ನಿಮ್ಮ ಸುಖಕ್ಕಾಗಿ ಸತ್ತವರನ್ನು ಬದುಕಿಸುವ ‘ಮೃತಸಂಜೀವಿನಿ’ ಎಂಬ ಮಂತ್ರವನ್ನು ಕಲಿಯಲು ರಾಮನಾಥಪುರಕ್ಕೆ ಹೋಗುತ್ತೇನೆ ಎಂದು ತಿಳಿಸಿದರು.

ಗೋಗಲ್ಲು (ಗೋವುಗಲ್ಲು)…

ಈ ವಿಷಯ ತಿಳಿದ ಇಂದ್ರ, ಈ ವಿದ್ಯೆ ದಕ್ಕಬಾರದೆಂದು ಅವರ ತಪಸ್ಸನ್ನು ಭಂಗ ಮಾಡಲು ಇಂದ್ರನು ದೇವಲೋಕದಿಂದ ಊರ್ವಶಿ, ರತಿ-ಮನ್ಮಥ, ಕಾಮಧೇನು, ವಸಂತಕರನ್ನು ಕಳುಹಿಸುತ್ತಾನೆ. ತಪೋಭಂಗ ಪಡಿಸಿ ಶುಕ್ರಾಚಾರ್ಯರ ಕೋಪಕ್ಕೆ ತುತ್ತಾಗಿ ಕಾಮಧೇನುವಿಗೆ ಶಿಲೆಯಾಗು ಎಂದು ಶಾಪಕೊಟ್ಟರು. ಆದ್ದರಿಂದ ಶಿಲೆಯಾದ ಕಾಮಧೇನುವನ್ನು ಗೋವುಗಲ್ಲು, ಗೋಗಲ್ಲು ಎಂದು ಕರೆಯುತ್ತಾರೆ. ಅನಂತರ ಊರ್ವಶಿಯ ಪ್ರಾರ್ಥನೆಗೆ ಕ್ಷಮಾಶೀಲರಾದ ಶುಕ್ರಾಚಾರ್ಯರು. ರಾವಣನನ್ನು ಕೊಂದ ರಾಮ ನಿನ್ನ ಸಮೀಪಕ್ಕೆ ಬಂದಾಗ ಶಾಪದಿಂದ ಮುಕ್ತಿ ಹೊಂದು ಎಂದು ಶಾಪ ವಿಮೋಚನೆಯನ್ನು ಹೇಳಿ ತೆರಳುತ್ತಾರೆ.

ವಸಿಷ್ಠರಿಂದ ಪ್ರೇರಿತನಾಗಿ ಬಂದಾ ಶ್ರೀರಾಮ ಶಿಲೆಯಾಗಿದ್ದ ಕಾಮಧೇನು ಮುಂಭಾಗದಿಂದ ನುಸುಳಿ ಹಿಂಭಾಗದಿಂದ ಬಂದ ಈ ಗೋಗರ್ಭದಲ್ಲಿ ರಾಮನ ಪರಿವಾರದವರೆಲ್ಲರು ನುಸುಳಿದರೆಂದು ಐತಿಹ್ಯ ತಿಳಿಸುತ್ತದೆ. ಈ ಗೋಗರ್ಭದಲ್ಲಿ ಜನರು ಇತ್ತಲಿಂದ ಅತ್ತ ನುಸುಳಿ ತಮ್ಮ ಪಾಪ ನಿವಾರಣೆ ಆಯಿತೆಂದು ಅಂದು ಕೊಳ್ಳುತ್ತಾರೆ. ಇದರ ಪಕ್ಕದಲ್ಲಿಯೇ “ಯಮತೀರ್ಥ”ವೂ ಇದೆ. ವರ್ಷಕ್ಕೊಂದು ಸಾರಿ ಇದಕ್ಕೆ ಬಾಳೆ ದಿಂಡನ್ನು ಬಿಡುತ್ತಾರೆ. ಅದು ಕತ್ತರಿಸಿ ಕತ್ತರಿಸಿ ಬಿಡುತ್ತದೆ. ಆದ್ದರಿಂದ ಇದನ್ನು ಕತ್ತರಿ ಗೋವುಗಲ್ ಎನ್ನುತ್ತಾರೆ.

ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ…

ರಾಮನಾಥಪುರದಲ್ಲಿ ಹಲವಾರು ದೇಗುಲಗಳಿದ್ದೂ ಹೆಚ್ಚು ಪ್ರಖ್ಯಾತಿಯನ್ನು ಪಡೆದ ದೇಗುಲ ಸುಬ್ರಹ್ಮಣ್ಯ ಸ್ವಾಮಿ ದೇವಾಲಯ. ಈ ದೇವಾಲಯನ್ನು ನಿರ್ಮಿಸಲು ಒಂದು ಐತಿಹ್ಯವಿದೆ.ಕುಕ್ಕೆ ಸುಬ್ರಹ್ಮಣ್ಯದ ಮಠದ ಗುರು ಪರಂಪರೆಯ 14ನೆಯ ಶ್ರೀ ಶ್ರೀ ವಿಭುದೇಶ ತೀರ್ಥ ಪಾದಂಗಳವರು ಯಾತ್ರಾರ್ಥವಾಗಿ ಹೊರಟು ಶ್ರೀ ಕ್ಷೇತ್ರ ರಾಮನಾಥಪುರಕ್ಕೆ ಬಂದು ಇಲ್ಲಿಯ ಸಂಕ್ರಾಂತಿ ಮಂಟದಲ್ಲಿ ಬಿಡಾರ ಹೊಡಿದರು. ಆಗ ಸ್ವಪ್ನದಲ್ಲಿ ಶ್ರೀ ಸುಬ್ರಹ್ಮಣ್ಯನು ಬಂದು ಇಲ್ಲಿಯವರೆವಿಗೂ ನಾನು ನಿನ್ನನ್ನು ಹಿಂಬಾಲಿಸಿದ್ದೇನೆ ನಾನು ಇಲ್ಲಯೇ ನೆಲೆಸಲು ಅಪೇಕ್ಷಿಸುತ್ತೇನೆ.

