News

ನಿಮ್ಮ ಜ್ಞಾನಕ್ಕೆ ಮತ್ತಷ್ಟು ಬಲ KAS ಅಥವಾ ಕೋಟ್ಯಾದಿ ಪತಿಗೆ ಇದು ತುಂಬ ಸಹಾಯ ಮಾಡಲಿದೆ ಲೇಖನ ಓದಿ
ನೂತನ ಸಂಸತ್ ಭವನದ ಉದ್ಘಾಟನೆ ಸ್ಮರಣಾರ್ಥ 75 ರೂ. ಮುಖಬೆಲೆಯ ವಿಶೇಷ ನಾಣ್ಯ ಬಿಡುಗಡೆ..!!
2000 ರೂಪಾಯಿ ಮುಖಬೆಲೆ ನೋಟು ಚಲಾವಣೆಯನ್ನು ಹಿಂಪಡೆದ ಭಾರತೀಯ ರಿಸರ್ವ್ ಬ್ಯಾಂಕ್ !
ಬಿಜೆಪಿ 2023 ಚುನಾವಣಾ ಪ್ರಣಾಳಿಕೆಯಲ್ಲಿ ಏನಿದೆ?
ಬಂಗಾರಪೇಟೆ (ಮೀ) ವಿಧಾನಸಭಾ ಕ್ಷೇತ್ರದ ನಾಮನಿರ್ದೇಶಿತ ಅಭ್ಯರ್ಥಿಗಳ ಪಟ್ಟಿ
ಹಸುವಿನ ಹೊಟ್ಟೆಯಲ್ಲಿ ಇತ್ತು ಬರೋಬರಿ 15 ಕೆಜಿ !!!!!!!!!
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ
ಬಿಜೆಪಿ ಪಕ್ಷ ದಿಂದ ಅಭ್ಯರ್ಥಿಗಳ ಪಟ್ಟಿ ಪ್ರಕಟ
ಪೋಕ್ಸೊ ಕಾಯಿದೆ ಅಡಿ ಆರೋಪಿಗೆ 20 ವರ್ಷ ಸಜೆ-20 ಸಾವಿರ ದಂಡ
5 ಬಾರಿ ಶಾಸಕರಾಗಿ ಗೆದ್ದ ಇವರು ಈಗ ಏನು ಮಾಡುತ್ತಿದ್ದಾರೆ ಗೊತ್ತಾ? ಈ ವ್ಯಕ್ತಿಯಿಂದ ರಾಜಕೀಯ ನಾಯಕರು ಕಲಿಯಬೇಕು
ಉತ್ತಮ ಆರೋಗ್ಯ ಟಿಪ್ಸ್
ಸ್ಪೂರ್ತಿ

ಜೀವನದಲ್ಲಿ ಸಮಾಜಕ್ಕೆ ಏನನ್ನಾದರೂ ಕೊಡುಗೆ ನೀಡಬೇಕೆಂಬುದು ಸತ್ಯ..ಅದಕ್ಕೆ ಸುನಿತಾ ಮಂಜುನಾಥ್ ರವರೇ ನೈಜ್ಯ ಉದಾಹರಣೆ…

140

ಸಾಕಷ್ಟು ಸಮಾಜಸೇವೆಗಳನ್ನು ಮಾಡಿ ಹೆಸರಾಗಿರುವ ಸುನಿತಾ ಮಂಜುನಾಥ್ ರವರ ಬಹು ದೊಡ್ಡ ಕನಸಿನ ಆಂದೋಲನವೇ “ಕಸದಿಂದ ರಸ” ತಮ್ಮದೇ ಶಾಲೆಯ ಮಕ್ಕಳಿಗೆ ಹುರಿದುಂಬಿಸಿ..‌ ದೇಶದ ಬಗ್ಗೆ ಅಭಿಮಾನವನ್ನು ಹೆಚ್ಚು ಮಾಡುತ್ತಿರುವ ಇವರು ನಿಜಕ್ಕೂ ಗ್ರೇಟ್..

