ನಮ್ಮ ದೇಹದ ವಿಸರ್ಜನಾಂಗಗಳಲ್ಲಿ ಕಿಡ್ನಿಯ ಪಾತ್ರ ಅತೀ ಮಹತ್ವವನ್ನು ಪಡೆದಿದೆ. ದೇಹದಲ್ಲಿರುವ ಕಶ್ಮಲ ಮತ್ತು ವಿಷಕಾರಿ ಅಂಶಗಳನ್ನು ದೇಹದಿಂದ ಹೊರದೂಡಿ ದೇಹವನ್ನು ಸದಾ ಕಾಪಾಡುವ ಅಂಗ ಇದಾಗಿದೆ. ದೇಹದ ನೀರಿನಾಂಶದ ಮಟ್ಟವನ್ನು ಸದಾ ನಿಯಂತ್ರಣದಲ್ಲಿ ಇಟ್ಟು ಆರೋಗ್ಯವಾಗಿರುವಂತೆ ನೋಡಿಕೊಳ್ಳುತ್ತದೆ. ದೇಹದ ಈ ಅಂಗವನ್ನು ಉತ್ತಮವಾಗಿಸಿ ಆರೋಗ್ಯವನ್ನು ಸದಾ ಕಾಪಾಡಿಕೊಳ್ಳಲು ನಾವು ತೆಗೆದುಕೊಳ್ಳುವ ಆಹಾರಗಳಿಂದ ಸಾಧ್ಯ. ಕಿಡ್ನಿಯ ರೋಗಗಳನ್ನು ತಡೆಗಟ್ಟಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ತೆಗೆದುಕೊಳ್ಳಬಹುದಾದ ಆಹಾರ ಕ್ರಮಗಳ ಬಗ್ಗೆ ಇಲ್ಲಿ ಚರ್ಚಿಸಲಾಗಿದೆ.
ಲಿಂಬೆಕಾಯಿ
ಲಿಂಬೆಕಾಯಿಯಲ್ಲಿ ಸಿಟ್ರಿಕ್ ಆಸಿಡ್ ಮತ್ತು ಆಮ್ಲಿಯತೆ ತುಂಬಿಕೊಂಡಿದೆ. ಸಿಟ್ರಿಕ್ ಆಸಿಡ್ ಮೂತ್ರಕೋಶದ ಕಲ್ಲುಗಳು ಒಂದೊಕ್ಕೊಂದು ಜೋಡಿಕೊಂಡು ದೊಡ್ಡ ಪ್ರಮಾಣದ ಕಲ್ಲುಗಳಾಗುವುದನ್ನು ತಡೆಗಟ್ಟುತ್ತದೆ. ಲಿಂಬೆರಸದ ಆಮ್ಲಿಯತೆಯಿಂದಾಗಿ ಕಲ್ಲುಗಳು ವಿಘಟನೆಗೆ ಒಳಗಾಗುತ್ತವೆ.
ಮೀನು
ಮೀನಿನಲ್ಲಿ ಒಳ್ಳೆಯ ಗುಣಮಟ್ಟದ ಪ್ರೊಟೀನ್ ಮತ್ತು ಒಮೇಗಾ-3 ಅಂಶಗಳು ಅಧಿಕ ಪ್ರಮಾಣದಲ್ಲಿ ಇವೆ. ಮೀನು ಮತ್ತು ಹುರಿದ ಮೀನಿನ ಆಹಾರಗಳನ್ನು ವಾರದಲ್ಲಿ ಎರಡು ಬಾರಿಯಾದರೂ ಸೇವಿಸುವುದರಿಂದ ದೇಹಕ್ಕೆ ಅವಶ್ಯವಿರುವ ಒಮೇಗಾ-3 ಲಭಿಸಿ ಕಿಡ್ನಿಯ ತೊಂದರೆಗಳು ದೂರವಾಗುತ್ತವೆ.