ನಿನ್ನ ಬಳಿಗೆ ಬಲ್ಲಾಳರಾಯನನ್ನು ಎಚ್ಚರಿಸಿ ಇಲ್ಲಿಗೆ ಕಳಿಸುತ್ತೇನೆ ಅವನ ಜೊತೆಗೆ ಹೊಳನರಸೀಪುರದ ಪಾಳೇಗಾರ ನರಸಪ್ಪನಾಯಕನ ಸಹಾಯದಿಂದ ನನ್ನನ್ನು ಇಲ್ಲಿ ಪ್ರತಿಷ್ಠೆ ಮಾಡು ಎಂದು ಹೇಳಿದನೆಂದು ಹೇಳಿ  ಹೊಳೆನರಸೀಪುರ ಪಾಳೇಯಗಾರ ನರಸಪ್ಪನಾಯಕನಿಗೂ ಕಾಣಿಕೋಂಡು ರಾಮನಾಥಪುರದಲ್ಲಿ ಗುರುಗಳ ಚ್ಚೆಯಂತೆ ನಡೆದುಕೊಂಡರೆ ನಿನಗೆ ಸಂತಾನಪ್ರಾಪ್ತಿಯಾಗುವುದು ಎಂದು ಕಳುಹಿಸಿ ಶ್ರೀಗಳ ಮರ್ಗ ದರ್ಶಣದಲ್ಲಿ  ಶ್ರೀ ವಿಭುದೇಶ ತೀರ್ಥರು ಇಲ್ಲಿ ಸುಬ್ರಹ್ಮಣ್ಯನನ್ನು ಪ್ರತಿಷ್ಟಾಪಿಸಿದರು.ಈ ದೇವಾಲಯ ದ್ರಾವಿಡ ಶೈಲಿಯಲ್ಲಿದ್ದು ಸಾಕಷ್ಟು ದೊಡ್ಡದಾದ ದೇವಾಲಯವಾಗಿದೆ. ಅಂದಿನಿಂದಲೂ ಜಾತ್ರೆ ಉತ್ಸವಗಳು ಇಲ್ಲಿ ನಡೆಯುತ್ತಿವೆ. ಪಂಚಮಿಯಂದು ರತೋತ್ಸಮ ನಡೆಯುತ್ತದೆ.

ಶ್ರೀ ಪಟ್ಟಾಬಿರಾಮ ದೇವಾಲಯ…

ಈ ದೇವಾಲಯ 15ನೆಯ ಶತಮಾನದಲ್ಲಿ ವಿಜಯನಗರದರಸರ ಆಳ್ವಿಕೆಯಲ್ಲಿ ಕಟ್ಟಲ್ಪಟ್ಟು ದ್ರಾವಿಡ ಶೈಲಿಯಲ್ಲಿದೆ. ಈ ದೇವಾಲಯವನ್ನು ಸೌಬರಿ ವಹರ್ಷಿಗಳು ಪ್ರತಿಷ್ಟಾಪಿಸಿದರು. ಶ್ರೀ  ಪಟ್ಟಾಭಿರಾಮನ  ಮೂರ್ತಿ ಅತಿ ಮನೋಹರವಾಗಿದ್ದು ಇದನ್ನು ಸೀತಾದೇವಿ, ಲಕ್ಷ್ಮಣ, ಭರತ, ಶತೃಘ್ನ ಮತ್ತು ಹನುಮಂತನು ಈ ವಿಗ್ರಹಗಳನ್ನು ಪ್ರತಿಷ್ಟಾಪಿಸಿ ಅರ್ಚಿಸಿದರು. ದೇವಾಲಯದಲ್ಲಿರುವ ಮೂಲ ಮೂರ್ತಿ ಶ್ರೀ ರಾಮ ಕುಳಿತಿದ್ದು ಸೀತಾದೇವೊಯನ್ನು ತನ್ನ ತೊಡೆಯ ಮೇಲೆ ಕೂರಿಸಿಕೊಂಡಿರುವ ಪ್ರತಿಮೆ ಇಲ್ಲದೆ. ಈ ದೇವಾಲಯದಲ್ಲಿ ರಾಮನವಮಿ ಉತ್ಸಮ, ಪವಿತ್ರೋತ್ಸವ ದು ವಿಶೇಷೋತ್ಸಗಳು ಪ್ರತಿವರ್ಷ ವೈಶಾಖ ಶುಕ್ಲಪಕ್ಷದಲ್ಲಿ ಈ ದೇವರ ತೇರು (ರಥೋತ್ಸವ) ಎಳೆಯಲ್ಪಡುತ್ತದೆ.

ರಾಮೇಶ್ವರ ದೇವಾಲಯ

ಹೊಯ್ಸಳರ ಅರಸ 3ನೆಯ ನರಸಿಂಹನ ಕಾಲ (1235-1292)ದಲ್ಲಿ ಸೋಮದಂಡನಾಯಕ ಶ್ರೀ ರಾಮೇಶ್ವರ ದೇವಾಲಯವನ್ನು ನಿರ್ಮಾಣಮಾಡಿದ.  ಈ ದೇವಾಲಯ ನಕ್ಷತ್ರಾಕಾರದ ಗರ್ಭಗುಡಿ, ಸುಕನಾಸಿ, ಕಲಾಕುಸುರಿಯ 9 ಅಂಕಣ ಹೊಂದಿರುವ ನವರಂಗದ ಮನೋಹರ ಸ್ತಂಭಗಳು, ಹೊಯ್ಸಳ ಶಿಖರದ ಮುಂದೆ ಅವರ ಲಾಂಛನವನ್ನು ನಿರ್ಮಿಸಿದ. ನಂತರ ವಿಜಯನಗರ ಅರಸರ ಕಾಲದಲ್ಲಿ ಪ್ರಥಮ ಗೋಪುರ ಮತ್ತು ಸುತ್ತಲೂ ಭದ್ರವಾದ ರಕ್ಷಣಾ ತಡೆಗೋಡೆ ಮಂಟಪಗಳನ್ನು ಕಟ್ಟಿಸಿದ ಎಂಬುದು ತಿಳಿಯುತ್ತದೆ. ಮತ್ತು ಸ್ಥಳೀಯ ಪಾಳೆಯಗಾರರ ಕಾಲಕ್ಕೆ ಅಭಿವೃದ್ಧಿಗೊಂಡಿತೆಂದು ಹೇಳಲಾಗಿದೆ.

