News

ದಿನ ಭವಿಷ್ಯ ಬುಧವಾರ..ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ…
ಈ ಒಂದು ಮಂತ್ರ ಜಪಿಸಿ, ಹಾರ್ಟ್ ಅಟ್ಯಾಕ್’ನಿಂದ ಪಾರಾಗಿ.!ಇದು ವೈಜ್ಞಾನಿಕವಾಗಿ ಪ್ರೂವ್ ಆದ ಸತ್ಯ!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…
ರೈಲಿನ ಪ್ರತಿ ಕಂಪಾರ್ಟ್‌ಮೆಂಟ್‌ ಮೇಲಿರುವ ಈ ಐದು ಡಿಜಿಟ್‌ ನಂಬರ್‌’ನ ಹಿಂದಿರುವ ರಹಸ್ಯ ಏನ್ ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪೋಷಕರೇ, ಇನ್ಮೇಲೆ ನೀವೂ ಹೆಚ್ಚು ಶುಲ್ಕವನ್ನು ಕಟ್ಟುವಂತಿಲ್ಲ.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ ಎಲ್ಲರಿಗೂ ಉಪಯೋಗವಾಗಲಿ…
ನಿಮ್ಮ ಸೌಂದರ್ಯ ಮತ್ತು ಆರೋಗ್ಯಕ್ಕಾಗಿ ಲೋಳೆಸರ(ಅಲೋವೇರ)ದ ಈ 15 ಅದ್ಭುತ ಪ್ರಯೋಜನಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಪ್ರತಿಯೊಬ್ಬರ ಬ್ಯಾಂಕ್ ಖಾತೆಗೆ 15 ಲಕ್ಷ ರೂ.!ಪ್ರಧಾನಿ ಕಾರ್ಯಾಲಯದಿಂದ ಬಂದ ಮಾಹಿತಿ ಏನು ಗೊತ್ತಾ.?ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಮಂಗಳವಾರದ ನಿಮ್ಮ ರಾಶಿ ಭವಿಷ್ಯ ಮಂಗಳವಾಗಿದೆಯೇ ನೋಡಿ ತಿಳಿಯಿರಿ…ಶೇರ್ ಮಾಡಿ
ಶಾಸ್ತ್ರಗಳು ಹೇಳಿದ ಪ್ರಕಾರ, ರತ್ನಗಳನ್ನು ಧರಿಸುವ ಮುಂಚೆ ಈ ನಿಯಮಗಳನ್ನು ಪಾಲಿಸುವುದು ಅವಶ್ಯಕತಿಳಿಯಲು ಈ ಲೇಖನ ಓದಿ…ಶೇರ್ ಮಾಡಿ…
ಪೈಲ್ಸ್ ಅಥವಾ ಮೂಲವ್ಯಾಧಿ (ಮೊಳಕೆ ರೋಗ)ದ ನಿಯಂತ್ರಣಕ್ಕೆ ಇಲ್ಲಿದೆ ಸುಲಭ ಪರಿಹಾರಗಳು.!ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ನೀವು ಇಡೀ ದಿನ ಖುಷಿಯಾಗಿ ಇರಬೇಕೆಂದ್ರೆ ಈ 6 ಅಭ್ಯಾಸಗಳನ್ನು ಶುರುಹಚ್ಕೊಳ್ಳಿ..ತಿಳಿಯಲು ಈ ಲೇಖನ ಓದಿ ಶೇರ್ ಮಾಡಿ…
ಶಿಕ್ಷಣ

ಎಸೆಸೆಲ್ಸಿ ಮುಗಿಯಿತು. ಮುಂದೇನು ಎನ್ನುವ ಯೋಚನೆಯೇ ???

ಪರೀಕ್ಷೆ ಎಲ್ಲ ಮುಗಿಯಿತು. ಇನ್ನಿರುವುದು ಮುಂದಿನ ಆಯ್ಕೆ ಬಗ್ಗೆ.  ಹಲವಾರು ಕೋರ್ಸ್ಗಳಿವೆ. ಆದರೆ ಸರಿಯಾದ ಆಯ್ಕೆ ಹೇಗೆ ಮಾಡಲಿ ಎಂಬ ಗೊಂದಲ ಮನದಲ್ಲಿ ಎದ್ದಾಗಿದೆ. ಹೆತ್ತವರ ಸಲಹೆ ಒಂದಾದರೆ, ಮಕ್ಕಳದ್ದು ಇನ್ನೊಂದು. ಈ ನಡುವೆ ಹುಟ್ಟಿದ ಹಲವಾರು ಅನುಮಾನಗಳು. ಯಾವುದು, ಎಲ್ಲಿ, ಏನು, ಹೇಗೆ…? ಇದಕ್ಕಾಗಿಯೇ ಒಂದಷ್ಟು ಮಾಹಿತಿ ಇಲ್ಲಿವೆ.