ಬೆಳ್ಳುಳ್ಳಿ
ಬೆಳ್ಳುಳ್ಳಿಯಲ್ಲಿ ಎಂಟಿ ಆಕ್ಸಿಡೆಂಟಗಳು ಅಧಿಕ ಪ್ರಮಾಣದಲ್ಲಿವೆ. ಇವು ದೇಹದಲ್ಲಿ ರೋಗಕಾರಕಗಳನ್ನು ಯಶಸ್ವಿಯಾಗಿ ನಿಯಂತ್ರಿಸುತ್ತವೆ. ಖನಿಜಗಳ ಹಾನಿಕಾರಕ ಪರಿಣಾಮಗಳು ಉಂಟಾಗದಂತೆ ತಡೆದು ಇವುಗಳನ್ನು ರಕ್ಷಿಸುತ್ತದೆ. ಬೆಳ್ಳುಳ್ಳಿಯನ್ನು ಹಸಿಯಾಗಿ, ಆಹಾರ ಪದಾರ್ಥಗಳಲ್ಲಿ ಸೇರಿಸಿ ಸೇವನೆ ಮಾಡುವುದರಿಂದ ಮೂತ್ರಜನಕಾಂಗಗಳ ರೋಗಗಳಿಂದ ದೂರವಾಗಬಹುದು.
ಸೇಬುಹಣ್ಣು
ಸೇಬುವಿನ ಸೇವನೆಯಿಂದ ಹೃದಯ , ಕಿಡ್ನಿ ಹಾಗೂ ಕಣ್ಣುಗಳ ಆರೋಗ್ಯದ ಮೇಲೆ ಅಧಿಕ ಪ್ರಮಾಣದ ಪರಿಣಾಮ ಉಂಟಾಗುತ್ತದೆ. ಇದರಲ್ಲಿ ಎಂಟಿ ಆಕ್ಸಿಡೆಂಟಗಳು ಮತ್ತು ವಿಟಮಿನ್ಗಳು ಅಧಿಕ ಪ್ರಮಾಣದಲ್ಲಿವೆ. ಇದು ಮೂತ್ರವನ್ನು ಶುದ್ಧವಾಗಿಸಿ, ಸೋಂಕನ್ನು ತಡೆಯುತ್ತದೆ. ಅಧಿಕ ಪ್ರಮಾಣದಲ್ಲಿ ಫೈಬರ್ ಅಂಶವು ಇರುವುದರಿಂದ ಮಲಬದ್ಧತೆಯನ್ನು ನಿವಾರಿಸುತ್ತದೆ. ದೇಹದಲ್ಲಿರುವ ಬೊಜ್ಜಿನ ಅಂಶವನ್ನು ಕರಗಿಸುವಲ್ಲಿ ಇದು ಮಹತ್ತರ ಪಾತ್ರ ವಹಿಸುತ್ತದೆ ಮತ್ತು ಕ್ಯಾನ್ಸರ್ ಬರದಂತೆ ಒಂದು ಮಟ್ಟದವರೆಗೆ ತಡೆಗಟ್ಟುತ್ತದೆ.