ದೇವಾಲಯದ ಒಳ ಭಾಗದಲ್ಲಿ ಮೇಣುಗೋಪಾಲ, ಭೈರವ, ಕೇಶವ, ಸೂರ್ಯ, ಗಣಪತಿ, ಮಹಿಷಮರ್ಧಿನಿ ವಿಗ್ರಹಗಳಿದ್ದು. ದೇವಾಲಯದ ಗರ್ಭಗುಡಿಯ ದಕ್ಷಿಣಕ್ಕೆ ದಕ್ಷಿಣಾಮೂರ್ತಿ, ಉತ್ತರಕ್ಕೆ ಚಂಡಿಕೇಶ್ವರಮೂರ್ತಿ, ಈಶಾನ್ಯಕ್ಕೆ ಈಶ್ಯಾನೇಶ್ವರ ದೇವರ ಮಂಟಪಗಳಿವೆ.ವಿಜಯನಗರದ ಆಳರಸರ ಕಾಲದಲ್ಲಾದ ಪ್ರಾಂಗಣದ ಮಂಟಪ ವಿಶಾಲವಾಗಿದ್ದು. ಮಂಟಪದ ಪೌಳಿ ಅನೇಕ ಚಿತ್ರಕಲಾ ಕೌಶಲ್ಯದಿಂದ ಶಿಲ್ಪಭಿತ್ತಿ ರಂದ್ರಜಾಲವನ್ನು ನೆಯ್ದುಕೊಂಡಿದೆ.

ಹೊಯ್ಸಳರು ಮತ್ತು ವಿಜಯನಗರ ಅರಸರ ಕಾಲದಲ್ಲಿ ರಾಮನಾಥೇಶ್ವರದ ದೇವಸ್ಥಾನದ ಮೇಲ್ವಿಚಾರಣೆಗೆ ನೀಡಿದ ಭೂದಾನ ಕುರಿತು ಎರಡು ಶಿಲಾಶಾಸನಗಳಲ್ಲಿ ಉಲ್ಲೇಖವಿದೆ. ರಾಮೇಶ್ವರ ದೇವಲಯದ ಗರ್ಭಗೃಹದ ಹೊರಭಿತ್ತಿಯಲ್ಲಿ ದಕ್ಷಿಣಾಮೂರ್ತಿ ದೇವಸ್ಥಾನದ ಹಿಂದಿರುವ ನಾಲ್ಕು ಕಲ್ಲುಗಳ ಮೇಲಿನ (ಅಗೂ. 46) ಶಾಸನ ಹಲವು ವಿಧಗಳಿಂದ ಕುತೂಹಲಕಾರಿಯಾಗಿದೆ.

ರಾಮೇಶ್ವರ ದೇವಾಲಯದೊಳಗೆ ದಕ್ಷಿಣಾಮೂರ್ತಿ ಗುಡಿದ ಹಿಂದೆ ಒಂದರ ಪಕ್ಕ ಇನ್ನೊಂದರಂತೆ ನಿಲ್ಲಿಸಿದ ನಾಲ್ಕು ಬೇರೆ ಬೇರೆ ಕಲ್ಲುಗಳ ಮೇಲೆ ಶಾಸವನ್ನು ಕಂಡರಿಸಿರುವುದು ಒಂದು ಅರಪರೂಪದ ನಿದರ್ಶನವಾಗಿದೆ. ಈ ಶಾಸನವು ಕ್ರಿ.ಶ1250ರ ಅಕ್ಟೋಬರ್ 27 ಮತ್ತು 1251ರ ಜೂನ್ 21ರ ವೆಂದು ಎರಡು ದಿನಗಳನ್ನು ಹೊಂದಿದೆ. ಮೊದಲನೆಯ ತೇದಿಯಂದು ನಡುವೆ ನಡೆದಂತಹ ಘಟನೆಯನ್ನು ಮುಂದಿನ 8 ತಿಂಗಳ ಅನಂತರ ಸೂಚಿಸುತ್ತದೆ. ಹಿರಿಯ ಸಂಧಿ ವಿಗ್ರಹಿಯಾದ ಹಾಗೂ ಕೊಂಗಮಂಡಲದ ಅಧ್ಯಕ್ಷನಾದ ಬೊಮ್ಮಣ್ಣದಣ್ಣಾಯಕರ ಕೈಕೆಳಗಿದ್ದ ವಾಮರಸನ ಮಗ ಕಲ್ಲಯ್ಯನೆಂಬಾತ ರಾಮನಾಥದೇವರ ಪೂಜೆಗಾಗಿ ಹೂದೋಟವೊಂದನ್ನು ಮಾಡಿಸಲು ದೇವಾಲಯದ ಸ್ಥಾನಿಕರಿಂದ 95 ಕಂಬ ಭೂಮಿಯನ್ನು ಕ್ರಯಕ್ಕೆ ಪಡೆದು ದಾನ ನೀಡಿದ.