ಶೈಕ್ಷಣಿಕ ಕ್ಷೇತ್ರ ಎನ್ನವುದು ದಿನೇ ದಿನೇ ಬೆಳೆಯುತ್ತಿದೆ. ವಿದ್ಯಾರ್ಥಿಗಳಿಗೆ ತಮ್ಮ ಕೋರ್ಸ್‌ಗಳಿಗೆ ವಿಪುಲ ಆಯ್ಕೆಗಳಿದ್ದು, ಔದ್ಯೋಗಿಕ ಅವಕಾಶಗಳಿಗೂ ಕೊರತೆ ಇಲ್ಲ. ಆದರೆ ಕೆಲವೊಂದು ಸಂದರ್ಭಗಳಲ್ಲಿ ವಿದ್ಯಾರ್ಥಿಗಳು ತಮ್ಮ ಆಯ್ಕೆಯಲ್ಲಿ ಎಡವುತ್ತಿದ್ದಾರೆ. ಕೋರ್ಸ್‌ ಮುಗಿದ ಬಳಿಕ ಉದ್ಯೋಗವಿಲ್ಲ ಎಂದು ಕೊರಗುತ್ತಾರೆ. ಹೀಗಾಗಿ ವಿದ್ಯಾರ್ಥಿಗಳು ಎಂದಿಗೂ ಕ್ರೇಝ್ನ ಹಿಂದೆ ಹೋಗದೆ ಅವಕಾಶಗಳ ಕುಳಿತು ತಿಳಿದುಕೊಳ್ಳುವುದು ಅಗತ್ಯ .

 

ಪಿಯುಸಿ :- 
ಹಿಂದೆ ಒಂದು ಕಾಲವಿತ್ತು. ಎಸೆಸೆಲ್ಸಿ ಬಳಿಕ ನೇರವಾಗಿ ಪಿಯುಸಿಗೆ ಹೋಗುತ್ತಿದ್ದರು. ಆಗ ಆಯ್ಕೆಗಳು ಕಡಿಮೆ ಇತ್ತು. ಯಾವುದಾದರೊಂದು ಕೋರ್ಸ್‌ ಮುಗಿಸಿ ಶಿಕ್ಷಣ ಮುಂದುವರಿಸುತ್ತಿದ್ದರು. ಆದರೆ ಇಂದು ಹಾಗಿಲ್ಲ. ಪಿಯುಸಿಯಲ್ಲಿ ಲಭ್ಯವಿರುವ ವಿಜ್ಞಾನ, ವಾಣಿಜ್ಯ, ಕಲಾ ವಿಭಾಗಗಳಲ್ಲೇ ಹಲವು ಆಯ್ಕೆಗಳಿವೆ. ಇವುಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ಅಗತ್ಯ.