ಹಣ್ಣುಗಳನ್ನು ನಾವು ತಿಂದಷ್ಟು ನಮಗೆ ಆರೋಗ್ಯ ನಿರಂತರವಾಗಿರುತ್ತದೆ. ಅದರಲ್ಲಿಯೂ ಕೆಲವೊಂದು ನಿರ್ದಿಷ್ಟ ಹಣ್ಣುಗಳು ಆರೋಗ್ಯಕ್ಕೆ ಹಿತಕಾರಿಯಾಗಿದೆ. ಸಿಹಿಯಾದ ರುಚಿಯಿಂದ ಕೂಡಿದ ಹಲಸು ಆರೋಗ್ಯಕ್ಕೆ ನೀಡುವ ಕೊಡುಗೆ ಅಪಾರವಾದುದು.ಹಲಸಿನ ಹಣ್ಣು ತಿನ್ನುವುದರಿಂದ ಆಗುವ ಆರೋಗ್ಯಕರ ಲಾಭಗಳು ರಕ್ತದ ಒತ್ತಡವನ್ನು ಸಮತೋಲನವಾಗಿಸುತ್ತದೆಹಲಸಿನ ಹಣ್ಣಿನ ತೊಳೆಗಳಲ್ಲಿ ಪೊಟ್ಯಾಶಿಯಂ ಅಂಶ ಹೆಚ್ಚಾಗಿದ್ದು, ಅಧಿಕ ರಕ್ತದ ಒತ್ತಡ ಸಮಸ್ಯೆಯಿಂದ ಬಳಲುತ್ತಿರುವ ಮಂದಿಗೆ ಇದು ಬಹಳ ಸಹಕಾರಿ ಎಂದು ಹೇಳುತ್ತಾರೆ. ಏಕೆಂದರೆ ಪೊಟ್ಯಾಶಿಯಂ ಅಂಶ ಹೊಂದಿರುವ ಯಾವುದೇ ಆಹಾರ ಸೇವನೆ ಮಾಡುವುದರಿಂದ ದೇಹದಲ್ಲಿ ಸೋಡಿಯಂ ಅಂಶ…
ಕರ್ನಾಟಕದಲ್ಲಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಲ್ಪಸಂಖ್ಯಾತ ಹೆಣ್ಮಕ್ಕಳಿಗೆ ಶಾದಿಭಾಗ್ಯ ಯೋಜನೆಯನ್ನು ಜಾರಿಗೆ ತಂದ ಮಾದರಿಯಲ್ಲೇ ಕೇಂದ್ರ ಸರ್ಕಾರವೂ ಇದೀಗ ಮುಸ್ಲಿಂ ಮಹಿಳೆಯರಿಗೆ “ಶಾದಿ ಶಗುನ್’ ಹೆಸರಿನ ಯೋಜನೆ ಘೋಷಿಸಿದೆ.
*ನಮ್ಮ ಪೇಜ್ ಲೈಕ್ ಮಾಡಿ ಶೇರ್ ಮಾಡಿ* ಆಂಡ್ರಾಯ್ಡ್ ಟ್ಯಾಬ್ಲೆಟ್ ಅಥವಾ ಸ್ಮಾರ್ಟ್ಫೋನ್ ಯಾವುದೇ ಆಗಿರಲಿ ಅದರಲ್ಲಿ ಗೂಗಲ್ ಪ್ಲೇಸ್ಟೋರ್ ಇದ್ದೇ ಇರುತ್ತದೆ. ಅಲ್ಲಿಂದಲೇ ಬಳಕೆದಾರರೆಲ್ಲ ಆಪ್ಸ್, ಗೇಮ್ಸ್ ಡೌನ್ಲೋಡ್ ಮಾಡಿಕೊಳ್ಳುತ್ತಾರೆ. ಇದು ಗೂಗಲ್ ಅಧಿಕೃತ ಸ್ಟೋರ್ ಆದ ಕಾರಣ ಅದರಲ್ಲಿರುವ ಆಪ್ಸ್ ಎಲ್ಲವೂ ಸುರಕ್ಷಿತವಾದವು ಎಂದೇ ಭಾವಿಸುತ್ತಾರೆ. ಆದರೆ ಅದು ತಪ್ಪು. ಯಾಕೆಂದರೆ ಪ್ಲೇಸ್ಟೋರ್ನಲ್ಲೂ ಹಲವು ಮಾಲ್ವೇರ್, ವೈರಸ್ ಇರುವ ಆಪ್ಸ್ ಇವೆಯಂತೆ. ಒಂದು ಪ್ರಮುಖ ಐಟಿ ಸೆಕ್ಯುರಿಟಿ ಕಂಪೆನಿ ಈ ವಿಷಯವನ್ನು ಬಯಲುಮಾಡಿದೆ. ಗೂಗಲ್…
ಪ್ರಧಾನಿ ನರೆಂದ್ರ ಮೋದಿಯವರ 1೦೦ ಅಡಿ ಎತ್ತರದ ಪ್ರತಿಮೆ ಮತ್ತು 3೦ ಕೋಟಿ ರೂಪಾಯಿ ವೆಚ್ಚದ ಮಂದಿರ ನಿರ್ಮಿಸಲು ಉತ್ತರ ಪ್ರದೇಶದ ಮೀರತ್ನಲ್ಲಿ ನಿವೃತ್ತ ಅಧಿಕಾರಿಯೋರ್ವರು ಮುಂದಾಗಿದ್ದಾರೆ.