ಇದರಲ್ಲಿ ಮೂವತ್ತು ಕೊಳಗ ತೋಟಗನ ಜೀವಿತಕ್ಕೆ ಸಂದಿತು. ತೋಟಕ್ಕೆ ಮತ್ತು ತೋಟಿಗನ ಮನೆಗೆ ತೆರಿಗೆಯನ್ನು ಮಾನ್ಯಮಾಡಲಾಯಿತು. ಕೆಲವು ತಿಂಗಳುಗಳ ಅನಂತರ  ದತ್ತಿಯನ್ನು ಸ್ವಲ್ಪ ಮಾರ್ಪಡಿಸಲಾಯಿತಿ. ತೋಟಿಗನಿಗೆ ಕೊಟ್ಟಿದ್ದ 30 ಕೊಳಗ ಭೂಮಿಯನ್ನು ಈಗ ದೇವರಿಗೆ ಬಿಡಲಾಯಿತು. ಇದಕ್ಕೆ ಪ್ರತಿಯಾಗಿ, ಹೊಸದಾಗಿ 80 ಕಂಬ ಭೂಮಿಯನ್ನು ಸ್ಥಾನಿಕರಿಂದ ತತ್ಕಾಲೋಚಿತ ಕ್ರಯಕ್ಕೆ ಪಡೆದು ತೋಟಗನ ಜೀವಿತಕ್ಕಾಗಿ ನೀಡಲಾಯಿತು.

ಅಲ್ಲದೆ, ಹದೋಟಕ್ಕೆ ನೀರುಣಿಸಲು ಬಳಸುವ ರಾಟಣಕ್ಕೆ ಹೂಡಿದ ಎತ್ತುಗಳ ಮೇವಿಗಾಗಿ ವರಗುಳಿಯ ವಾರ್ಷಿಕ ಸಿದ್ಧಾಯದಿಂದ 3 ಗದ್ಯಾಣಗಳನ್ನು ಮತ್ತು ನೆಲುವಾಗಿಲಿನ ವಾರ್ಷಿಕ ಆದಾಯದಿಂದ ಒಂದು ಗದ್ಯಾಣ ಮತ್ತು ಒಂದು ಹಣವನ್ನು ಕ್ರಮವಾಗಿ ಶ್ರೀಕರಣದ ನಾಕಣ್ಣ ವಿಜಯಣ್ಣನ ಅಳಿಯ ಸೋಮಣ್ಣ ಹಾಗೂ ಶ್ರೀ ಕರಣದ ಕಾವಣ್ಣನ ಮಗ ಮದುಕಯ್ಯ ಇವರುಗಳು ದಾನಕೊಟ್ಟರು.

ಈ ಶಾಸನವು ಹದಿನಾರು ಮೆಟ್ಟಿನ ಹಾಸಗಳೆಯ ಉದ್ದಳತೆಯ ಉಪಕರಣವನ್ನು ಉಲ್ಲೇಖಿಸುತ್ತದೆ. ಈ ಅಳತೆ ಕೋಲಿನಿಂದ ದಾನ ಭೂಮಿಯನ್ನು ಅಳೆಯಲಾಯಿತು. ಭೂಮಿಯ ಸೀಮಾವಿವರನ್ನು ತಿಳಿಸುವಾಗ ಅದು ಸಿದ್ಧನಾಥನ ದೇವಾಲಯವನ್ನು ಉಲ್ಲೇಖಿಸುತ್ತ.  ಈ ವ್ಯವಹಾರದ ಸಂಬಂಧದಲ್ಲಿ ದಾನಿಯು ಸ್ಥಾನಿಕರಿಂದ ಭೂಮಿಯನ್ನು ಯಥೋಚಿತ ಬೆಲೆಗೆ ಕೊಂಡುಕೊಳ್ಳಬೆಕಾಯಿತೆಂಬುದನ್ನು ಗಮನಿಸಿದರೆ. ಆ ಭೂಮಿಭಾಗಗಳು ಸ್ಥಾನಿಕರ ಖಾಸಗಿ ಆಸ್ತಿಯಾಗಿತ್ತೆಂದು ಸ್ಪಷ್ಟವಾಗಿ ವಿದಿತವಾಗುತ್ತದೆ.

ಈ ದೇವಾಲಯದ ಬಳಪ್ರಾಕಾರದಲ್ಲಿ ರಂಗಮಂಟಪದ ಹೊರಭಿತ್ತಿಯ ಬಳಿ ದಕ್ಷಿಣದ ಕಡೆ ನೆಟ್ಟಿರು (ಅಗೂ 44) ಕ್ರಿ.ಶ.1252ರ ಶಾಸನವು ಕೂಡ ಶ್ರೀರಂಗಪಟ್ಟಣದಿಂದ ಆಳುತ್ತಿದ್ದ ಚಂಗಾಳ್ವದೊರೆಗಳಾದ ಸೋಮದೇವ ಮತ್ತು ಬೊಪ್ಪದೇವರು ನೀಡಿದ್ದ ದಾನವನ್ನು ಕುರಿತು ಪ್ರಸ್ತಾಪಿಸುತ್ತದೆ. ಈ ಶಾಸನ ಕೂಡ ಹಾನಿಗೀಡಾಗಿರುವುದರಿಂದ ವಿವರಗಳು ನಷ್ಟವಾಗಿವೆ. ಆದರೆ ಕಾವೇರೀ ತೀರದಲ್ಲಿ ರಾಮದೇವರ ವಿಗ್ರಹದ ಪ್ರತಿಷ್ಠಾಪನೆಗೆ ಪ್ರಾಯಶಃ ಇವರಿಬ್ಬರೇ ಕಾರಣಕರ್ತರೆಂದು ಕಾಣುತ್ತದೆ. ಕ್ರಿ.ಶ1245-46ರಲ್ಲಿ ಅವರು ಮಾಡಿದ ದಾನವಾದರೋ ಮೂಲದತ್ತಿಯ ಪುನರೂರ್ಜಿತವಾಗಿತ್ತು. ಮತ್ತೆ ಈಗ ಇವರಿಬ್ಬರೂ ಅರಸ ಮತ್ತು ರಾಯಸ ಕೂಸುಗಳ ಜೊತೆಗೂಡಿ ಮಾವನೂರು ಗ್ರಾಮವನ್ನು ದಾವಿತ್ತರಲ್ಲದೆ ದೇವಾಲಯದ ಮುಂದೆ ನಂದಿಕಂಬವನ್ನು ಪ್ರತಿಷ್ಠೆ ಮಾಡಿಸಿದರು.

