Breaking News

ಕೋಟಿಯಿಂದ ನಾಯಿಗೆ ಸಿಕ್ಕ ಮಾತೃ ವಾತ್ಸಲ್ಯ….!ತಿಳಿಯಲು ಈ ಲೇಖನ ಓದಿ..
PUC ಪರೀಕ್ಷೆ ಬರೆಯುತ್ತಿರುವ ವಿದ್ಯಾರ್ಥಿಗಳಿಗೆ ಇಲ್ಲಿದೆ ಸರ್ಕಾರದಿಂದ ಗುಡ್ ನ್ಯೂಸ್..!ತಿಳಿಯಲು ಈ
ಈ ದಿನದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಕರಿಬೇವಿನ ಈ ಆರೋಗ್ಯಕಾರಿ ಲಾಭಗಳ ಬಗ್ಗೆ ನಿಮ್ಗೆ ಗೊತ್ತಾ..? ತಿಳಿಯಲು ಈ ಲೇಖನ ಓದಿ….
10 ವರ್ಷಗಳ ಹಿಂದೆ 16 ಕೆಜಿ ತೂಕವಿದ್ದ ಈ ಯುವತಿ ಈಗ ಹೇಗಿದ್ದಾಳೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..
ಗುರುವಾರದ ನಿಮ್ಮ ರಾಶಿ ಭವಿಷ್ಯ ಹೇಗಿದೆ ನೋಡಿ ತಿಳಿಯಿರಿ…
ಸಾಮಾನ್ಯವಾಗಿ ಬಾಳೆ ಬಾಳೆಹಣ್ಣಿನ ಬಗ್ಗೆ ಎಲ್ಲರಿಗೂ ಗೊತ್ತು..ಆದರೆ ಬಾಳೆ ಸಿಪ್ಪೆಯ ಉಪಯೋಗಗಳ ಬಗ್ಗೆ ಗೊತ್ತಾ..?
ನೀವು ಬೇಸಿಗೆ ಕಾಲಕ್ಕೆ ತಿಳಿದಿರಲೇಬೇಕಾದ ಮಜ್ಜಿಗೆಯ ರಹಸ್ಯದ ಬಗ್ಗೆ ನಿಮ್ಗೆ ಗೋತ್ತಾ..! ತಿಳಿಯಲು ಈ ಲೇಖನ ಓದಿ…
ಖ್ಯಾತಿ ತಿಥಿ ಸಿನಿಮಾದ ಗಡ್ಡಪ್ಪನಿಗೆ ಈಗ ಏನಾಗಿದೆ ಗೊತ್ತಾ..?ತಿಳಿಯಲು ಈ ಲೇಖನ ಓದಿ..
ಈ ಬಾಲಕ ವಿಶ್ವದ ಅತಿ ಕಿರಿಯ ವಿಮಾನ ಚಾಲಕ ಎನ್ನುವ ಖ್ಯಾತಿಗೆ ಪಾತ್ರನಾಗಿದ್ದಾನೆ..!ತಿಳಿಯಲು ಈ ಲೇಖನ ಓದಿ..
ಸಿನಿಮಾ

ಈ ನಟನ ಬಳಿ ಇರುವ ಐಷಾರಾಮಿ ವ್ಯಾನಿಟಿ ವ್ಯಾನ್’ನ ವಿಶೇಷತೆಗಳು ಏನು ಗೊತ್ತಾ..?ತಿಳಿಯಲು ಈ ಲೇಖನ ಓದಿ..

