ಕೆಂದೆಳನೀರು
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಭಾರತದಲ್ಲಿ ಓರ್ವ ಮಹಿಳೆ ತನ್ನ ಕಾಲಿನಿಂದ ಸೂಜಿಗಳು, ಸಿರಿಂಜಿನ ಮುಳ್ಳುಗಳು ಹಾಗೂ ಪಿನ್ನುಗಳು ನಿಯಮಿತವಾಗಿ ಹೊರಗೆ ಬರುತ್ತಿವೆ ಎಂದು ಹೇಳಿಕೊಂಡಿದ್ದಾಳೆ. ಈ ತೊಂದರೆ ತನಗೆ ಕೆಲವು ಕಾಲದಿಂದಲೂ ಇದ್ದು ತುಂಬಾ ತೊಂದರೆಯಾಗುತ್ತಿದೆ ಎಂದು ಹೇಳಿಕೊಂಡಿದ್ದಾಳೆ. ಆದರೆ ಕಾಲಿನಿಂದ ಸೂಜಿ ಹೊರಬರುವುದೆಂದರೆ? ಇದು ನೈಸರ್ಗಿಕವಂತೂ ಆಗಿರಲಿಕ್ಕಿಲ್ಲ.
ಆಕೆಯೇ ತಾನೇ ಚುಚ್ಚಿಕೊಂಡು ಬಳಿಕ ಇದು ದೇಹದೊಳಗಿನಿಂದ ಬರುತ್ತಿದೆ ಎನ್ನುತ್ತಿದ್ದಾಳೆಯೇ? ಈ ಪ್ರಶ್ನೆಗೆ ಆಕೆ ಸ್ಪಷ್ಟವಾಗಿ ನಿರಾಕರಿಸುತ್ತಾ ಇವೆಲ್ಲವೂ ತಾವೇ ತಾವಾಗಿ ಹೊರಬರುತ್ತಿವೆ ಎಂದು ಹೇಳುತ್ತಾಳೆ. ಇದಲ್ಲೇನೋ ಮೋಸ ಇದೆ. ಈ ಮಹಿಳೆಯೇ ಮೋಸ ಮಾಡುತ್ತಿರಬಹುದು ಅಥವಾ ಮೋಸದಿಂದ ಆಕೆಯ ದೇಹದಲ್ಲಿ ಬೇರೆ ಯಾರೋ ಸೂಜಿಗಳನ್ನು ಚುಚ್ಚಿರಬಹುದು ಎಂಬ ಅನುಮಾನ ಕಾಡುತ್ತದೆ.
ಅನುಸೂಯ್ಯಾ ದೇವಿ ಎಂಬ ಹೆಸರಿನ ಈ ಮಹಿಳೆ ಉತ್ತರಪ್ರದೇಶ ರಾಜ್ಯದ ಫತೆಹ್ ಪುರ್ ಜಿಲ್ಲೆಯ ಒಂದು ಪುಟ್ಟ ಗ್ರಾಮದ ನಿವಾಸಿಯಾಗಿದ್ದಾಳೆ. ಈಕೆ ತನ್ನ ಕಾಲಿನಿಂದ ಸೂಜಿಗಳು, ಸಿರಿಂಜುಗಳು ಹಾಗೂ ಪಿನ್ನುಗಳು ಹೊರಬರುವುದು 2012 ರಿಂದ ಪ್ರಾರಂಭವಾಯಿತು ಎಂದು ವಿವರಿಸಿದ್ದಾಳೆ.
ಸುಮಾರು ಐದು ವರ್ಷಗಳಿಂದಲೂ ಸತತವಾಗಿ ಸೂಜಿಗಳ ಯಾತನೆಯಿಂದ ಬಳಲಿದ ಈಕೆ ಮೊದಮೊದಲು ನೋವನ್ನು ಸಹಿಸಿಕೊಳ್ಳಲು ಶಕ್ತಳಿದ್ದರೂ ಈಗ ಹೆಚ್ಚೂ ಕಡಿಮೆ ಸೋತು ಹೋಗಿದ್ದಾಳೆ. ನೋವಿಲ್ಲದೇ ನಡೆಯಲು, ಕುಳಿತುಕೊಳ್ಳಲು ಅಥವಾ ನಿಲ್ಲಲೂ ಆಕೆಗೆ ಸಾಧ್ಯವಿಲ್ಲ. ಈ ನೋವನ್ನು ವಿವರಿಸಿ ಆಕೆ ಹಲವಾರು ವೈದ್ಯರ ನೆರವನ್ನೂ ಯಾಚಿಸಿದ್ದಳು.