ದೇವಾಲಯದ ಉತ್ತರ ದಿಕ್ಕಿನ ಹೊರ ಭಾಗದ ಗೋಡೆ ಮೇಲೆ(ಅಗೂ 48) ಕ್ರಿ.ಶ. 1383ನೆಯ ಅಕ್ಟೋಬರ್ 26ರ ಶಾಸನ ವಿಜಯನಗರ ಅರಸ ಎರಡನೆಯ ಹರಿಹರನ ಸೇವಕ ಕರಿಯ ಮಾಯಣ್ಣನು ರಾಮನಾಥಪುರ ಗ್ರಾಮವನ್ನು ಶ್ರೀ ರಾಮನಾಥ ಮತ್ತು ಶ್ರೀ ಗೋಪಿನಾಥ ದೇವರ ಪೂಜೆಗಾಗಿ ದತ್ತಿಕೊಟ್ಟು ಅದರ ಸುಂಕಗಳಾದ ಆಡುದರೆ, ಮಗ್ಗದರೆ, ಆನದೆರೆ, ಕುಮ್ಮರ-ಗಾಣಿಗರ- ನಾಯಿಂದರ ದೆರೆ (ಸುಂಕ) ಸಲ್ಲುವಂತೆ ಶಾಸನದಲ್ಲಿ ಉಲ್ಲೇಖಿಸಲಾಗಿದೆ . ಈ ದೇವಾಲಯದ ತಾಂಡವೇಶ್ವರ ಸ್ವಾಮಿಯವರ ಉತ್ಸವ ವಿಗ್ರಹವನ್ನು ಮೀರ ರಾಜೈಯ್ಯನವರ ಮಗ ನಂಜರಾಜೈಯ್ಯನವರು ದಾನವನ್ನು ಮಾಡಿರುವ ವಿಷಯವನ್ನು (ಅಗೂ 71) ಶಾಸನ ತಿಳಿಸುತ್ತದೆ.

ಗ್ರಾಮದ ಗೋಗರ್ಭದ ಸಮೀಪದ ಬಂಡೆಯ ಮೇಲೆ (ಅಗೂ72) ಶಾಸನವು ಕ್ರಿ.ಶ.1607ರಲ್ಲಿ ರಾಮರಾಜ ತಿರುಮಲರಾಜನು ನಂಜರಾಯಪಟ್ಟಣದ ರುದ್ರಗಣನಿಗೆ ಸ್ಥಿರ ಶಾಸನವೊಂದನ್ನು ಕೊಡುವುದನ್ನು ಕಾಣುತ್ತೇವೆ. ಈ ದಾನಿಯನ್ನು ಕ್ರಮವಾಗಿ ಬೆಟ್ಟದಪುರ ಮತ್ತು ಕಿಲಗೆರೆಯ ಎರಡು ಶಾಸನಗಳಲ್ಲಿ ಕಾಣಿಸಿಕೊಳ್ಳುವ ಇದೇ ಹೆಸರಿನ ವ್ಯಕ್ತಿಯೆಂದು ಗುರುತಿಸಿದೆ.

ಈ ಗ್ರಾಮದಲ್ಲಿ ಆದಿಶಂಕರಾಚಾರ್ಯರು, ಮದ್ವಾಚಾರ್ಯರು, ರಾಮಾನುಜಾಚಾರ್ಯರು ಮತ್ತು ವ್ಯಾಸರಾಜರು ರಾಮನಾಥಪುರಕ್ಕೆ ಭೇಟಿ ನೀಡಿದ್ದಕ್ಕೆ ಕುರುಹುಗಳಿವೆ. ಆದಿಶಂಕರಾಚಾರ್ಯರು ಶ್ರೀರಾಮೇಶ್ವರ ದೇವಾಲಯದಲ್ಲಿ. ಇಂದ್ರಾಕ್ಷಿ ಎದುರಿಗೆ ಗ್ರಹ ಪೀಡಾದಿಗಳಿಗೆ ಮಾರಕವಾದ ತಾಮ್ರದ ಶ್ರೀಚಕ್ರ ಸ್ಥಾಪನೆಯನ್ನು ಮಾಡಿದ್ದಾರೆ.

ರಾಮೇಶ್ವರ ದೇವಾಲಯದ ಪಕ್ಕದಲ್ಲಿ ಪ್ರಸಿದ್ಧ ಪುಷ್ಕರಿಣಿಗಲ್ಲಿ ಒಂದು “ವಹ್ನಿ ಪುಷ್ಕರಣಿ” ಇದೆ. ಇನ್ನೂ ಎರಡು ಕೆ.ಆರ್. ನಗರದ ಬಳಿಯಲ್ಲಿ “ಅರ್ಕಪುಪ್ಕರಣಿ” ತಮಿಳುನಾಡಿನ ಶ್ರೀ ರಂಗದಲ್ಲಿ “ಚಂದ್ರ ಪುಷ್ಕರಣಿ” ಇದೆ. ಈ ಪುಷ್ಕರಣಿಯಲ್ಲಿರುವ ಮೀನುಗಳು ದೇವತೆಗಳ ಅವರಾರವೆಂಬ ನಂಬಿಕೆಯಿದ್ದು ಎಂತಹ ಭಯಂಕರವಾದ ಪ್ರವಾಹ ಬಂದರೂ ಈ ಮೀನಿಗಳು ಮಾತ್ರ ಅತ್ತಿತ್ತ ಚಲಿಸದೆ ಇಲ್ಲಿಯೆ ಇದೆ.  ಇಲ್ಲಗೆ ಬರುವ ಪ್ರವಾಸಿಗಾರು ಪುರಿ ಕಡ್ಲೆ ಕಾಯಿಯನ್ನು ಇಲ್ಲಿಯ ನೀರಿಗೆ ಎಸೆದರೆ ಬಾರಿ ಗಾತ್ರದ ಮೀನುಗಳು ಮೇಳಕ್ಕೆ ಬರುತ್ತವೆ. ಅವುಗಳನ್ನು ನೋಡಿ ಮಕ್ಕಳಿಗೆ ಆಗುವ ನಂದ ವರ್ಣನಾತೀತ. ಮೈಸೂರಿನ ಅರಸರಾದ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ಈ ಕ್ಷೇತ್ರಕ್ಕೆ ಆಗಮಿಸಿದಾಗ ಮೀನಿಗೆ ಮುಗುತಿಯನ್ನು ಚುಚ್ಚಿದ್ದರೆಂದು ಹೇಳುತ್ತಾರೆ. ಈ ಪುಷ್ಕರಣಿಯ ಒಂದು ಕಿ.ಮೀ ಅಂತರದಲ್ಲಿ ಯಾವುದೆ ರೀತಿಯ ಮೀನುಗಳನ್ನು ಹಿಡಿಯಬಾರದೆಂದು ಸರ್ಕಾರ ನಿಷೇಧಿಸಿದೆ.

