ಸುಮ್ಮನೆ ಊಹಿಸಿಕೊಳ್ಳಿ ನೀವು ನಿಮ್ಮ ಲ್ಯಾಪ್ ಟಾಪ್ ಅಥವಾ ಕಂಪ್ಯೂಟರ್ ಸ್ಟಾರ್ಟ್ ಮಾಡುತ್ತೀರಿ ಅಲ್ಲಿ ಗೂಗಲ್ ಇಲ್ಲದಿದ್ದರೆ, ನಿಮ್ಮ ಐ ಫೋನ್ ಸ್ವಿಚ್ ಆನ್ ಮಾಡುತ್ತೀರ ಅಲ್ಲಿ ಪರದೆಯ ಮೇಲೆ ಏನೂ ಬರದೆ ಬರಿ ಕಪ್ಪು ಪರದೆ ಕಂಡರೆ ..? ಫೇಸ್ ಬುಕ್, ಟ್ವಿಟ್ಟರ್, ಅಮೆಜಾನ್ ಮತ್ತು ಮೈಕ್ರೋ ಸಾಫ್ಟ್ ಯಾವುದೂ ಇಲ್ಲದ ಜಗತ್ತನ್ನ ಊಹಿಸಿಕೊಳ್ಳಿ…. ಇದು ನಿಜ ಜೀವನದಲ್ಲಿ ಆಗಿಬಿಟ್ಟರೆ? ಜಗತ್ತು ಎಂತಹ ಪ್ಯಾನಿಕ್ ಗೆ ಒಳಗಾಗಬಹದು?
ಗಮನಿಸಿ ನೋಡಿ ಇಂದು ಜಗತ್ತನ್ನ ಆಳುತ್ತಿರುವುದು ಟೆಕ್ನಾಲಜಿ ಕಂಪನಿಗಳು. ಮೊದಲೇ ಹೇಳಿದಂತೆ 2007 ರ ವರೆಗೆ ಜಗತ್ತನ್ನ ಆಳುತ್ತಿದ್ದದ್ದು ಬ್ಯಾಂಕಿಂಗ್ ವ್ಯವಸ್ಥೆ . ಇದೀಗ ಇದು ಟೆಕ್ನಾಲಜಿ ಕಂಪನಿಗಳ ಕೈ ಸೇರಿದೆ . ಜಗತ್ತು ಹೆಚ್ಚೆಚ್ಚು ನಗದನ್ನ ತೊರೆದು ಡಿಜಿಟಲ್ ಹಣವನ್ನ ಅಪ್ಪುವುದಕ್ಕೆ ಶುರು ಮಾಡಿದೆ. ಹಾಗಾಗಿ ಟೆಕ್ನಾಲಜಿ ಕಂಪನಿಗಳು ಹಣಕಾಸು ವಹಿವಾಟಿನ ಮೇಲೆ ತಮ್ಮ ಪ್ರಭಾವವನ್ನ ಹೆಚ್ಚು ಮಾಡಿಕೊಂಡಿವೆ. ಇಂದು ಜಗತ್ತನ್ನ ಆಳುತ್ತಿರುವ ಪ್ರಮುಖ ಟೆಕ್ನಾಲಜಿ ಕಂಪೆನಿಗಳಲ್ಲಿ ಐದು ಅತ್ಯಂತ ಪ್ರಮುಖವಾದವು. ಅವೆಂದರೆ 1.ಗೂಗಲ್ 2.ಆಪಲ್ 3.ಮೈಕ್ರೋಸಾಫ್ಟ್ 4. ಅಮೆಜಾನ್ 5.ಫೇಸ್ಬುಕ್.ಇಷ್ಟಕ್ಕೂ ನಮಗೇಕೆ ಬ್ಯಾಂಕ್ಗಳ ಮೇಲೆ ಅಷ್ಟೊಂದು ವ್ಯಾಮೋಹ ? ಬ್ಯಾಂಕ್ ಏನು ಬದಲಿಸಲಾಗದ ಶಾಶ್ವತ ವ್ಯವಸ್ಥೆಯೇನು ಅಲ್ಲ . ಬ್ಯಾಂಕ್ ಅಂದರೇನು ? ಬೇರೊಬ್ಬರ ಹಣವನ್ನ ಪಡೆದು ಇನ್ನೊಬ್ಬರಿಗೆ ಸಾಲ ಕೊಡುವ ದಲ್ಲಾಳಿ ಸಂಸ್ಥೆಯಷ್ಟೇ . ತಾನು ಹಣ ಪಡೆದವರಿಗೆ ಒಂದಷ್ಟು ಕೊಟ್ಟು ತಾನು ಕೊಟ್ಟವರಿಂದ ಒಂದಷ್ಟು ವಸೂಲಿ ಮಾಡಿ ಮಧ್ಯದಲ್ಲಿ ಒಂದಷ್ಟು ಹಣವನ್ನ ಲಾಭವನ್ನಾಗಿ ಮಾಡಿಕೊಳ್ಳುವ ಒಂದು ದಲ್ಲಾಳಿ ಮನಸ್ಥಿತಿಯ ಸಂಸ್ಥೆ ಇಷ್ಟು ಬಿಟ್ಟು ಬೇರೇನೂ ಅಲ್ಲ . ಇದೆ ಕಾರಣಕ್ಕೆ ಬ್ಯಾಂಕ್ಗಳು ನೇಪಥ್ಯಕ್ಕೆ ಸೇರುತ್ತದೆ ಅಂದದ್ದು . ಗಮನಿಸಿ ನೋಡಿ ಈ ಕೆಲಸವನ್ನ ಬ್ಯಾಂಕಿನ ಸಹಾಯವಿಲ್ಲದೆ ಟೆಕ್ನಾಲಜಿ ಕಂಪನಿಗಳು ಮಾಡಬಲ್ಲವು .