“ಕಸದಿಂದ ರಸ” ಇದು ಒಂದು ಅದ್ಭುತ ಆಲೋಚನೆ
“ಸುಮನಾ ಫೌಂಡೇಶನ್” ಸಹಯೋಗದೊಂದಿಗೆ ಸುನಿತಾ ಮಂಜುನಾಥ್ ರವರ “ಚನ್ನಕೇಶವ ಶಿಕ್ಷಣ ಸಂಸ್ಥೆ ವತಿಯಿಂದ” ಸುಮಾರು ದಿನಗಳಿಂದ ಆಂದೋಲನ ಪ್ರಾರಂಭಿಸಿದ್ದರು..


ಚಲನಚಿತ್ರ ಮಂದಿರಗಳಲ್ಲಿ, ಮದುವೆ ಇನ್ನಿತರ ಸಮಾರಂಭಗಳಲ್ಲಿ ನೀರು ಕುಡಿದು ಬಿಸಾಕಿದ ಖಾಲಿ ಬಾಟಲುಗಳನ್ನು ಸಂಗ್ರಹಿಸುವುದು. ಜೊತೆಗೆ ಎಳನೀರು ಕುಡಿದು ಬಿಸಾಡಿದ ತೆಂಗಿನ ಕಾಯಿಗಳನ್ನು ಸಂಗ್ರಹಿಸಿ, ಅವುಗಳನ್ನು ಬೇಕಾದ ಆಕಾರಕ್ಕೆ ಕಟ್ ಮಾಡಿ , ಮಣ್ಣು ತುಂಬಿ ಚಿಕ್ಕ ಚಿಕ್ಕ ಸಸಿಗಳನ್ನು ನೆಡುವುದು ಈ ಆಂದೋಲನದ ಉದ್ದೇಶವಾಗಿತ್ತು…

ಇಲ್ಲಿಯವರೆಗೆ ಸುತ್ತಮುತ್ತಲಿನ ಪ್ರದೇಶಗಳಿಂದ ಸುನಿತಾ ಮಂಜುನಾಥ್ ಮತ್ತವರ ಸುಮನಾ ಫೌಂಡೇಶನ್ ತಂಡ ಸಾವಿರಕ್ಕೂ ಹೆಚ್ಚು ಬಿಸಾಡಿದ ಬಾಟಲ್ಸ್ ಮತ್ತು ಎಳನೀರಿನ ತೆಂಗಿನಕಾಯಿಗಳನ್ನು ಸಂಗ್ರಹಿಸಿ , ಸಸಿಗಳನ್ನು ನೆಡುತ್ತಿರುವುದು ನಿಜಕ್ಕೂ ಅಭಿನಂದನಾರ್ಹವಾದದ್ದು…

ಏನನ್ನೂ ಅಪೇಕ್ಷೆ ಪಡದೇ ಇವರು ಜನರಿಗೆ ಅರಿವು ಮೂಡಿದರೆ ಸಾಕು.. ಈ ಕಾರ್ಯದ ಮುಖ್ಯ ಉದ್ದೇಶ ಪರಿಸರ ಕಾಳಜಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಎನ್ನುತ್ತಾರೆ ಅಂದೋಲನದ ರುವಾರಿ ಸುನಿತಾ ಮಂಜುನಾಥ್..

M Tec ಪದವಿಯನ್ನು ಪಡೆದು.. ಸರ್ಕಾರಿ ಕೆಲಸವನ್ನು ತ್ಯಜಿಸಿ.. ಸಮಾಜದ ಬಗ್ಗೆಗಿನ ಕಾಳಜಿಯಿಂದ ಈ ರೀತಿಯಾದಂತಹ ಆಂದೋಲನಗಳನ್ನು ಮಾಡುತ್ತಾ ಬಂದಿರುವ ಸುನಿತಾ ಮಂಜುನಾಥ್ ರವರ ಪರಿಸರ ಪ್ರೀತಿಗೆ ನಮ್ಮ ಕಡೆಯಿಂದ ಹ್ಯಾಟ್ಸ್ ಆಫ್..

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