ಶ್ರೀ ಲಕ್ಷ್ಮಿ ನರಸಿಂಹ ದೇವಾಲಯ

ಈ ದೇವಾಲಯ ಚಿಕ್ಕದೇವರಾಜ ಒಡೆಯರ್ ಕಾಲದ್ದು ಎಂದು ಹೇಳಲಾಗಿದೆ. ಈ ಪ್ರತಿಮೆಯನ್ನು ಶ್ರೀ ಕುಕ್ಕೆ ಸುಬ್ರಹ್ಮಣ್ಯ ಮಠಾಧಿಪತಿ ಶ್ರೀ ವಿಭುದೇಶ ತೀರ್ಥರು ಈ ಕ್ಷೇತ್ರಕ್ಕೆ ಬಂದು ಪೂರ್ವಾಭಿಮುಖವಾಗಿ ಶ್ರೀ ಲಕ್ಷ್ಮಿ ನರಸಿಂಹಸ್ವಾಮಿಯ ಪ್ರತಿಮೆಯನ್ನು ಪ್ರತಿಷ್ಟಾಪಿಸಿದ್ದಾರು ಎಂದು ಕೂಡ ಹೇಳವಾಗುತ್ತದೆ. ಇಲ್ಲಿನ ನರಸಿಂಹ ಮೂರ್ತಿಯ ಮೇಲೆ ಲಕ್ಷ್ಮಿಯು ಕುಳಿತಿರುವುದನ್ನು ನಾವು ನೋಡ ಬಹುದಾಗಿದೆ.

ಮಾರ್ಗಶಿರ ಶುದ್ಧ ಷಷ್ಠಿಯೆಂದು ನಡೆಯು ರಥೋತ್ಸವ ಮೈಸೂರು ಸೀಮೆಯ ಜಾತ್ರೆಯ (ದನಗಳ) ಪೈಕಿ ರಾಮನಾಥಪುರದ ಜಾತ್ರೆಯೇ (ರಥೋತ್ಸವ) ಪ್ರಥಮವಾಗಿದೆ. ರಥವನ್ನು ವಿವಿಧ ಅಲಂಕಾರಗಳಿಂದ ಮರ್ಣರಂಜಿತವಾಗಿ ಅಲಂಕರಿಸಿ ರಥದಲ್ಲಿ ಸುಬ್ರಹ್ಮಣ್ಯೇಶ್ವರ ಸ್ವಾಮಿಯನ್ನು ಪ್ರತಿಷ್ಠಪಿಸಿರುವ ರಥವನ್ನು ನೋಡಲು ಸಾವಿರಾರು ಯಾತ್ರಾರ್ಥಿಗಳು ಪಾಲ್ಗೊಂದು ಪೂಜಿಸುತ್ತರೆ. ಇಲ್ಲಿ ನಡೆಯುವ ದನಗಳ ಜಾತ್ರೆ ಸುಪ್ರಸಿದ್ಧವಾಗಿದ್ದ. ಇದು ರಥೋತ್ಸವ ನಡೆಯುವು ಮುಚ್ಚೆನೆ ಮುಗಿದು ಹೋಗಿರುತ್ತದೆ. ರಥೋತ್ಸವ ಜರುಗಿದ ದಿನದಿಂದ ಹಿಡಿದು ಒಂದು ತಿಂಗಳವರೆಗೂ ಜಾತ್ರೆ ನಡೆಯುತ್ತದೆ. ತಿಂಗಳ ನಂತರ ‘ತಿಂಗಳಶ್ರಷ್ಟಿ’ ತೇರು ಹರಿಯುತ್ತದೆ.ಏಪ್ರಿಲ್ ಮೇ ತಿಂಗಳ ವೈಶಾಖಮಾಸದಲ್ಲಿ ಇಂದ್ರಾಕ್ಷಮ ವಿಗ್ರಹದ ರಥೋತ್ಸವ ಇರುತ್ತದೆ. ಈ ಕ್ಷೇತ್ರದಲ್ಲಿ ಮಾಘ ಬಹುಳ ಮಹಾಶಿವರಾತ್ರಿ ಮರುದಿನ ಅಗಸ್ತ್ಯೇಶ್ವರ, ವೈಶಾಖ ಶುದ್ಧ ಮೃಗಶಿರ ನಕ್ಷತ್ರದಲ್ಲಿ ಪಟ್ಟಾಭಿರಾಮ ಮತ್ತು ವೈಶಾಖ ಶುದ್ಧ ಚತುರ್ದಶಿ ನರಸಿಂಹ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುತ್ತದೆ.