ಆದರೆ ಇಂದಿನ ಕಾಲಘಟ್ಟದಲ್ಲಿ ಬ್ಯಾಂಕ್ ಇದೆ ಕಾರ್ಯವನ್ನ ಟೆಕ್ನಾಲಜಿ ಸಂಸ್ಥೆಗಳ ಸಹಾಯವಿಲ್ಲದೆ ಮಾಡಲಾರವು . ಅಂದರೆ ಸರಳವಾಗಿ ಬ್ಯಾಂಕಿಗೆ ಟೆಕ್ನಾಲಜಿ ಕಂಪನಿ ಬೇಕು ಟೆಕ್ನಾಲಜಿ ಕಂಪನಿಗೆ ಬ್ಯಾಂಕಿನ ಅವಶ್ಯಕತೆ ಇಲ್ಲ . ಇಂತಹ ಸಂದರ್ಭದಲ್ಲಿ ಬ್ಯಾಂಕ್ಗಳು ಹೇಗೆ ತಾನೇ ಉಳಿದಾವು ? ಬ್ಯಾಂಕ್ ಎನ್ನುವುದು ಇಂದಲ್ಲ ನಾಳೆ ತೆರೆಮರೆಗೆ ಸರಿಯಲಿರುವ ಹಳೆಯ ಪಾತ್ರಧಾರಿ ಅಷ್ಟೇ . ಹಾಗಾದರೆ ಟೆಕ್ನಾಲಜಿ ಕಂಪನಿಗಳು ಮುಳುಗುವುದಿಲ್ಲವೇ ? ಎನ್ನುವ ಪ್ರಶ್ನೆ ಕೂಡ ಸಹಜವಾಗಿ ಓದುಗರಲ್ಲಿ ಹುಟ್ಟುತ್ತದೆ . ಇದಕ್ಕೆ ಉತ್ತರ ಬಹಳ ಸರಳ . ಗಮನಿಸಿ ನೋಡಿ 2007 ಕ್ಕೂ ಮುಂಚೆ ಬ್ಯಾಂಕಿನ ಬಗ್ಗೆ ಮೇಲಿನ ಸಾಲಿನಲ್ಲಿ ಹೇಳಿದ ಹಾಗೆ ಹೇಳಿದ್ದರೆ ಜನ ಹಾಗೆ ಹೇಳಿದವನ ಮಾತನ್ನ ಸಂಶಯದಿಂದ ನೋಡುತ್ತಿದ್ದರು . ಏಕೆಂದರೆ ಅಂದಿನ ಕಾಲಘಟ್ಟದಲ್ಲಿ ಅದೇ ವ್ಯವಸ್ಥೆಯಾಗಿತ್ತು . ಅರ್ಥ ಇಷ್ಟೇ ಟೆಕ್ನಾಲಜಿ ಕಂಪನಿಗಳು ಸದ್ಯದ ನಮ್ಮ ಜಗತ್ತಿನ ಹೊಸ ವ್ಯವಸ್ಥೆ . ಅವು ತಮ್ಮ ಆಟದ ಅತ್ಯುನ್ನತ ಸ್ಥಿತಿಯನ್ನ ತಲುಪುವ ಹಂತದಲ್ಲಿದೆ . ಪರಿಸ್ಥಿತಿ ಹೀಗಿರುವಾಗ ಅವುಗಳ ಕುಸಿತದ ಬಗ್ಗೆ ಈಗಲೇ ಮಾತಾಡುವುದಕ್ಕೆ ಇದು ಸರಿಯಾದ ಸಮಯವಲ್ಲ .