193

ನಟ, ನಟಿಯರು ಶೂಟಿಂಗ್‌ಗೆ ತೆರಳುವಾಗ ಅವರೊಂದಿಗೆ “ವ್ಯಾನಿಟಿ ವ್ಯಾನ್‌’ ಕೂಡಾ ತೆರಳುವುದು ಸಾಮಾನ್ಯ. ಕೆಲವರದ್ದು ಸಾಮಾನ್ಯ ಸೌಲಭ್ಯ ಇರುವ ವ್ಯಾನ್‌ ಆದರೆ ಇನ್ನು ಕೆಲವರನ್ನು ಅತ್ಯಾಧುನಿಕ ಸೌಲಭ್ಯ ಇರುವ ವ್ಯಾನಿಟಿ ವ್ಯಾನ್‌. ಈ ಅತ್ಯಾಧುನಿಕ ವ್ಯಾನಿಟಿ ವ್ಯಾನ್‌ ಹೊಂದಿರುವವರ ಸಾಲಿಗೆ ಇದೀಗ ನಟ ಶಾರುಖ್‌ ಖಾನ್‌ ಕೂಡಾ ಸೇರ್ಪಡೆಯಾಗಿದ್ದಾರೆ.

ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಅವರಿಗೆ ದುಬಾರಿ ವೆಚ್ಛದ ಐಷಾರಾಮಿ ಕಾರುಗಳೆಂದರೆ ಸಖತ್ ಕ್ರೇಜ್. ಐಷಾರಾಮಿ ಕಾರುಗಳನ್ನು ಖರೀದಿಸುವುದು, ಅವುಗಳಲ್ಲಿ ಜಾಲಿ ರೈಡ್ ಹೋಗುವುದೆಂದರೆ ಖುಷಿಯೋ ಖುಷಿ. ಅವರಲ್ಲಿರುವ ದುಬಾರಿ ವಾಹನಗಳ ಸಾಲಿಗೆ ಹೊಸದರ ಸೇರ್ಪಡೆಯಾಗುತ್ತಲೇ ಇರುತ್ತದೆ.

ಶಾರುಖ್‌ ಇತ್ತೀಚಿಗೆ ವೋಲ್ವೋ ಕಂಪನಿಯ ಬಿ 9 ಆರ್‌ ವ್ಯಾನ್‌ ಖರೀದಿಸಿದ್ದು, ಬಳಿಕ ಅದನ್ನು ಭಾರತದ ಖ್ಯಾತ ವಾಹನ ವಿನ್ಯಾಸಕಾರ ದಿಲೀಪ್‌ ಛಾಬ್ರಿಯಾ ಮರು ವಿನ್ಯಾಸಗೊಳಿಸಿದ್ದಾರೆ. ಸಕಲ ಸೌಲಭ್ಯ ಒಳಗೊಂಡಿರುವ ಈ ವ್ಯಾನ್‌ನ ಬೆಲೆ 4 ಕೋಟಿ ರೂ. ಎನ್ನಲಾಗಿದೆ

ಅಂದ ಹಾಗೇ ಶೂಟಿಂಗ್ ಸ್ಥಳಕ್ಕೆ ಕೊಂಡೊಯ್ಯಲು ಅತ್ಯಾಧುನಿಕ ಸೌಲಭ್ಯವುಳ್ಳ ವ್ಯಾನಿಟಿ ವ್ಯಾನ್ ಒಂದು ಶಾರೂಕ್ ಖಾನ್ ರ ಬಳಿ ಇದೆ. ಕ್ಯಾರಾವಾನ್ ನಲ್ಲಿ ಇರುವ ಸೌಲಭ್ಯಗಳಿಗಿಂತ ಅತಿ ಹೆಚ್ಚು ಸೌಕರ್ಯ ಹಾಗೂ ಅತ್ಯಾಧುನಿಕ ಮಾದರಿಯ ವಿನ್ಯಾಸದ ವಿಶೇಷ ವ್ಯಾನಿಟಿ ವ್ಯಾನ್ ಇದಾಗಿದೆ.