ವಿದ್ಯಾರ್ಥಿಗಳಿಗೆ ಪಿಯುಸಿಯ ಆಯ್ಕೆ ಎನ್ನುವುದು ಕ್ರೇಝ್ ಆಗಿಬಿಟ್ಟಿದೆ. ಪಿಯುಸಿ ಸೈನ್ಸ್‌ ಎಂದು ಹೆಮ್ಮೆಯಿಂದ ತಿರುಗುತ್ತಿದ್ದಾರೆ. ಆದರೆ ಸೈನ್ಸ್‌ ತೆಗೆದುಕೊಂಡವರಿಗೆ ಎಲ್ಲರಿಗೂ ಉದ್ಯೋಗ ದೊರಕುತ್ತದೆ ಎಂದು ಹೇಳುವಂತಿಲ್ಲ. ಕೆಲವೊಂದು ಸಂದರ್ಭದಲ್ಲಿ ನಮ್ಮ ಆರ್ಥಿಕ ಸ್ಥಿತಿಯೂ ನಮ್ಮ ಓದನ್ನು ಮುಂದುವರಿಸಲು ಬಿಡುವುದಿಲ್ಲ. ಈ ಎಲ್ಲ ಬೆಳವಣಿಗೆಗಳ ಕುರಿತು ಆಲೋಚನೆ ಮಾಡಿಯೇ ನಮ್ಮ ಮುಂದಿನ ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಅಧ್ಯಾಪಕ ವೃತ್ತಿಗೆ ತೆರಳುವವರಿಗೆ ಪಿಯುಸಿ ಉತ್ತಮ ಆಯ್ಕೆಯಾಗುತ್ತದೆ. ಜತೆಗೆ ವೈದ್ಯಕೀಯ, ಎಂಜಿನಿಯರಿಂಗ್‌ ಕ್ಷೇತ್ರಕ್ಕೂ ಅದು ಬೇಕಾಗುತ್ತದೆ. ಪಿಯುಸಿಯಲ್ಲಿ  ವಾಣಿಜ್ಯವನ್ನು ಆಯ್ಕೆ ಮಾಡಿಕೊಂಡರೆ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶವಿದೆ. ಈ ರೀತಿಯ ಆಲೋಚನೆ ಅಗತ್ಯವಾಗಿದೆ.

ತಾಂತ್ರಿಕ ಶಿಕ್ಷಣಕ್ಕೆ ಮಹತ್ವ ನೀಡಿ :-
ಇಂದು ತಾಂತ್ರಿಕ ಶಿಕ್ಷಣ ಎನ್ನುವುದು ವಿಪುಲ ಉದ್ಯೋಗಾವಕಾಶವನ್ನು ಸೃಷ್ಟಿಸುತ್ತಿದೆ. ಹೀಗಾಗಿ ಐಟಿಐ ಹಾಗೂ ಡಿಪ್ಲೊಮಾ ಕೋರ್ಸ್‌ಗಳ ಕುರಿತು ಹೆಚ್ಚಿನ ಒಲವು ತೋರಬೇಕಿದೆ. ಈ ಕೋರ್ಸ್‌ಗಳಿಗೆ ಎಂಜಿನಿಯರಿಂಗ್‌ ಕೋರ್ಸ್‌ನಷ್ಟೇ ಮಹತ್ವವಿದೆ. ಜತೆಗೆ ಉದ್ಯೋಗವೂ ಅಷ್ಟೇ ಶೀಘ್ರದಲ್ಲಿ ಸಿಗುತ್ತದೆ. ಡಿಪ್ಲೊಮಾದಲ್ಲಿ ಸಿವಿಲ್‌, ಮೆಕ್ಯಾನಿಕಲ್‌, ಪ್ಲಂಬಿಂಗ್‌, ಇಲೆಕ್ಟ್ರಿಕಲ್‌ ಹೀಗೆ ಅನೇಕ ಆಯ್ಕೆಗಳಿವೆ. ಜತೆಗೆ ಅತಿ ಕಡಿಮೆ ವೆಚ್ಚದಲ್ಲಿ ಈ ಕೋರ್ಸ್‌ಗಳನ್ನು ಪೂರ್ತಿಗೊಳಿಸಬಹುದಾಗಿದೆ. ಸರಕಾರಿ ಕಾಲೇಜುಗಳಲ್ಲಿ ಈ ಕೋರ್ಸ್‌ಗಳು ಉಚಿತವಾಗಿಯೂ ಸಿಗುತ್ತವೆ. ಹೀಗಾಗಿ ಯಾವ್ಯಾವ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಸಮಯ ಹಾಳು ಮಾಡುವುದಕ್ಕಿಂತ ಇಂತಹ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳುವುದೇ ಉತ್ತಮ.

ಔದ್ಯೋಗಿಕ ಕೋರ್ಸ್‌ಗಳು :-

ಇದರ ಜತೆಗೆ ಹಲವಾರು ಔದ್ಯೋಗಿಕ ಕೋರ್ಸ್‌ಗಳಿವೆ. ಅವರ ಬೇಡಿಕೆಗಳಿಗ ನುಗುಣವಾಗಿ ಅವುಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ. ನರ್ಸಿಂಗ್‌ ಕೋರ್ಸ್‌ಗಳು, ಪ್ಲಂಬಿಂಗ್‌, ಟೈಲರಿಂಗ್‌, ಹೊಟೇಲ್‌ ಮ್ಯಾನೇಜ್‌ಮೆಂಟ್‌, ಟೆಲಿಕಮ್ಯೂನಿಕೇಶನ್‌, ಹೀಗೆ ವಿವಿಧ ಕೋರ್ಸ್‌ಗಳನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ.

