News

ದೇಶ-ವಿದೇಶ

ಈ ಚೀನಾದ ಬದ್ಮಾಶ್ ಹೇಳ್ತಾನೆ,ನಮ್ಮ ಸೈನಿಕರನ್ನು ಅವರು ಸಾಯಿಸ್ತಾರಂತೆ!!!

1900

ಸಿಕ್ಕಿಂ ಸಮೀಪದ ಡೋಕ್ಲಾಮ್ ನಲ್ಲಿ ಭಾರತ ಮಾಡಿರುವುದು ಅತಿಕ್ರಮಣವಾಗಿದ್ದು, ಹೀಗಾಗಿ ಡೋಕ್ಲಾಮ್ ಪ್ರದೇಶದಿಂದ ನಿಮ್ಮ ಸೇನೆಯನ್ನು ಹಿಂತೆಗೆದುಕೊಳ್ಳಿ ಇಲ್ಲದಿದ್ದರೆ ನಿಮ್ಮ ಸೈನಿಕರು ಸೆರೆಯಾಗುತ್ತೀರಿ ಅಥವಾ ಸಾಯುತ್ತೀರಿ’ ಎಂದು ಚೀನಾ ಬೆದರಿಕೆ ಹಾಕಿದೆ.

ಮುಂಬೈನಲ್ಲಿನ ಚೀನಾ ದೂತವಾಸ ಕಚೇರಿಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಲಿಯು ಯೂಫಾ ಅವರು ಈ ರೀತಿಯ ಎಚ್ಚರಿಕೆ ನೀಡಿದ್ದು. ಭಾರತಿಯ ಸೈನಿಕರು  ಅತಿಕ್ರಮವಾಗಿ ಪ್ರವೇಶ ಮಾಡಿದ್ದು, ಚೀನೀ ಯೋಧರು ಇದನ್ನು ಸಮರ್ಥವಾಗಿ ನಿಭಾಯಿಸಲು ಸಿದ್ದರಿದ್ದಾರೆ.

ಹೀಗಾಗಿ ಭಾರತವೇ ಸ್ವಯಂ ಪ್ರೇರಿತವಾಗಿ ತನ್ನ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು.ಅಂತರಾಷ್ಟ್ರೀಯ ಕಾನೂನನ್ನು ನಾನು ಅರ್ಥ ಮಾಡಿಕೊಂಡಂತೆ, ಬೇರೆ ದೇಶದ ಭೂಭಾಗವನ್ನು ಯಾವ ದೇಶದವರೆ ಪ್ರವೇಶಿಸಿದರೂ ಮೂರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ.

ಅಂತರಾಷ್ಟ್ರೀಯ ಕಾನೂನಿನ ಪ್ರಕಾರ, ಸಮವಸ್ತ್ರದಲ್ಲಿರುವ ಒಂದು ದೇಶದ ಯೋಧರು ಮತ್ತೊಂದು ದೇಶದ ಗಡಿಯೊಳಗೆ ಕಾಲಿಟ್ಟರೇ ಸಹಜವಾಗಿಯೇ ಅವರು ಶತ್ರುಗಳಾಗಿಬಿಡುತ್ತಾರೆ. ಅಂತಹ ಸಂದರ್ಭದಲ್ಲಿ ಅವರು ಮೂರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಗಡಿಯೊಳಕ್ಕೆ ಕಾಲಿಟ್ಟ ಯೋಧರು ಸ್ವಯಂಪ್ರೇರಿತವಾಗಿ ವಾಪಸ್ ಹೋಗಬೇಕು. ಇಲ್ಲದಿದ್ದರೆ, ಅವರನ್ನು ಬಂಧಿಸಬಹುದು. ಒಂದು ವೇಳೆ ಗಡಿ ವಿವಾದ ತೀವ್ರಗೊಂಡಿದ್ದೇ ಆದರೆ, ಅವರನ್ನು ಹತ್ಯೆ ಮಾಡಲೂ ಬಹುದು ಎಂದು ತಿಳಿಸಿದ್ದಾರೆ. ಲಿಯು ಯೂಫಾ ಅವರು ಚೀನಾ ಸರ್ಕಾರಿ ಸ್ವಾಮ್ಯದ ಆಂಗ್ಲ ವಾಹಿನಿ ಸಿಸಿಟೀವಿ  ತಿಳಿಸಿದ್ದಾರೆ.

ಡೋಕ್ಲಾಮ್ ಪ್ರದೇಶ ತನಗೆ ಸೇರಿದ್ದು ಎಂದು ಚೀನಾ ವಾದಿಸುತ್ತಿದೆ. ಹೀಗಾಗಿ ತನ್ನ ಗಡಿಯೊಳಕ್ಕೆ ಭಾರತೀಯ ಯೋಧರು ಕಾಲಿಟ್ಟಿದ್ದಾರೆ ಎಂಬ ಅಭಿಪ್ರಾಯ ಆ ದೇಶದವರಲ್ಲಿದೆ. ಅದನ್ನೇ ಆಧಾರವಾಗಿಟ್ಟುಕೊಂಡು ಚೀನಾದ ಮಾಜಿ ರಾಯಭಾರಿ ಈ ರೀತಿ ಹೇಳಿದ್ದಾರೆ.

ಸಿಕ್ಕಿಂನ ಡೋಕ್ಲಾಮ್ ಪ್ರದೇಶದಲ್ಲಿರುವ ವಿವಾದಿತ ಪ್ರದೇಶ ತ್ರಿರಾಷ್ಟ್ರ (ಭಾರತ-ಚೀನಾ-ಭೂತಾನ್)ಕ್ಕೆ ಸಂಬಂಧಿಸಿದ್ದು, ಆದರೆ, ಚೀನಾ ತ್ರಿರಾಷ್ಟ್ರ ಗಡಿ ಸಂಧಿ ಸ್ಥಳದ ಯಾಥಾಸ್ಥಿತಿಯನ್ನು ಮಾರ್ಪಾಡು ಮಾಡಲು ಯತ್ನಿಸುತ್ತಿದೆ. ಆದರೆ ಭಾರತದ ಪ್ರಕಾರ, ಡೋಕ್ಲಾಮ್ ಪ್ರದೇಶ ಮೂರು ದೇಶಗಳ ಸಂಗಮದಲ್ಲಿ ಸೇರಲಿದ್ದು ಆ ಕಾರಣದಿಂದ ಅದರ ಹಕ್ಕು ಭಾರತದ ಮಿತ್ರ ದೇಶ ಭೂತಾನ್‌’ದ್ದಾಗಿದೆ.

 

 

 

About the author / 

admin

Categories

Date wise

  • ಟೊಮೇಟೋ ಅಂಚೆ ಲಕೋಟೆ ಬಿಡುಗಡೆ

    ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…

ಏನ್ ಸಮಾಚಾರ