ಲೋಕಸಭಾ ಚುನಾವಣೆಗೆ ದಿನಗಣನೆ ಶುರುವಾಗಿದ್ದು, ಅಭ್ಯರ್ಥಿಗಳು ತಮ್ಮ ಚಿಹ್ನೆಯೊಂದಿಗೆ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ಮಂಡ್ಯ ಲೋಕಸಭಾ ಚುನಾವಣಾ ಕಣದಲ್ಲಿ ಅಭ್ಯರ್ಥಿಗಳಿಗೆ ಇವಿಎಂನಲ್ಲಿ ಸ್ಥಾನ ನೀಡಲಾಗಿದೆ.
ಅದರಲ್ಲಿ ಮೊದಲ ಹೆಸರೇ ಮುಖ್ಯಮಂತ್ರಿ ಪುತ್ರ ನಿಖಿಲ್ ಕುಮಾರಸ್ವಾಮಿಯವರದ್ದಾದ್ರೆ, ಕೊನೆಯಿಂದ ಎರಡನೇಯವರಾಗಿ ಸುಮಲತಾ ಹೆಸರಿದೆ…!
ಇವಿಎಂನ ಕ್ರಮ ಸಂಖ್ಯೆ 1 ರಲ್ಲೇ ನಿಖಿಲ್ ಕುಮಾರಸ್ವಾಮಿಯವರ ಹೆಸರು ನೀಡಲಾಗಿದೆ. ಆದ್ರೆ ಸುಮಲತಾ ಅಂಬರೀಷ್ ಹೆಸರನ್ನು ಇವಿಎಂನಲ್ಲಿ ಕೊನೆಯಿಂದ ಎರಡನೇಯದಾಗಿ ಹಾಕಲಾಗಿದೆ. ಅಲ್ಲದೆ ಸುಮಲತಾ ಅಂಬರೀಷ್ ಹೆಸರಿನ ಮೊದಲು ಮತ್ತು ಕೊನೆಗೆ ಸುಮಲತಾ ಎಂಬ ಪಕ್ಷೇತರ ಅಭ್ಯರ್ಥಿಗಳ ಹೆಸರಿದೆ. ಇದು ಮತದಾರರಿಗೆ ಗೊಂದಲವಾಗಬಹುದು ಅಂತಾ ಹೇಳಲಾಗ್ತಿದೆ.
ಆದ್ರೆ ಈ ಬಾರಿ ವಿಶೇಷ ಅಂದ್ರೆ ಅಭ್ಯರ್ಥಿಗಳ ಫೋಟೋ ಕೂಡಾ ಇವಿಎಂನಲ್ಲಿ ಬರುತ್ತದೆ. ಹೀಗಾಗಿ ಮತದಾರರಿಗೆ ಗೊಂದಲ ಸೃ಼ಷ್ಟಿಯಾಗಲ್ಲ ಅನ್ನೋದು ಚುನಾವಣಾಧಿಕಾರಿಗಳ ಭರವಸೆ.
ನಿಖಿಲ್ ಕೆ- ಜೆಡಿಎಸ್ – ತೆನೆ ಹೊತ್ತ ಮಹಿಳೆ
ನಂಜುಂಡಸ್ವಾಮಿ – ಬಿಎಸ್ಪಿ – ಆನೆ
ಗುರುಲಿಂಗಯ್ಯ – ಐಎನ್ಸಿಪಿ – ಕಬ್ಬು ಬೆಳೆಗಾರ
ಡಿ ಸಿ ಜಯಶಂಕರ – ಐಎನ್ಪಿ – ಚಪಾತಿ ರೋಲರ್
ಸಿ ಪಿ ದಿವಾಕರ್ – ಉತ್ತಮ ಪ್ರಜಾಕೀಯ ಪಾರ್ಟಿ – ಆಟೋ ರಿಕ್ಷಾ
ಸಂತೋಷ್ ಹೆಚ್ಪಿ – ಇಂಜಿನಿಯರ್ಸ್ ಪಾರ್ಟಿ – ಟ್ರಾಕ್ಟರ್ ಚಲಾಯಿಸುವ ರೈತ
ಕೋಲಾರ ನಗರದ ಪ್ರಧಾನ ಅಂಚೆ ಕಚೇರಿಯಲಿ ಶನಿವಾರ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಡಿ ಕೋಲಾರ ಜಿಲ್ಲೆಯ ಟೊಮೇಟೋ ಕುರಿತು ವಿಶೇಷ ಅಂಚೆ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು. ಇತ್ತೀಚಿನ ದಿನಗಳಲ್ಲಿ ಟೊಮೇಟೋ ಕೋಲಾರ ಜಿಲ್ಲೆಯ ಪ್ರಧಾನ ತೋಟಗಾರಿಕೆ ಬೆಳೆಯಾಗಿ ಹೊರ ಹೊಮ್ಮಿದೆ. ರೈತರು ವರ್ಷದ ೩೬೫ ದಿನವೂ ಟೊಮೇಟೋವನ್ನು ಬೆಳೆಯುತ್ತಿದ್ದಾರೆ. ಕೋಲಾರದ ಎಪಿಎಂಸಿ ಮಾರುಕಟ್ಟೆಯೂ ಏಷ್ಯಾದ ಎರಡನೇ ಅತಿ ದೊಡ್ಡ ಟೊಮೇಟೋ ಮಾರುಕಟ್ಟೆಯಾಗಿ ಪ್ರಸಿದ್ಧಿ ಪಡೆದಿದೆ. ಈ ಹಿನ್ನೆಲೆಯಲ್ಲಿ ಟೊಮೇಟೋ ಬೆಳೆಯನ್ನು ಕೋಲಾರದ ಒಂದು ಜಿಲ್ಲೆ ಒಂದು…