ಸ್ವಂತ ಮನೆ ಹೊಂದಬೇಕೆನ್ನುವುದು ಪ್ರತಿಯೊಬ್ಬರ ಜೀವನದ ಕನಸಾಗಿರುತ್ತದೆ.ಆದರೆ ಆರ್ಥಿಕವಾಗಿ ಸಬಲರಲ್ಲದ ಅನೇಕ ಜನರ ಸ್ವಂತ ಮನೆ ಕನಸು, ಕನಸಾಗೆ ಉಳಿದುಬಿಡುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಇಲ್ಲಿಯವರೆಗೂ ಸಾವಿರಾರು ಕುಟುಂಬಗಳು ಸ್ವಂತ ಮನೆಯಿಲ್ಲದೆ ಬೀದಿಯಲ್ಲಿವೆ. ಹೀಗಾಗಿ ಪ್ರತಿಯೊಬ್ಬರೂ ಮನೆಗಳನ್ನು ಹೊಂದಿರಬೇಕು ಎನ್ನುವುದು ಸರ್ಕಾರದ ಆಶಯವಾಗಿದ್ದು, 2022ರ ವೇಳೆಗೆ ಪ್ರತಿಯೊಬ್ಬರಿಗೂ ಮನೆ ಸಿಗುವಂತಾಗಬೇಕು ಎನ್ನುವುದು ಕೇಂದ್ರ ಸರ್ಕಾರದ ಉದ್ದೇಶವಾಗಿದೆ.
ಕೆಆರ್ಎಸ್ ಅಣೆಕಟ್ಟೆಯಿಂದ ರೈತರ ಬೆಳೆಗಳೆಗೆ ನೀರು ಬಿಡಲಾಗಿದ್ದು, ಅಂತೂ ಕಾಲುವೆಗಳಿಗೆ ನೀರು ಬಂತು ತಮ್ಮ ಬೆಳೆ ಉಳಿಸಿಕೊಳ್ಳಬಹುದು ಎಂದು ರೈತರು ಖುಷಿಯಾಗಿದ್ದಾರೆ. ಜಿಲ್ಲೆಯಲ್ಲಿ ನೀರಿಲ್ಲದೆ ಒಣಗುತ್ತಿರುವ ಬೆಳೆ ರಕ್ಷಣೆಗಾಗಿ ಕೆಆರ್ಎಸ್ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಹರಿಸುವಂತೆ ಕಳೆದೊಂದು ತಿಂಗಳಿನಿಂದ ರೈತರು ನಿರಂತರವಾಗಿ ಪ್ರತಿಭಟನೆ ನಡೆಸುತ್ತಿದ್ದರು.ಕಾಲುವೆಗಳಿಗೆ ಕೊನೆಗೂ ಕಾವೇರಿ ನೀರು ಹರಿದಿದೆ. ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಅಣೆಕಟ್ಟೆಯಿಂದ ಮಂಗಳವಾರ ರಾತ್ರಿಯಿಂದ ಸಕ್ಕರೆ ನಾಡಿನ ಕಾಲುವೆಗಳಿಗೆ ನೀರು ಹರಿಸಲಾಗ್ತಿದೆ ಈ ಹಿನ್ನೆಲೆಯಲ್ಲಿ ಜುಲೈ 15 ರಂದು ಬೆಂಗಳೂರಿನಲ್ಲಿ ಸಚಿವ…