ಅಲ್ಲದೆ ಟೆಕ್ನಾಲಜಿ ಕಂಪನಿಗಳು ತಮ್ಮ ಲಾಭದ ಬಹು ದೊಡ್ಡ ಮೊತ್ತವನ್ನ ರಿಸೆರ್ಚ್ ಅಂಡ್ ಡೆವಲಪ್ಮೆಂಟ್ ಗಾಗಿ ವಿನಿಯೋಗಿಸುತ್ತವೆ . ಮುಂದಿನ ಹತ್ತು ವರ್ಷದಲ್ಲಿ ಜಗತ್ತಿನಲ್ಲಿ ಆಗಬಹದುದಾದ ಬದಲಾವಣೆಗಳ ಊಹೆ ಮಾಡಿಕೊಂಡು ಅದಕ್ಕೆ ಬೇಕಾದ ಸಿದ್ಧತೆಗಳನ್ನ ನೆಡೆಸುತ್ತದೆ . ನಮ್ಮ ಬ್ಯಾಂಕಿಂಗ್ ವ್ಯವಸ್ಥೆ ಮುದೊಂದು ದಿನ ಹೀಗಾಗಬಹದು ಎನ್ನುವ ಪರಿಕಲ್ಪನೆ ಕೂಡ ಇಟ್ಟುಕೊಂಡಿರಲಿಲ್ಲ . ಹೀಗಾಗಿ ಅವು ಸೋತು ಟೆಕ್ನಾಲಜಿ ಕಂಪನಿಗಳಿಗೆ ಅಧಿಕಾರದ ಚುಕ್ಕಾಣಿ ಬಿಟ್ಟು ಕೊಡಲಿವೆ . ಕೊನೆ ಮಾತು : ಮೈಕ್ರೋಸಾಫ್ಟ್ ಸಂಸ್ಥೆಯ ಸ್ಥಾಪಕ ಬಿಲ್ ಗೇಟ್ಸ್ ಹೇಳುತ್ತಾರೆ ‘ ನಾವು ಮುಂದಿನ ಎರಡು ವರ್ಷದಲ್ಲಿ ಸಾಧಿಸಬಹುದಾದ ವಿಷಯಗಳನ್ನ ಅತಿಯಾಗಿ ವರ್ಣಿಸಿ ಹೇಳುತ್ತೇವೆ . ಆದರೆ ಮುಂದಿನ ಹತ್ತು ವರ್ಷಗಳಲ್ಲಿ ಸಾಧಿಸಬಹದುದಾದ ವಿಷಯಗಳ ಬಗ್ಗೆ ನಮಗೆ ನಿಖರತೆಯಿಲ್ಲ ಹೀಗಾಗಿ ಅವುಗಳನ್ನ ನಾವು ಕಡೆಗಾಣಿಸುತ್ತೇವೆ ‘ . ಟೆಕ್ನಾಲಜಿ ಕಂಪನಿಗಳು ನಮ್ಮನ್ನಾಳುವ ಸಂಸ್ಥೆಗಳು ಇದರಲ್ಲಿ ಸಂಶಯ ಬೇಡ . .