ಬಿಪಿಎಲ್ ಪಡಿತರ ಚೀಟಿದಾರರು ಇನ್ನು ಮುಂದೆ ರಾಜ್ಯದ ಯಾವುದೇ ನ್ಯಾಯಬೆಲೆ ಅಂಗಡಿಯಲ್ಲಾದರೂ ತಮ್ಮ ಪಾಲಿನ ಪಡಿತರ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಕನ್ನಡ ಚಿತ್ರ ನಟ ಸೂಪರ್ಸ್ಟಾರ್ ಉಪೇಂದ್ರರವರು ಇತ್ತೀಚೆಗಷ್ಟೇ ಪ್ರಜಾಕೀಯ ಎಂಬ ಹೊಸ ಪಕ್ಷವನ್ನು ಘೋಷಿಸಿದ್ದರು. ಹಾಗಾಗಿ ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಹಾಗೂ ಸ್ವತಃ ಉಪೇಂದ್ರರವರ ಅಭಿಮಾನಿಯಾಗಿರುವರೊಬ್ಬರು, ಉಪೇಂದ್ರರವರ ರಾಜಕೀಯ ಮತ್ತು ಅವರ ಹೊಸ ಪಕ್ಷದ ಕುರಿತು ಪತ್ರವೊಂದನ್ನು ಬರೆದಿದ್ದಾರೆ.
ಕೋಲಾರ: ಕೋಲಾರ ತಾಲೂಕಿನ ಖಾಜಿಕಲ್ಲಹಳ್ಳಿ ಗ್ರಾಮದ ಬಳಿಯ ಮಾಲೂರು ಅರಣ್ಯ ವಲಯದಲ್ಲಿ ಸುಮಾರು 20 ಎಕರೆ ಪ್ರದೇಶದಲ್ಲಿ WRRC (Wildlife Rescue and Rehabilitation Centre) ಅವರು ಆನೆಗಳ ಆರೈಕೆ ಕೇಂದ್ರವನ್ನು ಸ್ಥಾಪನೆ ಮಾಡಿದ್ದಾರೆ. ಈ ಕೇಂದ್ರದಲ್ಲಿ ದುರ್ಗಾ, ಅನೀಶಾ, ಗೌರಿ ಹಾಗೂ ಜಾನುಮಣಿ ಎಂಬ ನಾಲ್ಕು ಹೆಣ್ಣಾನೆಗಳಿವೆ. ಬೆಂಗಳೂರಿನಿಂದ ದುರ್ಗಾ, ತಮಿಳುನಾಡಿನ ತೂತುಕುಡಿಯಿಂದ ಅನಿಶಾ, ನಂಜನಗೂಡಿನಿಂದ ಗೌರಿ ಹಾಗೂ ಗೋವಾದಿಂದ ಜಾನುಮಣಿ ಎಂಬ ಆನೆಗಳನ್ನು ಇಲ್ಲಿಗೆ ತಂದು ಆರೈಕೆ ಮಾಡಲಾಗುತ್ತಿದೆ. ಸದ್ಯ ನಾಲ್ಕು ಆನೆಗಳಿದ್ದು, ಮುಂದಿನ…
ಸರ್ಕಾರಿ ನೌಕರರ ನಿವೃತ್ತಿ ವಯಸ್ಸನ್ನು ಇಳಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ. 33 ವರ್ಷ ಸೇವೆ ಸಲ್ಲಿಸಿದವರ ಅಥವಾ 60 ವರ್ಷ ತುಂಬಿದವರನ್ನು ಸೇವೆಯಿಂದ ನಿವೃತ್ತಿಗೊಳಿಸುವ ಕುರಿತು ಸಿಬ್ಬಂದಿ ಮತ್ತು ತರಬೇತಿ ಇಲಾಖೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಲಾಗಿತ್ತು. ಆದರೆ, ಈ ಕುರಿತ ಗೊಂದಲಗಳಿಗೆ ತೆರೆ ಬಿದ್ದಿದೆ. ನಿವೃತ್ತಿ ವಯಸ್ಸನ್ನು ಕಡಿಮೆ ಮಾಡುವ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಊಹಾಪೋಹ ಮತ್ತು ವದಂತಿಗಳು ಹರಡಿದ ಬಗ್ಗೆ ಕೇಂದ್ರ ಸರ್ಕಾರ…
ವಯಸ್ಸಿಗೆ ಸಭಂದಪಟ್ಟ ವಿಷಯ ಬಂದಾಗ ಯಾರನ್ನಾದರೂ ನೋಡಿದ್ರೆ, ಅಂದಾಜು ಅವರ ವಯಸ್ಸನ್ನು ಗುರುತಿಸುವುದು ಕಷ್ಟದ ಕೆಲಸವೇನಲ್ಲ. ಆದ್ರೆ ಕೆಲವೊಬ್ಬರನ್ನು ನೋಡಿದಾಗ ಅದು ಕಷ್ಟ ಸಾಧ್ಯವೆನಿಸಬಹುದು. ಅಂತವರೇ ಆದ ಒಬ್ಬರ ಬಗ್ಗೆ ನಾವು ಹೇಳುತ್ತಿದ್ದೇವೆ.