ಶಾರುಕ್ ಗಾಗಿಯೇ ರೆಡಿಯಾಗಿರುವ ಈ ಅತ್ಯಾಧುನಿಕ ವ್ಯಾನ್ ಸಿದ್ಧಪಡಿಸಿದವರು ಪ್ರಖ್ಯಾತ ವಾಹನ ವಿನ್ಯಾಸಕಾರ ದಿಲೀಪ್ ಛಬ್ರಿಯಾ. ಈ ವ್ಯಾನ್ ಅನ್ನು ಶಾರುಕ್ ಅಗತ್ಯಕ್ಕೆ ತಕ್ಕಂತೆ ಮರು ವಿನ್ಯಾಸಗೊಳಿಸಿ ಸಿದ್ಧಪಡಿಸಲು 3 ತಿಂಗಳು ತೆಗೆದುಕೊಂಡಿದ್ದಾರೆ.ಇದಕ್ಕಾಗಿ ಬರೋಬ್ಬರಿ 4 ಕೋಟಿ ರೂ. ವೆಚ್ಚ ಮಾಡಲಾಗಿದೆ. ಇದರಲ್ಲಿ ಅತ್ಯಾಧುನಿಕ ವಿಶ್ರಾಂತಿ ಕೊಠಡಿ, ವೈಫೈ, ಟಾಯ್ಲೆಟ್, ಕಿಚನ್, ಸೆಟಲೈಟ್ ಟಿವಿ ಸೇರಿದಂತೆ ಸಕಲ ಸೌಲಭ್ಯಗಳಿವೆ. ಅಲ್ಲದೇ ಪ್ರತ್ಯೇಕ ಮೇಕಪ್ ರೂಮ್ ಕೂಡಾ ಇದರಲ್ಲಿದೆ.

ಹೊರನೋಟದಂತೆ ಒಳಗೂ ಅತ್ಯಂತ ಸುಂದರವಾಗಿರುವ ಈ ವ್ಯಾನ್‌ 280 ಚದರಅಡಿ ವಿಸ್ತೀರ್ಣ ಹೊಂದಿದ್ದು, ಒಳಗಡೆ 4 ಕೋಣೆಯನ್ನು ಹೊಂದಿದೆ. ಈ ಪೈಕಿ ಒಂದು ಮೀಟಿಂಗ್‌ ರೂಂ, ಮತ್ತೂಂದು ಬೆಡ್‌ರೂಂ ಮತ್ತೂಂದು ಶೌಚಾಲಯ ಇನ್ನೊಂದು ಮೇಕಪ್‌ ಕಮ್‌ ಬಟ್ಟೆ ಬದಲಾವಣೆ ಕೋಣೆ.

ಇದರ ಜೊತೆ ವ್ಯಾನ್‌ನಲ್ಲಿ ಹೈಡ್ರಾಲಿಕ್‌ ವ್ಯವಸ್ಥೆ ಕಲ್ಪಿಸಲಾಗಿದ್ದು, ಇದರ ಮೂಲಕ ಅಗತ್ಯ ಬಿದ್ದರೆ ವಾಹನದಿಂದ ಹೊರಗೆ ಚಾಚಿಕೊಂಡಿರುವಂತೆ ಇನ್ನೊಂದು ಕೋಣೆಯನ್ನೂ ಸೃಷ್ಟಿಸ ಬಹುದಾಗಿದೆ. ಇಡೀ ವ್ಯಾನ್‌ ವೈಫೈ ವ್ಯವಸ್ಥೆ ಹೊಂದಿದ್ದು, ಎಲ್ಲಾ ನಾಲ್ಕು ಕೋಣೆಗಳಲ್ಲೂ ಆ್ಯಪಲ್‌ ಟೀವಿ ಅಳವಡಿಸಲಾಗಿದೆ. ಉಪಗ್ರಹ ಸಂಪರ್ಕ ಇರುವ 4ಕೆ ಸೀರೀಸ್‌ನ ಟೀವಿ, ಸಣ್ಣ ಕಿಚನ್‌ ಕೂಡಾ ಇದೆ. ವ್ಯಾನ್‌ಗೆ ಗ್ಲಾಸ್‌ ಫ್ಲೋರಿಂಗ್‌ ಮಾಡಲಾಗಿದೆ.

 

About the author / 

Nimma Sulochana

ads

ads

ಎಲ್ಲ