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಇನ್ನೇನು ಬೇಸಿಗೆ ಶುರುವಾಯಿತು. ಇಂತಹ ಸಮಯದಲ್ಲಿ ನಮ್ಮ ದೇಹವನ್ನು ತಂಪಾಗಿ, ಫ್ರೆಶ್ ಆಗಿ ಇಟ್ಕೋಬೇಕು. ಇದಕ್ಕಾಗಿ ಕಲ್ಲಂಗಡಿ ಹಣ್ಣಿಗಿಂತ ಉತ್ತಮವಾದದ್ದು ಇನ್ಯಾವುದಿದೆ ಹೇಳಿ? ಕಲ್ಲಂಗಡಿ ಹಣ್ಣು ಟೇಸ್ಟಿ ಜೊತೆಗೆ ಆರೋಗ್ಯಕ್ಕೂ ಉತ್ತಮ. ಅದರಲ್ಲೂ ತೂಕ ಕಳೆದುಕೊಳ್ಳಲು ಕಸರತ್ತು ಮಾಡುತ್ತಿರುವವರಿಗೆ ಕಲ್ಲಂಗಡಿ ಬೆಸ್ಟ್. ಹೃದಯ, ಕಿಡ್ನಿ, ಹೀಟ್ ಸ್ಟ್ರೋಕ್, ಅಧಿಕ ರಕ್ತದೊತ್ತಡ ಎಲ್ಲದಕ್ಕೂ ಕಲ್ಲಂಗಡಿ ಸೇವನೆಯಿಂದ ಪ್ರಯೋಜನ ಮತ್ತು ಪರಿಹಾರವಿದೆ. ಕ್ಯಾಲೋರಿ ಬಗ್ಗೆ ಭಯ ಬೇಡ. ಕಲ್ಲಂಗಡಿಯಲ್ಲಿ ಶೇ.94ರಷ್ಟು ನೀರಿನ ಅಂಶವಿದೆ. ಲೈಕೋಪೀನ್, ಪೊಟ್ಯಾಶಿಯಂ ಸೇರಿದಂತೆ ಹಲವು ಬಗೆಯ…
ಎಂಟೆಕ್ ಪದವೀಧರ ಯುವಕನೊಬ್ಬ ಪ್ರಧಾನಿ ಕಚೇರಿಗೆ ಬರೆದ ಒಂದೇ ಒಂದು ಪತ್ರದಿಂದ ಕತ್ತಲ ಕೂಪದಲ್ಲಿ ನಲುಗುತ್ತಿದ್ದ ಹತ್ತಾರು ಹಳ್ಳಿಗಳಿಗೆ ಬೆಳಕು ಲಭಿಸುತ್ತಿದೆ. ಯುವಕನ ಜಾಣ್ಮೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದರೆ, ಪ್ರಧಾನಿ ಮೋದಿ ಆಡಳಿತಕ್ಕೆ ಪ್ರಶಂಸೆಗಳ ಸುರಿಮಳೆಯೇ ಲಭಿಸಿದೆ.ಲಿಂಗಸುಗೂರು ತಾಲೂಕು ಗಲಗನ ದೊಡ್ಡಿ, ಗುಳೆದರ ದೊಡ್ಡಿ, ಕಾಶಪ್ಪನ ದೊಡ್ಡಿಗಳು ಈವರೆಗೂ ಬೆಳಕು ಕಂಡಿಲ್ಲ. ಅಂಥ ಚಿಕ್ಕ ದೊಡ್ಡಿಯ ಯುವಕ ಅಮರೇಶ ಗುಡುಗುಂಟಾ ಎಂಟೆಕ್ ಪದವಿ ಪಡೆದು ಮುಂಬೈನಲ್ಲಿ ಕೆಲಸ ಮಾಡುತ್ತಿದ್ದರು. ತಮ್ಮ ದೊಡ್ಡಿಗಳ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕೆಂಬ ಕಾರಣಕ್ಕೆ 2018ರ…
ಸ್ಯಾಂಡಲ್ವುಡ್ ಸಿಂಡ್ರೆಲ್ಲಾ ರಾಧಿಕಾ ಪಂಡಿತ್ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ನಡುವೆ ಅವರು ಸೀಮಂತ ಮಾಡಿಸಿಕೊಂಡಿದ್ದು, ಕಾರ್ಯಕ್ರಮದಲ್ಲಿ ಸಿಂಡ್ರೆಲ್ಲಾರಂತೆ ಮಿಂಚಿದ್ದಾರೆ.ರಾಕಿಂಗ್ ಸ್ಟಾರ್ ಪತ್ನಿ ಸೀಮಂತ ಸಂಭ್ರಮದ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಸ್ಯಾಂಡಲ್ ವುಡ್ ಸಿಂಡ್ರೆಲ್ಲಾ ಅಂತಾನೆ ಖ್ಯಾತಿಗಳಿಸಿರುವ ರಾಧಿಕಾ ಸೀಮಂತ ಸಂಭ್ರಮದಲ್ಲಿ ಸಿಂಡ್ರೆಲ್ಲಾ ಕಾಸ್ಟ್ಯೂಮ್ ನಲ್ಲಿ ಮಿಂಚಿದ್ದಾರೆ. ಇತ್ತೀಚಿಗೆ ರಾಧಿಕಾ ಪಂಡಿತ್ ಸ್ನೇಹಿತರು ರಾಧಿಕಾಗೆ ಸೀಮಂತ ಶಾಸ್ತ್ರವನ್ನು ಮಾಡಿದ್ದಾರೆ. ಈ ಬಗ್ಗೆ ರಾಧಿಕಾ ಸಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. “ನನ್ನ ಸ್ನೇಹಿತರು ನನಗೆ ಅದ್ಭುತವಾದ ಬೇಬಿ ಶವರ್…