ಈ ಸ್ಥಿತಿ ಹೇಗೆ ಎದುರಾಯಿತು ಎಂಬ ಪ್ರಶ್ನೆಗೆ ಆಕೆ ಹೀಗೆ ಹೇಳುತ್ತಾಳೆ: “ನನಗೆ ಈ ತೊಂದರೆ ಕಳೆದ ಐದು ವರ್ಷಗಳಿಂದಲೂ ಇದೆ. ಸೂಜಿಗಳು ನನ್ನ ಕಾಲಿನಿಂದ ಹೊರಬರುತ್ತವೆ. ಇದು ಹೇಗೆ, ಏಕೆ ಎಂದು ನನಗೆ ವಿವರಿಸಲು ಸಾಧ್ಯವಿಲ್ಲ. ಇವು ಹೇಗೆ ಒಳಗೆ ಬಂದವು ಎಂದು ನನಗೆ ಗೊತ್ತಿಲ್ಲ. ಆದರೆ ಈ ನೋವಿನಿಂದಂತೂ ಜರ್ಝರಿತಳಾಗಿದ್ದೇನೆ, ಇನ್ನು ಸಹಿಸಲು ಸಾಧ್ಯವಿಲ್ಲ”
ವೈದ್ಯರು ಇದೊಂದು ಮಾನಸಿಕ ರೋಗ ಎಂದು ಊಹಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ರೋಗಿ ತನಗೆ ಅರಿವೇ ಇಲ್ಲದಂತೆ ಕೆಲವು ಮೊನಚಾದ ವಸ್ತುಗಳನ್ನು ತನ್ನ ದೇಹದೊಳಗೆ ತೂರಿಸಿಕೊಳ್ಳುವುದು ಒಂದು ಮಾನಸಿಕ ವ್ಯಾಧಿಯ ಲಕ್ಷಣವಾಗಿದೆ. ಈ ಮಹಿಳೆಯೂ ಇಂತಹ ಯಾವುದೋ ಮಾನಸಿಕ ವ್ಯಾಧಿಗೆ ತುತ್ತಾಗಿದ್ದು ತನಗರಿವಿಲ್ಲದಂತೆಯೇ ಚೂಪಾದ ವಸ್ತುಗಳನ್ನು ತನ್ನ ಕಾಲುಗಳ ಒಳಗೆ ಚುಚ್ಚಿಕೊಳ್ಳುತ್ತಿದ್ದರಬಹುದು. ಆದರೆ ಈ ಆರೋಪವನ್ನು ಅನುಸೂಯ್ಯಾ ಸ್ಪಷ್ಟವಾಗಿ ತಳ್ಳಿ ಹಾಕಿ ತನಗಾವುದೇ ರೋಗವಿಲ್ಲ ಹಾಗೂ ತಾನು ತನ್ನ ಕಾಲುಗಳಿಗೆ ಚುಚ್ಚಿಕೊಂಡಿಲ್ಲ ಎಂದೇ ವಾದಿಸುತ್ತಾಳೆ.
ಬೆಂಗಳೂರಿನಲ್ಲಿ ಹಿಂದಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಈ ತಳಿಯ ಎಳನೀರು ಇತ್ತೀಚಿಗೆ ಕಾಣಿಸುತ್ತಿದೆ. ಇದು ತಮಿಳುನಾಡಿನಿಂದ ಬರುತ್ತದೆಯಂತೆ. ಇದು ಕಾಯಿಯಾದರೆ ಅಥವ ಕೊಬ್ಬರಿ ಆದರೆ ಚೆನ್ನಾಗಿರುವುದಿಲ್ಲವಂತೆ. ಹಾಗಾಗಿ ಎಳನೀರೇ ಮಾರಬೇಕು
ಮೊಟ್ಟೆ ಪೌಸ್ಟಿಕವಾದ ಆಹಾರ.ನಾವು ಸಾಮಾನ್ಯವಾಗಿ ಮೊಟ್ಟೆ ಬೇಯಿಸಿದಾಗ ಅಥವಾ ಆಮ್ಲೆಟ್ ಮಾಡಲು ಹೋದಾಗ ಮೊಟ್ಟೆ ಹೊಡೆದು ಮೊಟ್ಟೆ ಚಿಪ್ಪನ್ನು ಬಿಸಾಡುತ್ತೇವೆ.
ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದ್ದು, ಅಕ್ರಮ ತಡೆಗೆ ಚುನಾವಣಾ ಆಯೋಗ ಎಲ್ಲೆಡೆ ಹದ್ದಿನ ಕಣ್ಣಿಟ್ಟಿದೆ. ಎಲ್ಲಾ ಕಡೆಗಳಲ್ಲಿ ಚೆಕ್ ಪೋಸ್ಟ್ ನಿರ್ಮಿಸಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ. ಇತ್ತೀಚೆಗೆ ಗೌರಿಬಿದನೂರು ಬಳಿ ವಾಹನ ತಪಾಸಣೆ ನಡೆಸುವ ಸಂದರ್ಭದಲ್ಲಿ ಚೆಕ್ ಪೋಸ್ಟ್ ನಲ್ಲಿ ಇದ್ದ ಸಿಬ್ಬಂದಿಗೆ ಅಚ್ಚರಿಯಾಗಿದೆ. ಚುನಾವಣಾ ಸಿಬ್ಬಂದಿ ರಾಜ್ಯ ಹೆದ್ದಾರಿಯಲ್ಲಿ ಬಂದ ಕಾರು ತಡೆದು ಪರಿಶೀಲನೆ ನಡೆಸಲು ಮುಂದಾದಾಗ, ಕಾರಿನಲ್ಲಿ ಖ್ಯಾತ ನಟ ಶಿವರಾಜ್ ಕುಮಾರ್ ಅವರು ಇರುವುದು ಕಂಡುಬಂದಿದೆ. ಕಾರು ನಿಲ್ಲಿಸಿದ ಕೂಡಲೇ…
ನೋಡುಗರ ಮನವನ್ನು ಕೆರಳಿಸುವ ಬ್ರಹ್ಮ ಕಮಲ ಸೂರ್ಯನ ಬೆಳಕಿನಿಂದ ಮೊಗ್ಗಾಗಿ ರಾತ್ರಿ ಚಂದ್ರ ಬರುವವರೆಗೂ ಕಾದು 11 ಗಂಟೆಯ ನಂತರ ಅರಳಿ ಬೆಳಗಾಗುವ ಹೊತ್ತಿಗೆ ಕಮರುವುದೇ ಬ್ರಹ್ಮ ಕಮಲ. ಕಾಂಡವೇ ಎಲೆಯಾಗಿ, ಎಲೆಯೇ ಹೂವಾಗಿ ಅರಳುವ ಈ ಬ್ರಹ್ಮಕಮಲದ ಬಳ್ಳಿಯನ್ನು ಹೆಚ್ಚಾಗಿ ಮನೆಯ ಅಂಗಳದಲ್ಲಿ ಬೆಳೆಸುತ್ತಾರೆ.
