ಆರೋಗ್ಯ

ತೂಕ ಇಳಿಸಲು ಬಯಸುವವರು ಸೀಬೇಕಾಯಿ ಸೇವಿಸಬಹುದು..!ತಿಳಿಯಲು ಈ ಲೇಖನ ಓದಿ..

448

ಹೆಚ್ಚಿನವರಿಗೆ ನೈಸರ್ಗಿಕವಾಗಿ ತೂಕ ಇಳಿಸುವ ಚಿಂತೆ. ಹೀಗೆ ತೂಕ ಇಳಿಸುವವರು ಯಾವುದೆಲ್ಲಾ ಹಣ್ಣು ಸೇವಿಸಬಹುದು ಎಂಬ ಜಿಜ್ಞಾಸೆಗೆ ಬೀಳುತ್ತಾರೆ. ಅಸಲಿಗೆ ಸೀಬೇಕಾಯಿ ತೂಕ ಹೆಚ್ಚಿಸಲು ಸಹಕಾರಿಯೇ ಎಂಬುದು ಹಲವರ ಪ್ರಶ್ನೆ.

ತಜ್ಞರ ಪ್ರಕಾರ ತೂಕ ಇಳಿಸಲು ಬಯಸುವವರು ಸೀಬೇಕಾಯಿ ಸೇವಿಸಬಹುದು. ಯಾಕೆಂದರೆ ಸೀಬೇಕಾಯಿಯಲ್ಲಿ ವಿಟಮಿನ್ ಸಿ, ನಾರಿನಂಶ ಮತ್ತು ಜೀರ್ಣಪ್ರಕ್ರಿಯೆ ಸುಗಮಗೊಳಿಸುವ ಹಲವು ಪೋಷಕಾಂಶಗಳಿವೆ.

ಅಷ್ಟೇ ಅಲ್ಲ, ಇದರಲ್ಲಿ ಸಕ್ಕರೆ ಅಂಶವೂ ಕಡಿಮೆ. ಹಾಗಾಗಿ ಆರೋಗ್ಯಕ್ಕೂ ಒಳ್ಳೆಯದು. ಹಸಿವೂ ನೀಗಿಸುತ್ತದೆ. ಹಾಗೆಯೇ ಅಷ್ಟೇ ಬೇಗ ಜೀರ್ಣವೂ ಆಗಬಲ್ಲದು. ಹಾಗಾಗಿ ತೂಕ ಇಳಿಸಲು ಬಯಸುವವರಿಗೆ ಇದು ಹೇಳಿ ಮಾಡಿಸಿದ ಹಣ್ಣು.

ರೋಗ ನಿರೋಧ ಶಕ್ತಿ:-
ಸೀಬೇಕಾಯಿಯಲ್ಲಿ ವಿಟಮಿನ್ ಸಿ ಅಂಶ ಹೇರಳವಾಗಿದೆ. ಹಾಗಾಗಿ ಇದು ಉತ್ತಮ ರೋಗ ನಿರೋಧಕ ಶಕ್ತಿ ಒದಗಿಸುತ್ತದೆ.

ಕ್ಯಾನ್ಸರ್ ದೂರ ಮಾಡುತ್ತದೆ:-
ಸೀಬೇಕಾಯಿಯಲ್ಲಿರುವ ಪೋಷಕಾಂಶಗಳು ಕ್ಯಾನ್ಸರ್ ಕಣಗಳು ಬೆಳೆಯದಂತೆ ನೋಡಿಕೊಳ್ಳುತ್ತದೆ. ಅದರಲ್ಲೂ ವಿಶೇಷವಾಗಿ ಗರ್ಭಕೋಶ ಮತ್ತು ಸ್ತನ ಕ್ಯಾನ್ಸರ್  ಬಾರದಂತೆ ತಡೆಯುತ್ತದೆ.

ಹೃದಯ ಕಾಪಾಡುತ್ತದೆ:-
ಸೀಬೇಕಾಯಿ ದೇಹದಲ್ಲಿ ಸೋಡಿಯಂ ಮತ್ತು ಪೊಟೇಶಿಯಂ ಅಂಶವನ್ನು ಸಮತೋಲದಲ್ಲಿರಿಸುತ್ತದೆ. ಇದರಿಂದ ಸಹಜವಾಗಿ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ. ಸಹಜವಾಗಿ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ.

ಮಲಬದ್ಧತೆ:-
ಸೀಬೇಕಾಯಿ ನಮ್ಮ ದೇಹಕ್ಕೆ ಅಗತ್ಯವಾದ ನಾರಿನಂಶ ಒದಗಿಸಬಲ್ಲದು. ಹಾಗಾಗಿ ಇದು ಜೀರ್ಣಕ್ರಿಯೆಯನ್ನೂ ಸುಗಮಗೊಳಿಸುತ್ತದೆ. ಇದರಿಂದಾಗಿ ಮಲಬದ್ಧತೆ ಸಮಸ್ಯೆ ದೂರವಾಗಬಹುದು.

ಕಣ್ಣಿನ ಆರೋಗ್ಯ:-
ಸೀಬೇಕಾಯಿಯಲ್ಲಿ ವಿಟಮಿನ್ ಎ ಅಂಶವೂ ಬೇಕಾದಷ್ಟಿರುವ ಕಾರಣ ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

ದೃಷ್ಟಿ ಚುರುಕುಗೊಳ್ಳಬೇಕಾದರೆ ದಿನಕ್ಕೊಂದು ಸೀಬೇಕಾಯಿ ತಪ್ಪದೇ ತಿನ್ನಿ.

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