ದ್ಯಾವನೂರು ಮಂಜುನಾಥ್

About the author / 

Basavaraj Gowda

Categories

ಏನ್ ಸಮಾಚಾರ

 • ಸುದ್ದಿ

  ಈ ಎರಡು 2 ಆ್ಯಪ್ ನಿಮ್ಮಲ್ಲಿದ್ದರೆ ಸಾಕು, ದುಬಾರಿ ದಂಡದಿಂದ ಬಚಾವ್ ಆಗಬಹುದು,.! ಇಲ್ಲಿದೆ ನೋಡಿ ಮಾಹಿತಿ!

  ಬೆಂಗಳೂರು, ಹೊಸ ಟ್ರಾಫಿಕ್ ನಿಯಮ ಜಾರಿಯಾದ ಬಳಿಕ ವಾಹನ ಸವಾರರು ಲೈಸೆನ್ಸ್, ವಿಮೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಇಟ್ಟುಕೊಂಡಿರಲೇ ಬೇಕು. ಫೋಟೋಕಾಪಿ(ಝೆರಾಕ್ಸ್) ಡೂಪ್ಲಿಕೇಟ್ ಕಾಪಿ ಇದ್ದರೆ ದಂಡ ಬೀಳುವುದು ಖಚಿತ. ದುಬಾರಿ ದಂಡದಿಂದ ಪಾರಾಗಲು 2 ಆ್ಯಪ್‌ಗಳಿವೆ. ಇವುಗಳಲ್ಲಿ ಯಾವುದಾದರು ಒಂದು ಆ್ಯಪ್ ಇದ್ದರೆ ಹೊಸ ಟ್ರಾಫಿಕ್ ಪನ್‌ನಿಂದ ಬಚಾವ್ ಆಗಬಹುದು. ಹೊಸ ನಿಯಮ ಜಾರಿಯಾದ ಮೇಲೆ ಯಾವುದೂ ಕೂಡ ಫೋಟೋ ಕಾಪಿ  ಇಟ್ಟುಕೊಳ್ಳುವಂತಿಲ್ಲ. ಪ್ರತಿಯೊಂದು ದಾಖಲೆಯೂ ಒರಿಜನಲ್ ಇರಲೇ ಬೇಕು. ಇನ್ನು ಪ್ರತಿ ಬಾರಿ ಮೂಲ ಪ್ರತಿ…

 • ಸುದ್ದಿ

  ತಾನು ಜೀವಂತವಿರುವಾಗಲೇ ತನ್ನ ಸಮಾಧಿ ಸ್ಥಳ ಖರೀದಿಸಿದ ನಟಿ…ಯಾರು ಗೊತ್ತೇ,?

  ಈ ನಟಿ ನಿಮಗೆ ನೆನಪಿದ್ದಾರಾ..? ಕನ್ನಡ ನನ್ನ ಶತ್ರು, ಪೂರ್ಣಚಂದ್ರ, ಪ್ರೇಮಖೈದಿ ಹಾಗೂ ಇತ್ತೀಚೆಗೆ ಬಿಡುಗಡೆಯಾದ ದರ್ಶನ್ ಅಭಿನಯದ ಅಂಬರೀಶ ಸಿನಿಮಾಗಳಲ್ಲಿ ನಟಿಸಿರುವ ಇವರು ಹೆಸರು ರೇಖಾ. ಇವರ ಮೊದಲ ಹೆಸರು ಜೋಸೆಫೆನ್. ಮೂಲತ: ಮಲಯಾಳಂ ಕುಟುಂಬಕ್ಕೆ ಸೇರಿದ ರೇಖಾ ಮಲಯಾಳಂ, ತಮಿಳು, ತೆಲುಗು, ಕನ್ನಡ ಭಾಷೆಗಳಲ್ಲಿ ನಟಿಸಿದ್ದಾರೆ. ಈ ನಟಿ ಸಿನಿಮಾಗಳ ವಿಷಯಕ್ಕೆ ಸಂಬಂಧಿಸಿದಂತೆ ಸುದ್ದಿಯಾಗಿದ್ದಾರೋ ಇಲ್ಲವೋ ಗೊತ್ತಿಲ್ಲ. ಆದರೆ ತಾವು ಬದುಕಿರುವಾಗಲೇ ತಮ್ಮ ಸಮಾಧಿ ಸ್ಥಳವನ್ನು ಖರೀದಿಸುವ ಮೂಲಕ ಸುದ್ದಿಯಾಗಿದ್ದಾರೆ. ಇಂತಹ ಘಟನೆಗಳು ಬಹಳ…

 • ರಾಜಕೀಯ

  ಮೋದಿ ರಾಜ್ಯಕ್ಕೆ ಬಂದರೆ ದವಡೆಗೆ ಒಡೆಯಿರಿ ಎಂದು ವಿವಾಧಾತ್ಮಕ ಹೇಳಿಕೆ ಕೊಟ್ಟ ಶಾಸಕ..!

  ಚುನಾವಣಾ ಪ್ರಚಾರದ ಅಬ್ಬರ ಜೋರಾಗಿದೆ. ಕೆಲ ನಾಯಕರು ಪಕ್ಷದ ಪರ ಭಾಷಣ ಮಾಡುವ ವೇಳೆ ನಾಲಿಗೆ ಹರಿಬಿಡ್ತಿದ್ದಾರೆ. ಇದೀಗ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದರೆ ಎತ್ತಿ ದವಡೆಗೆ ಹೊಡೆಯಿರಿ ಅಂತಾ ಜೆಡಿಎಸ್‍ ಶಾಸಕ ಶಿವಲಿಂಗೇಗೌಡ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಜೆಡಿಎಸ್‍ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಬಂದರೆ ಜನರಿಗೆ ಹಾಗೂ ರೈತರಿಗೆ ಕಳೆದ ಚುನಾವಣೆ ವೇಳೆ ಕೊಟ್ಟ ಭರವಸೆ ಏನಾಯ್ತು ಅಂತಾ ಪ್ರಶ್ನಿಸಿ, ಎಲ್ಲರೂ ದವಡೆಗೆ ಹೊಡೆಯಿರಿ ಅಂತಾ ಭಾಷಣ…

 • ಸಿನಿಮಾ

  ಈ ಸೂಪರ್ ಸ್ಟಾರ್’ಗಳ ಜೋಡಿಗಳಲ್ಲಿ ಪತ್ನಿಯರೇ ದೊಡ್ಡವರು..!ತಿಳಿಯಲು ಈ ಲೇಖನ ಓದಿ..