ಗರ್ಭಿಣಿ ಮಹಿಳೆಯರಿಗೆ ಈ ಆಹಾರ ತಿನ್ನು, ಇದನ್ನು ತಿನ್ನಬೇಡ ಎಂದು ಮನೆಯವರು, ಸ್ನೇಹಿತರು ಸಲಹೆ ನೀಡುತ್ತಾರೆ. ವೈದ್ಯರು ಕೂಡ ಯಾವ ಆಹಾರಗಳನ್ನು ತೆಗೆದುಕೊಳ್ಳಬೇಕು, ಯಾವುದನ್ನು ತಿನ್ನದಿರುವುದು ಸೂಕ್ತ ಎಂಬ ಮಾಹಿತಿ ನೀಡುತ್ತಾರೆ. ಏಕೆಂದರೆ ಗರ್ಭಿಣಿ ಮಹಿಳೆಯರ ಆಹಾರಕ್ರಮ ಗರ್ಭದಲ್ಲಿ ಬೆಳೆಯುತ್ತಿರುವ ಮಕ್ಕಳ ಆರೋಗ್ಯದ ಮೇಲೆ ತುಂಬಾ ಪರಿಣಾಮ ಬೀರುತ್ತದೆ. ಗರ್ಭಿಣಿಯರು ಪೌಷ್ಟಿಕಾಂಶಗಳಿರುವ ಆಹಾರವನ್ನು ತೆಗೆದುಕೊಳ್ಳುವುದರಿಂದ ಮಗು ಆರೋಗ್ಯಕರವಾಗಿ ಬೆಳೆಯುತ್ತದೆ. ಆದ್ದರಿಂದ ಕಾಳುಗಳನ್ನು ತಿನ್ನುವಂತೆ ಹೇಳುತ್ತಾರೆ. ಕಾಳುಗಳಲ್ಲಿ ಒಂದು ಬಗೆಯಾದ ಚೆನ್ನಾ ಕೂಡ ಗರ್ಭಿಣಿಯರಿಗೆ ಸೇವಿಸಲು ಸೂಕ್ತವಾದ ಆಹಾರವಾಗಿದ್ದು…
ಚಂದನವನಕ್ಕೆ ರಾಧಿಕಾ ಮತ್ತೆ ಬ್ಯಾಕಪ್ ಆಗಿದ್ದಾರೆ.ಈಗ ದಮಯಂತಿ’ ಚಿತ್ರದಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದು, ಈ ಚಿತ್ರದಲ್ಲಿನ ವಿಭಿನ್ನ ಪಾತ್ರಕ್ಕಾಗಿ ರಾಧಿಕಾ ಕುಮಾರಸ್ವಾಮಿ ಬರೋಬ್ಬರಿ 10 ಕೆ.ಜಿ. ತೂಕ ಕಡಿಮೆ ಮಾಡಿಕೊಂಡಿದ್ದಾರಂತೆ. ಈಗಾಗಲೇ ಚಿತ್ರದ ಶೇಕಡ 80 ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಈ ಚಿತ್ರದ ಚಿತ್ರೀಕರಣ ಬಿರುಸಿನಿಂದ ಸಾಗುತ್ತಿದೆ.ತಾವು ನಟಿಸುತ್ತಿರುವ ದಮಯಂತಿ ಚಿತ್ರಕ್ಕಾಗಿ 80 ದಿನಗಳ ಕಾಲ ಕಾಲ್ ಶೀಟ್ ಕೊಟ್ಟಿದ್ದು, ಇದಕ್ಕಾಗಿ ಬರೋಬ್ಬರಿ ಒಂದು ಕೋಟಿ ರೂಪಾಯಿ ಸಂಭಾವನೆ ತೆಗೆದುಕೊಂಡಿದ್ದಾರಂತೆ. ಈಗಾಗಲೇ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ…
ಲೋಕಸಭಾ ಚುನಾವಣೆಯ ಹೈವೋಲ್ಟೇಜ್ ಕ್ಷೇತ್ರಗಳಲ್ಲಿ ಒಂದು ವಾರಣಾಸಿ. ಕಾರಣ ಪ್ರಧಾನಿ ನರೇಂದ್ರ ಮೋದಿ ಸ್ಪರ್ಧಿಸುವ ಕ್ಷೇತ್ರ. ವಾರಣಾಸಿಯಲ್ಲಿ ಮೋದಿ ವಿರುದ್ಧ ಕಾಂಗ್ರೆಸ್ ನಿಂದ ಪ್ರಿಯಾಂಕಾ ಗಾಂಧಿ ಚುನಾವಣಾ ಅಖಾಡಕ್ಕಿಳಿಯುತ್ತಾರೆ ಅಂತಾ ಹೇಳಲಾಗ್ತಿತ್ತು. ಆದ್ರೀಗ ಮೋದಿ ವಿರುದ್ಧ ಕಾಂಗ್ರೆಸ್ ನ ಅಜಯ್ ರಾಯ್ ಕಣಕ್ಕಿಳಿಯುವುದು ಕನ್ಫರ್ಮ್ ಆಗಿದೆ. ಹಾಗಾದ್ರೆ ಈ ಅಜಯ್ ರಾಯ್ ಯಾರು ಅಂದ್ರಾ? ಇವರು ಕಾಂಗ್ರೆಸ್ ಗೆ ಸೇರುವ ಮುನ್ನ ಬಿಜೆಪಿಯಿಂದ ಟಿಕೆಟ್ ಪಡೆದು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ಲೋಕಸಭಾ ಚುನಾವಣೆಗೆ…