ಕಂಪ್ಯೂಟರ್‌ ಶಿಕ್ಷಣ :-
ಇಂದು ಪ್ರತಿಯೊಂದು ಕ್ಷೇತ್ರಕ್ಕೂ ಕಂಪ್ಯೂಟರ್‌ ಶಿಕ್ಷಣ ಅಗತ್ಯವಾಗಿದೆ. ಕಂಪ್ಯೂಟರ್‌ನ ಕುರಿತು ಕನಿಷ್ಠ ಜ್ಞಾನವಾದರೂ ಅತಿ ಅಗತ್ಯವಾಗಿದೆ. ಹೀಗಾಗಿ ಕಂಪ್ಯೂಟರನ್ನು ಪೂರ್ಣಾವಧಿ ಕಲಿಯುವುದು ಅಸಾಧ್ಯವಾದರೂ ರಜೆಯ ವೇಳೆ ಬೇಸಿಕ್‌ ಕಂಪ್ಯೂಟರ್‌ ಶಿಕ್ಷಣ ಪಡೆಯಬಹುದಾಗಿದೆ. ನಮ್ಮ ಎಲ್ಲ ಕೋರ್ಸ್‌ಗಳಿಗೂ ಕಂಪ್ಯೂಟರ್‌ ನಿಕಟ ಸಂಪರ್ಕವನ್ನು ಹೊಂದಿದೆ. ಹೀಗಾಗಿ ಕಂಪ್ಯೂಟರ್‌ ಶಿಕ್ಷಣವನ್ನು ಆದ್ಯತೆಯ ಮೇಲೆ ಕಲಿತರೆ ಉತ್ತಮ. ಪೂರ್ಣಾವಧಿಯ ಕಂಪ್ಯೂಟರ್‌ ಶಿಕ್ಷಣಕ್ಕೂ ಉತ್ತಮ ಬೇಡಿಕೆ ಇದೆ. ಕಂಪ್ಯೂಟರ್‌ ಸೈನ್ಸ್‌, ಕಂಪ್ಯೂಟರ್‌ ಅಪ್ಲಿಕೇಶನ್‌ ಬಹುಬೇಡಿಕೆಯ ಕೋರ್ಸ್‌ಗಳಾಗಿವೆ.

ತಾಂತ್ರಿಕ ಶಿಕ್ಷಣಕ್ಕೆ ಮಹತ್ವ ನೀಡಿ
ವಿದ್ಯಾರ್ಥಿಗಳು ಯಾವುದೋ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಂಡು ಸಮಯ ಹಾಗೂ ದುಡ್ಡನ್ನು ಹಾಳು ಮಾಡುವುದಕ್ಕಿಂತಲೂ ಕೋರ್ಸ್‌ನ ಕುರಿತು ತಿಳಿದುಕೊಂಡು ಮುಂದುವರಿದರೆ ಉತ್ತಮ. ವಿದ್ಯಾರ್ಥಿಗಳು ತಾಂತ್ರಿಕ ಶಿಕ್ಷಣಕ್ಕೆ ಮಹತ್ವ ನೀಡಿದರೆ ಉದ್ಯೋಗಕ್ಕೆ ಉತ್ತಮ ಅವಕಾಶಗಳಿವೆ. ಒಮ್ಮೆ ಕೆಲಸ ಸಿಕ್ಕರೆ ಮುಂದೆ ಕೆಲಸ ಮಾಡಿಕೊಂಡು ಓದುವುದಕ್ಕೂ ಅವಕಾಶಗಳಿವೆ. ಹೀಗಾಗಿ ನಿಮ್ಮ ಭವಿಷ್ಯ ರೂಪಿಸಲು ಈಗಿನಿಂದಲೇ ತಯಾರಿ ನಡೆಸಬೇಕಿರುವುದು ಅತಿ ಅಗತ್ಯ.

ಇತ್ತೀಚಿನ ಸುದ್ದಿಗಳು

Follow Us on Facebook

Categories