  ಪ್ರೀತಿ ಕುರುಡು ಅಂತಾರೆ. ಪ್ರೀತಿಯಲ್ಲಿ ವಯಸ್ಸು, ಜಾತಿ ಇದ್ಯಾವುದೂ ಪ್ರಮುಖ ಆಗುವುದಿಲ್ಲ. ಈ ತಾರಾ ಜೋಡಿಗಳಲ್ಲಿ ಪತಿಗಿಂತ ಪತ್ನಿಯರೇ ವಯಸಲ್ಲಿ ದೊಡ್ಡವರು.

 • ಮನರಂಜನೆ

  BB ಮನೆಯಲ್ಲಿ ಶುರುವಾಯ್ತು ಪ್ರೇಮ್ ಕಹಾನಿ!’ನನ್ನ ಕಂಡರೆ ನಿಮಗೆ ಏನನಿಸುತ್ತೆ?

  ಬಿಗ್‌ ಬಾಸ್‌ ಮನೆಯಲ್ಲಿ ಕೋಪ, ಜಗಳ, ಲವ್, ಕೇರ್‌ ಇವೆಲ್ಲಾ ಮಾಮೂಲಿ.ಅದರಲ್ಲೂ ನಟ-ನಟಿಯರು ಬೇಗ ಗಂಟು ಹಾಕಿಕೊಳ್ಳುತ್ತಾರೆ ಎಂಬುವುದು ವೀಕ್ಷಕರ ಅಭಿಪ್ರಾಯ. ಮೊದಲ ವಾರದಲ್ಲೇ ಅತಿ ಹೆಚ್ಚು ವೋಟ್‌ ಪಡೆದು ನಾಮಿನೇಶನ್‌ ಪಟ್ಟಿಯಲ್ಲಿ ಸೇರಿಕೊಂಡಿರುವ ಸ್ಪರ್ಧಿ ಚೈತ್ರಾ ಕೊಟ್ಟೂರ್‌ ಟಾಸ್ಕ್ ನಡೆದ ನಂತರ ಮಧ್ಯರಾತ್ರಿ ‘ಲಕ್ಷ್ಮಿ ಬಾರಮ್ಮ’ ಖ್ಯಾತಿಯ ಶೈನ್‌ ಶೆಟ್ಟಿ ಜೊತೆ ಕುಳಿತು ಮಾತನಾಡುತ್ತಿರುತ್ತಾರೆ. ಆಗ ಮನಸ್ಸಲ್ಲಿದ್ದ ಲವ್‌ ವಿಚಾರವನ್ನು ತೆರೆದಿಟ್ಟಿದ್ದಾರೆ. ಬಿಗ್‌ ಬಾಸ್‌ ಮನೆಗೆ ಪ್ರವೇಶಿಸಿದ ಬಳಿಕ ಶೈನ್‌ ಶೆಟ್ಟಿ ಜೊತೆ ಕಾಣಿಸಿಕೊಳ್ಳದ ಚೈತ್ರಾ…

 • ವಿಸ್ಮಯ ಜಗತ್ತು, ಸುದ್ದಿ

  ಇದು ನೋಡಲು ಜಲಪಾತದಂತೆ ಕಾಣುತ್ತದೆ..ಆದರೆ, ಜಲಪಾತ ಅಲ್ಲ …!ಮತ್ತಿನ್ನೇನು ಗೊತ್ತಾ?

  ವ್ಹಾವ್…ಇಂತಹ ದೃಶ್ಯಗಳು ಎಲ್ಲಾ ಕಡೆ ಕಾಣಿಸುವುದಿಲ್ಲ, ಎಲ್ಲರ ಮನಸ್ಸನ್ನು  ಸೆಳೆಯುವ ನೋಟ… ನೋಡಿದ ಅರೆಕ್ಷಣದಲ್ಲಿಯೇ ಮನಸ್ಸು ಹಕ್ಕಿಯಂತೆ  ಹಾರುತ್ತದೆ ಎಂದರೆ  ತಪ್ಪೇನಿಲ್ಲ… ಅಂತಹ ಮನಮೋಹಕ ದೃಶ್ಯವಿದು… ತಕ್ಷಣಕ್ಕೆ ನೀರು ಹಾಲ್ನೊರೆಯುನ್ನುಕ್ಕಿಸಿ ಧುಮ್ಮಿಕ್ಕುವಂತೆ ಕಾಣುತ್ತದೆ. ಆದರೆ, ನಿಜವಾಗಿಯೂ ಇದು ಜಲಪಾತವೇ ಅಲ್ಲ…! ನಮ್ಮ ಕಣ್ಣನ್ನೇ ನಂಬದಂತೆ ಮಾಡುವ ಇಂತಹ ಅದ್ಭುತ ದೃಶ್ಯ ಸೆರೆಯಾಗಿದ್ದು ಮಿಜೋರಾಂನ ಐಜಾಲ್ ನಗರದಲ್ಲಿ. ಮಿಜೋರಾಂ ಪ್ರಕೃತಿಯ ರಮಣೀಯ ತಾಣಗಳಲ್ಲಿ ಒಂದು. ಇಲ್ಲಿನ ಬೆಟ್ಟ ಗುಡ್ಡಗಳನ್ನು ನೋಡುವುದೆಂದರೆ ಕಣ್ಣಿಗದು ಹಬ್ಬ. ಇದೇ ಬೆಟ್ಟದ ನಡುವೆ ಕಂಡದ್ದು…