ರೈಲಿನಂತೆ ಸಾಲುಗಟ್ಟಿ ಹೋಗುವ ಇರುವೆಗಳನ್ನು ನೋಡುವುದೇ ಮಕ್ಕಳಿಗೆ ಸಂಭ್ರಮ. ಭೂಮಿಯಲ್ಲಿ ಬರಿಗಣ್ಣಿಗೆ ಕಾಣುವ ಅತ್ಯಂತ ಚಿಕ್ಕ ಜೀವಿಯೆಂದರೆ ಇರುವೆ. ಹಾಗೆಂದ ಮಾತ್ರಕ್ಕೆ ಇದನ್ನು ಅಲ್ಪಜೀವಿಯೆಂದು ಭಾವಿಸುವಂತಿಲ್ಲ. ಭೂ- ನೆಲದಲ್ಲಿ ಸರ್ವಾಂತರ್ಯಾಮಿ ಆಗಿರುವ ಇರುವೆಗಳ ಪ್ರಪಂಚಕ್ಕೆ ಇಣುಕಿದರೆ ಅಚ್ಚರಿಗಳು ಎದುರಾಗುತ್ತವೆ. ಇವುಗಳ ಶಿಸ್ತುಬದ್ಧ ಸಹಜೀವನ ಮನುಕುಲವನ್ನೇ ನಾಚಿಸುವಂತಿದೆ. ಗೊದ್ದ, ಚೊಂಜಿಗ, ಕಟ್ರ ಎಂದೆಲ್ಲ ಕರೆಯಲ್ಪಟ್ಟಿರುವ ಇರುವೆಗಳು ವಿವಿಧ ಗಾತ್ರ, ಬಣ್ಣಗಳಲ್ಲಿವೆ.
ಪಂಡಿತ್ ಸೋಮನಾಥ್ ಸ್ವಾಮಿ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕಚಿಂತಕರು 9663218892.ನಿಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರ ತಿಳಿಯಲು ಹಾಗೂನಿಮ್ಮ ಮನಸ್ಸಿನಲ್ಲಿ ಆಡಚಣೆ ಉಂಟಾಗುವ ಯಾವುದೇಪ್ರಶ್ನೆ ಅಥವಾ ಸಮಸ್ಯೆ ಇದೆಯೇ ಮತ್ತುನೀವುಉತ್ತರ ತಿಳಿಯಲು ಬಯಸುವಿರಾ? ಜ್ಯೋತಿಷ್ಯವುನಿಮ್ಮ ಅನುಮಾನ ಹಾಗೂ ಆತಂಕಗಳನ್ನುಅಳಿಸಬಹುದು ಮತ್ತು ಪ್ರಶ್ನೆಗಳಿಗೆಉತ್ತರಿಸಬಹುದುಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇ ಕಠಿಣವಾಗಿರಲಿ 11 ದಿನದಲ್ಲಿ ಶಾಶ್ವತ ಪರಿಹಾರ9663218892 ಮೇಷ(17 ನವೆಂಬರ್, 2018) ಹೆಚ್ಚು ಖರೀದಿಸಲು ಧಾವಿಸುವ ಮೊದಲು ನೀವು ಈಗಾಗಲೇ ಹೊಂದಿರುವುದನ್ನು ಬಳಸಿ. ಸ್ನೇಹಿತರು ನೀವು ನಿರೀಕ್ಷಿಸಿದ್ದಕ್ಕಿಂತ ಹೆಚ್ಚು ಬೆಂಬಲ ನೀಡಬಹುದು. ಈದಿನ…
2019 ರ ಲೋಕಸಭಾ ಚುನಾವಣೆಗೆ ಚುನಾವಣಾ ಆಯೋಗ ಮಾ.10 ರಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ದಿನಾಂಕ ಘೋಷಿಸಿದ್ದು 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಇಂದಿನಿಂದಲೇ ಚುನಾವಣಾ ನೀತಿ ಸಂಹಿತೆ ಜಾರಿಯಾಗಿದೆ. ದೆಹಲಿ ವಿಜ್ಞನ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿರುವ ಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, 2019 ಲೋಕಸಭಾ ಚುನಾವಣೆಗೆ ದಿನಾಂಕ ಘೋಷಿಸಿದ್ದಾರೆ. ದೇಶಾದ್ಯಂತ ಒಟ್ಟಾರೆ 7 ಹಂತಗಳಲ್ಲಿ ಚುನಾವಣೆ ನಡೆಯಲಿದ್ದು ಮೇ.23 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ ಎಂದು ತಿಳಿಸಿದ್ದಾರೆ. ಏ. ರಂದು 11 ಮೊದಲ ಹಂತದ ಮತದಾನ…